ETV Bharat / entertainment

ಅಜಯ್​ ದೇವಗನ್ ನಟನೆಯ​ 'ಭೋಲಾ'ಗೆ ಮಿಶ್ರ ಪ್ರತಿಕ್ರಿಯೆ: ಮೊದಲ ಕಲೆಕ್ಷನ್​ ಎಷ್ಟು ಗೊತ್ತಾ? - ಈಟಿವಿ ಭಾರತ ಕನ್ನಡ

ಅಜಯ್​ ದೇವಗನ್​ ನಟನೆಯ 'ಭೋಲಾ' ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಗಳಿಸಿದೆ.

bholaa
ಭೋಲಾ
author img

By

Published : Mar 31, 2023, 4:18 PM IST

ಬಾಲಿವುಡ್​ ನಟ ಅಜಯ್​ ದೇವಗನ್​ ಅವರ ಬಹುನಿರೀಕ್ಷಿತ 'ಭೋಲಾ' ಸಿನಿಮಾ ನಿನ್ನೆ (ಗುರುವಾರ) ಬಿಡುಗಡೆಯಾಗಿದೆ. ಈ ಚಿತ್ರ ತಮಿಳಿನ 'ಕೈದಿ' ಸಿನಿಮಾದ ಹಿಂದಿ ರಿಮೇಕ್​ ಆಗಿದೆ. 'ಭೋಲಾ' ಮೊದಲ ದಿನ ನಿರೀಕ್ಷಿತ ಕಲೆಕ್ಷನ್​ ಮಾಡದಿದ್ದರೂ, ಮಿಶ್ರ ಪ್ರತಿಕ್ರಿಯೆಯನ್ನು ಗಳಿಸಿದೆ. ಬಾಕ್ಸ್​ ಆಫೀಸ್​ ಇಂಡಿಯಾ ಪ್ರಕಾರ ಚಿತ್ರವು 10 ಕೋಟಿ ರೂಪಾಯಿ ಗಳಿಸಿದೆ. ಮತ್ತೊಂದೆಡೆ ಇಂಡಸ್ಟ್ರೀ ಟ್ರ್ಯಾಕರ್​ ಸಾಕ್ನಿಲ್ಕ್​ ಪ್ರಕಾರ 11 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

ದೃಶ್ಯಂ 2 ನಂತಹ ಅದ್ಭುತ ಸಿನಿಮಾವನ್ನು ನೀಡಿರುವ ಅಜಯ್​ ದೇವಗನ್​ಗೆ 'ಭೋಲಾ' ಸಿನಿಮಾ ಹೇಳಿಕೊಳ್ಳುವಂತಹ ಸಕ್ಸಸ್​ ನೀಡಿಲ್ಲ. ತಮಿಳಿನ 'ಕೈದಿ' ಚಿತ್ರವನ್ನೇ ಕೊಂಚ ಬದಲಾಯಿಸಿ ಹಿಂದಿಯಲ್ಲಿ 'ಭೋಲಾ' ಎಂಬುದಾಗಿ ಸಿನಿಮಾ ಮಾಡಲಾಗಿದೆ. ಜೊತೆಗೆ ಹೆಚ್ಚಿನ ಸಿನಿ ಪ್ರೇಕ್ಷಕರು ಈ ಸಿನಿಮಾವನ್ನು ಈಗಾಗಲೇ ತಮಿಳಿನಲ್ಲಿ ವೀಕ್ಷಿಸಿರುವ ಕಾರಣ ನಿರೀಕ್ಷೆ ಮಟ್ಟದಲ್ಲಿ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಅಲ್ಲದೇ ಇಂದಿನಿಂದ ಐಪಿಲ್​ 2023 ಪ್ರಾರಂಭವಾಗಲಿದ್ದು, ಥಿಯೇಟರ್​ಗೆ ತೆರಳಿ ಸಿನಿಮಾ ನೋಡುವವರ ಸಂಖ್ಯೆಯು ಕಡಿಮೆಯಾಗುವ ಸಾಧ್ಯತೆಯಿದೆ. ಇದರ ಹೊರತಾಗಿ ವೀಕೆಂಡ್​ನಲ್ಲಿ ಒಳ್ಳೆಯ ರೀತಿಯಲ್ಲಿ ಕಲೆಕ್ಷನ್​ ಮಾಡುವ ಅವಕಾಶ ಕೂಡ ಜಾಸ್ತಿ ಇದೆ. ಭೋಲಾ ಸಿನಿಮಾವು ಜೈಲಿನಿಂದ ಬಿಡುಗಡೆ ಆಗಿರುವ ಕೈದಿ ಮತ್ತು ಆತನ ಮಗಳ ಕಥೆಯನ್ನು ಹೇಳುತ್ತದೆ.

ಚಿತ್ರದಲ್ಲಿ ಅಜಯ್ ದೇವಗನ್, ಟಬು ಮತ್ತು ದಕ್ಷಿಣ ನಟಿ ಅಮಲಾ ಪೌಲ್, ಲಕ್ಷ್ಮಿ ಮತ್ತು ಮಾರ್ಕಂಡಾ ದೇಶಾಪಾಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಂಜಯ್​ ಮಿಶ್ರಾ, ದೀಪಕ್​ ದೊಬ್ರಿಯಾಲ್​ ರಾಯ್​ ಅವರು ಕೂಡ ನಟಿಸಿದ್ದಾರೆ. ಇನ್ನು ಭೋಲಾ ಸಿನಿಮಾವನ್ನು ಅಜಯ್ ದೇವಗನ್ ಸ್ವತಃ ನಿರ್ದೇಶಿಸಿದ್ದಾರೆ. 2008 ರಲ್ಲಿ 'ಯು, ಮಿ ಔರ್ ಹಮ್', 2016 ರಲ್ಲಿ 'ಶಿವಾಯ್' 2022 ರಲ್ಲಿ 'ರಣ್ವಾವ್ 34' ಮತ್ತು 'ಭೋಲಾ' ಅಜಯ್ ನಿರ್ದೇಶನದ ನಾಲ್ಕನೇ ಚಿತ್ರವಾಗಿದೆ. ಸಿನಿಮಾವನ್ನು 200 ಕೋಟಿ ಬಜೆಟ್​ನಲ್ಲಿ ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ: ಪರಿಣಿತಿ ನಿಶ್ಚಿತಾರ್ಥ ವದಂತಿ ಬೆನ್ನಲ್ಲೇ ಪುತ್ರಿಯೊಂದಿಗೆ ಮೊದಲ ಬಾರಿ ತವರಿಗೆ ಬಂದ ಪ್ರಿಯಾಂಕಾ ಚೋಪ್ರಾ

ಇನ್ನು ಕಳೆದ ವರ್ಷ ನವೆಂಬರ್​ 18 ರಂದು ಬಿಡುಗಡೆಯಾಗಿದ್ದ ಅಜಯ್​ ದೇವಗನ್​ ನಟನೆಯ ದೃಶ್ಯಂ 2 ಸಿನಿಮಾ ಭಾರೀ ಹಿಟ್​ ಆಗಿತ್ತು. 7 ದಿನಕ್ಕೆ 100 ಕೋಟಿ ಕ್ಲಬ್​ ಸೇರಿತ್ತು. ಮಲಯಾಳಂ ಭಾಷೆಯಲ್ಲಿ ತಯಾರಾಗಿದ್ದ 'ದೃಶ್ಯಂ' ಮತ್ತು 'ದೃಶ್ಯಂ 2' ನಲ್ಲಿ ಸೌತ್ ಸೂಪರ್‌ಸ್ಟಾರ್ ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ತೆರೆ ಮೇಲೆ ಕಂಡಿದ್ದರು. ಅದನ್ನೇ ಹಿಂದಿಯಲ್ಲಿ ರಿಮೇಕ್​ ಮಾಡಲಾಗಿತ್ತು.

ಈ ಸಿನಿಮಾ ಅಜಯ್​ ದೇವಗನ್​ ಅವರಿಗೆ ಬಹು ದೊಡ್ಡ ಸಕ್ಸಸ್​ ಅನ್ನು ತಂದು ಕೊಟ್ಟಿತು. ಇದೀಗ ಬಿಡುಗಡೆಯಾದ ಭೋಲಾ ಸಿನಿಮಾ ಅಷ್ಟೊಂದು ಕಲೆಕ್ಷನ್​ ಮಾಡಿಲ್ಲ. ಇದರ ಹೊರತಾಗಿ ನಟ ಅಜಯ್​ ದೇವಗನ್​​ ಅವರು ನಿರ್ಮಾಪಕ ಬೋನಿ ಕಪೂರ್​ ಅವರ ಕ್ರೀಡಾಧಾರಿತ ಚಿತ್ರ 'ಮೈದಾನ್'​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ರೋಹಿತ್​ ಶೆಟ್ಟಿಯ 'ಸಿಂಗಂ ಎಗೈನ್'​ನಲ್ಲಿ ದೀಪಿಕಾ ಪಡುಕೋಣೆಗೆ ಜೋಡಿಯಾಗಲಿದ್ದಾರೆ.

ಇದನ್ನೂ ಓದಿ: 'ಗುರುದೇವ್​ ಹೊಯ್ಸಳ'ನಿಗೆ ಭರ್ಜರಿ ರೆಸ್ಪಾನ್ಸ್​: ನಿರ್ಮಾಪಕರಿಂದ ಡಾಲಿಗೆ ದುಬಾರಿ ಮೌಲ್ಯದ ಕಾರ್ ಗಿಫ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.