ETV Bharat / entertainment

ನಮ್ಮ ಹುಡುಗರನ್ನ ಮುಟ್ಟಿದ್ರೆ ನಾನು ಮೆಂಟಲ್ ಆಗ್ತೀನಿ : ಸದ್ದು ಮಾಡ್ತಿದೆ ಭೀಮ ಖಡಕ್​ ಡೈಲಾಗ್​ - ಭೀಮ ಖಡಕ್​ ಡೈಲಾಗ್​

ದುನಿಯಾ ವಿಜಯ ನಿರ್ದೇಶಿಸಿ ನಟಿಸುತ್ತಿರುವ ಭೀಮ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದ್ದು, ಸದ್ಯ ಪೋಸ್ಟ್‌ ಪ್ರೊಡಕ್ಷನ್ ಹಂತಕ್ಕೆ ತಲುಪಿದೆ.

ದುನಿಯಾ ವಿಜಯ್
ದುನಿಯಾ ವಿಜಯ್
author img

By

Published : May 23, 2023, 12:22 PM IST

ದುನಿಯಾ ವಿಜಯ್​ ವೈರಲ್​ ವಿಡಿಯೋ

ದುನಿಯಾ ವಿಜಯ್​ಗೆ ಕನ್ನಡ ಚಿತ್ರರಂಗ ಅಲ್ಲದೇ ಬೇರೆ ಭಾಷೆಯಲ್ಲಿ ಬೇಡಿಕೆ ತಂದುಕೊಟ್ಟ ಸಿನಿಮಾ ಸಲಗ. ವಿಜಯ್ ಫಸ್ಟ್ ಟೈಮ್ ತಾವೇ ನಿರ್ದೇಶಿಸಿ ನಟಿಸಿರುವ ಸಲಗ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿತ್ತು. ಈ ಚಿತ್ರದ ಬೆನ್ನಲ್ಲೇ ಟಾಲಿವುಡ್ ಸೂಪರ್ ಸ್ಟಾರ್ ಬಾಲಯ್ಯ ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಅಬ್ಬರಿಸಿದ್ದ ವಿಜಿ ಸಿನಿ ಪ್ರಿಯರ ಮೆಚ್ಚುಗೆ ಗಳಿಸಿದರು. ತಮ್ಮ ನಿರ್ದೇಶನದ ಸಲಗ ಸ್ಯಾಂಡಲ್​​ವುಡ್​ನಲ್ಲಿ ಸಕ್ಸಸ್​ ಕಂಡಿದ್ದರಿಂದ ಇದೀಗ ವಿಜಯ್​ ಅವರು ಮತ್ತೊಂದು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, ಅದಕ್ಕೆ ಭೀಮ ಎಂಬ ಮಾಸ್​ ಶಿರ್ಷಿಕೆ ಸಹ ನೀಡಲಾಗಿದೆ. ಭೀಮ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯಗೊಂಡಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿರೋ ಚಿತ್ರದಲ್ಲಿ, ದುನಿಯಾ ವಿಜಯ್ ತಮ್ಮ‌ ಪಾತ್ರಕ್ಕೆ ಡಬ್ಬಿಂಗ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ‌.

ಡಬ್ಬಿಂಗ್​ ವೇಳೆ ದುನಿಯಾ ವಿಜಯ್​ ಹೊಡೆದಿರುವ ಡೈಲಾಗ್​ ವಿಡಿಯೋ ಎಲ್ಲೆಡೆ ಹರಿದಾಡಿದೆ. "ಏಯ್ ಬ್ಯಾಡ ಕಣೋ ಮಗಾ.. ನಮ್ಮ ಹುಡುಗರನ್ನು ಮುಟ್ಟಿದ್ರೆ, ನಾನು ಮೆಂಟಲ್ ಆಗುತ್ತೇನೆ. ನಾನು ಮೆಂಟಲ್ ಆದ್ರೆ, ನಾಳೆ ನೀನು ಕ್ಯಾಲೆಂಡರ್ ಡೇಟ್ ನೋಡಲ್ಲ" ಎಂಬ ಮಾಸ್ ಡೈಲಾಗ್‌ಗೆ ಮಾಸ್ ಆಡಿಯನ್ಸ್ ಫಿದಾ ಆಗಿದ್ದಾರೆ.

ಭೀಮ‌ ಸಿನಿಮಾ‌ ಕೂಡ ಒಂದು ನೈಜ ಘಟನೆ ಆಧಾರಿತ ಸಿನಿಮಾ ಆಗಿದ್ದು, ದುನಿಯಾ ವಿಜಯ್ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್​ ನಟನೆಯ 28ನೇ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದಾರೆ. ಡ್ರಾಗನ್ ಪಾತ್ರ ಮಾಡುತ್ತಿರುವ ಮಣಿ, ಸುಧಿ, ಮಾಡೆಲ್ ಆಶಾ ಸೇರಿದಂತೆ ರಂಗಭೂಮಿ ಕಲಾವಿದರನ್ನು ಗುರುತಿಸಿ ತಮ್ಮ ಚಿತ್ರದಲ್ಲಿ ಅಭಿನಯ ಮಾಡಿಸುತ್ತಿದ್ದಾರೆ. ಇನ್ನು ರಂಗಭೂಮಿ ಕಲಾವಿದೆ ಅಶ್ವಿನಿ ವಿಜಯ್​ಗೆ ಜೋಡಿಯಾಗಿದ್ದಾರೆ.

ಇನ್ನು, ಸಿನಿಮಾ ಚಿತ್ರೀಕರಣಕ್ಕೂ ಮುಂಚೆ 1.50ಕೋಟಿಗೆ ದಾಖಲೆಯ ಮೊತ್ತಕ್ಕೆ ಭೀಮ ಚಿತ್ರದ ಆಡಿಯೋ ಸೋಲ್ಡೌಟ್ ಆಗಿದೆ. ಆನಂದ್ ಆಡಿಯೋ ಸಂಸ್ಥೆ ಭೀಮ ಚಿತ್ರದ ಆಡಿಯೋವನ್ನ ಖರೀದಿಸಿದೆ. ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಬೆಂಗಳೂರಿನಲ್ಲೇ ಚಿತ್ರೀಕರಿಸಲಾಗಿದೆ. ದುನಿಯಾ ವಿಜಯ್ ಜೊತೆ ಜಯಮ್ಮನಮಗ ಸಿನಿಮಾ ಖ್ಯಾತಿಯ ಕಲ್ಯಾಣಿ, ಅಚ್ಯುತ್ ಕುಮಾರ್, ಬ್ಲ್ಯಾಕ್ ಡ್ರಾಗನ್ ಮಂಜು ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಸ್ಟೈಲಿಶ್​, ಗ್ಲಾಮರಸ್​ ಲುಕ್​ನಲ್ಲಿ ಜೂಲಿ ಖ್ಯಾತಿಯ ನಟಿ ನೇಹಾ ಧೂಪಿಯಾ!

ಕೃಷ್ಣ ಸಾರ್ಥಕ್​ ಹಾಗೂ ಜಗದೀಶ್​ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚರಣ್ ರಾಜ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ದುನಿಯಾ ವಿಜಯ್ ನಿರ್ದೇಶನದ ಭೀಮ ಸಿನಿಮಾದಲ್ಲಿ ಪ್ರಮುಖರು ಕಾಣಿಸಿಕೊಂಡಿದ್ದು, ಇದು ಚಿತ್ರ ಸಕ್ಸಸ್ ಆಗುವ ಸೂಚನೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಚಿತ್ರ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇಷ್ಟರಲ್ಲೇ ಘೋಷಣೆ ಮಾಡಲಿದೆ.

ಇದನ್ನೂ ಓದಿ: ನಿರ್ದೇಶಕ ರವಿಪುಡಿಯೊಂದಿಗೆ ತಮನ್ನಾ ಜಗಳ: ಮೌನ ಮುರಿದ ಮಿಲ್ಕಿ​ ಬ್ಯೂಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.