ಬಾಲಿವುಡ್ ನಟ ಅಜಯ್ ದೇವಗನ್ ಅವರ ಬಹುನಿರೀಕ್ಷಿತ 'ಭೋಲಾ' ಸಿನಿಮಾ ಮಾರ್ಚ್ 30 ರಂದು ಬಿಡುಗಡೆಯಾಗಿದೆ. ಈ ಚಿತ್ರ ತಮಿಳಿನ 'ಕೈದಿ' ಸಿನಿಮಾದ ಹಿಂದಿ ರಿಮೇಕ್ ಆಗಿದೆ. 'ಭೋಲಾ' ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಮಿಶ್ರ ಪ್ರತಿಕ್ರಿಯೆಯನ್ನು ಗಳಿಸಿದೆ. ನಾಲ್ಕು ದಿನಗಳಲ್ಲಿ ಚಿತ್ರವು 44.28 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ. ವಾರಾಂತ್ಯದಲ್ಲಿ ಸಿನಿಮಾವು ಒಳ್ಳೆಯ ಕಲೆಕ್ಷನ್ ಮಾಡಿದ್ದು, ಸೋಮವಾರವೂ 5 ಕೋಟಿ ಗಳಿಸಿದೆ. ಹೀಗಾಗಿ ಭೋಲಾ ಚಿತ್ರವು ಸರಿಸುಮಾರು 49 ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ.
-
#Bholaa puts up a healthy score in its *extended* 4-day weekend… The spike on Sat and Sun added strength to its overall total… Thu 11.20 cr, Fri 7.40 cr, Sat 12.20 cr, Sun 13.48 cr. Total: ₹ 44.28 cr. #India biz.#Bholaa needs to maintain the momentum over weekdays… In fact,… pic.twitter.com/RQKL7quyrq
— taran adarsh (@taran_adarsh) April 3, 2023 " class="align-text-top noRightClick twitterSection" data="
">#Bholaa puts up a healthy score in its *extended* 4-day weekend… The spike on Sat and Sun added strength to its overall total… Thu 11.20 cr, Fri 7.40 cr, Sat 12.20 cr, Sun 13.48 cr. Total: ₹ 44.28 cr. #India biz.#Bholaa needs to maintain the momentum over weekdays… In fact,… pic.twitter.com/RQKL7quyrq
— taran adarsh (@taran_adarsh) April 3, 2023#Bholaa puts up a healthy score in its *extended* 4-day weekend… The spike on Sat and Sun added strength to its overall total… Thu 11.20 cr, Fri 7.40 cr, Sat 12.20 cr, Sun 13.48 cr. Total: ₹ 44.28 cr. #India biz.#Bholaa needs to maintain the momentum over weekdays… In fact,… pic.twitter.com/RQKL7quyrq
— taran adarsh (@taran_adarsh) April 3, 2023
ದೇಶದ ಕೆಲವೆಡೆ ಮಂಗಳವಾರ ರಜೆ ಇರುವುದರಿಂದ ಸಿನಿಮಾ 50 ಕೋಟಿ ರೂಗಳ ಮೈಲಿಗಲ್ಲು ದಾಟುವ ನಿರೀಕ್ಷೆ ಇದೆ. ಬಿಡುಗಡೆಯಾದ ಮೊದಲ ದಿನ 11.20 ಕೋಟಿ, ಶುಕ್ರವಾರ 7.40 ಕೋಟಿ, ಶನಿವಾರ 12.20 ಕೋಟಿ, ಭಾನುವಾರ 13.48 ಕೋಟಿ ಮತ್ತು ಸೋಮವಾರ 5 ಕೋಟಿ ರೂಪಾಯಿಗಳನ್ನು ಗಳಿಸಿದೆ. ವಾರಾಂತ್ಯದಲ್ಲಿ ಕೊಂಚ ಹೆಚ್ಚೇ ಜನರು ಸಿನಿಮಾ ವೀಕ್ಷಿಸಿದ್ದಾರೆ. ಹೀಗಾಗಿ ಮುಂದಿನ ವಾರಾಂತ್ಯ ದಾಟುವಾಗ 100 ಕೋಟಿ ತಲುಪುವ ನಿರೀಕ್ಷೆ ಚಿತ್ರತಂಡಕ್ಕಿದೆ.
ಇನ್ನು ತಮಿಳಿನ 'ಕೈದಿ' ಚಿತ್ರವನ್ನೇ ಕೊಂಚ ಬದಲಾಯಿಸಿ ಹಿಂದಿಯಲ್ಲಿ 'ಭೋಲಾ' ಎಂಬುದಾಗಿ ಸಿನಿಮಾ ಮಾಡಲಾಗಿದೆ. ಜೊತೆಗೆ ಹೆಚ್ಚಿನ ಸಿನಿ ಪ್ರೇಕ್ಷಕರು ಈ ಸಿನಿಮಾವನ್ನು ಈಗಾಗಲೇ ತಮಿಳಿನಲ್ಲಿ ವೀಕ್ಷಿಸಿರುವ ಕಾರಣ ನಿರೀಕ್ಷೆ ಮಟ್ಟದಲ್ಲಿ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಅಲ್ಲದೇ ಈಗಾಗಲೇ ಐಪಿಲ್ 2023 ಪ್ರಾರಂಭವಾಗಿದ್ದು, ಥಿಯೇಟರ್ಗೆ ತೆರಳಿ ಸಿನಿಮಾ ನೋಡುವವರ ಸಂಖ್ಯೆಯೂ ಕಡಿಮೆಯಾಗಿದೆ. ಭೋಲಾ ಸಿನಿಮಾವು ಜೈಲಿನಿಂದ ಬಿಡುಗಡೆ ಆಗಿರುವ ಕೈದಿ ಮತ್ತು ಅನಾಥ ಹುಡುಗಿಯ ಕಥೆಯನ್ನು ಹೇಳುತ್ತದೆ.
ಚಿತ್ರದಲ್ಲಿ ಅಜಯ್ ದೇವಗನ್, ಟಬು ಮತ್ತು ದಕ್ಷಿಣ ನಟಿ ಅಮಲಾ ಪೌಲ್, ಲಕ್ಷ್ಮಿ ಮತ್ತು ಮಾರ್ಕಂಡಾ ದೇಶಾಪಾಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಂಜಯ್ ಮಿಶ್ರಾ, ದೀಪಕ್ ದೊಬ್ರಿಯಾಲ್ ರಾಯ್ ಅವರು ಕೂಡ ನಟಿಸಿದ್ದಾರೆ. ಇನ್ನು ಭೋಲಾ ಸಿನಿಮಾವನ್ನು ಅಜಯ್ ದೇವಗನ್ ಸ್ವತಃ ನಿರ್ದೇಶಿಸಿದ್ದಾರೆ. 2008 ರಲ್ಲಿ 'ಯು, ಮಿ ಔರ್ ಹಮ್', 2016 ರಲ್ಲಿ 'ಶಿವಾಯ್' 2022 ರಲ್ಲಿ 'ರಣ್ವಾವ್ 34' ಮತ್ತು 'ಭೋಲಾ' ಅಜಯ್ ನಿರ್ದೇಶನದ ನಾಲ್ಕನೇ ಚಿತ್ರವಾಗಿದೆ. ಸಿನಿಮಾವನ್ನು 200 ಕೋಟಿ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗಿದೆ.
ಇನ್ನು ಕಳೆದ ವರ್ಷ ನವೆಂಬರ್ 18 ರಂದು ಬಿಡುಗಡೆಯಾಗಿದ್ದ ದೇವಗನ್ ಅಭಿನಯದ ದೃಶ್ಯಂ 2 ಸಿನಿಮಾ ಭಾರೀ ಹಿಟ್ ಆಗಿತ್ತು. 7 ದಿನಕ್ಕೆ 100 ಕೋಟಿ ಕ್ಲಬ್ ಸೇರಿತ್ತು. ಮಲಯಾಳಂ ಭಾಷೆಯಲ್ಲಿ ತಯಾರಾಗಿದ್ದ 'ದೃಶ್ಯಂ' ಮತ್ತು 'ದೃಶ್ಯಂ 2' ನಲ್ಲಿ ಸೌತ್ ಸೂಪರ್‌ಸ್ಟಾರ್ ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ತೆರೆ ಮೇಲೆ ಕಂಡಿದ್ದರು. ಅದನ್ನೇ ಹಿಂದಿಯಲ್ಲಿ ರಿಮೇಕ್ ಮಾಡಲಾಗಿತ್ತು. ಈ ಸಿನಿಮಾ ಅಜಯ್ ದೇವಗನ್ ಅವರಿಗೆ ಬಹು ದೊಡ್ಡ ಸಕ್ಸಸ್ ಅನ್ನು ತಂದು ಕೊಟ್ಟಿತು. ಇದರ ಹೊರತಾಗಿ ನಟ ಅಜಯ್ ದೇವಗನ್ ಅವರು ನಿರ್ಮಾಪಕ ಬೋನಿ ಕಪೂರ್ ಅವರ ಕ್ರೀಡಾಧಾರಿತ ಚಿತ್ರ 'ಮೈದಾನ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ರೋಹಿತ್ ಶೆಟ್ಟಿಯ 'ಸಿಂಗಂ ಎಗೈನ್'ನಲ್ಲಿ ದೀಪಿಕಾ ಪಡುಕೋಣೆಗೆ ಜೋಡಿಯಾಗಲಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ನನಗೆ ಇಷ್ಟವಿಲ್ಲದ ಜನರೊಂದಿಗೆ ಕೆಲಸ ಮಾಡಲ್ಲ: ನಟಿ ಪ್ರಿಯಾಂಕಾ ಚೋಪ್ರಾ