ETV Bharat / entertainment

ನಂದಮೂರಿ ಬಾಲಕೃಷ್ಣ ನಟನೆಯ 'ಭಗವಂತ ಕೇಸರಿ' ಟ್ರೇಲರ್​ ಬಿಡುಗಡೆಗೆ ಮುಹೂರ್ತ ಫಿಕ್ಸ್​ - ಈಟಿವಿ ಭಾರತ ಕನ್ನಡ

'ಭಗವಂತ ಕೇಸರಿ' ಟ್ರೇಲರ್​ ನಾಳೆ (ಅ.8) ರಾತ್ರಿ 8.16ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

Bhagavanth kesari trailer release on October 8
ನಂದಮೂರಿ ಬಾಲಕೃಷ್ಣ ನಟನೆಯ 'ಭಗವಂತ ಕೇಸರಿ' ಬಿಡುಗಡೆಗೆ ಮುಹೂರ್ತ ಫಿಕ್ಸ್​
author img

By ETV Bharat Karnataka Team

Published : Oct 7, 2023, 12:52 PM IST

ಟಾಲಿವುಡ್​ ಸೂಪರ್​ಸ್ಟಾರ್​ ನಂದಮೂರಿ ಬಾಲಕೃಷ್ಣ ನಟನೆಯ ಮುಂಬರುವ ಬಹುನಿರೀಕ್ಷಿತ ಚಿತ್ರ 'ಭಗವಂತ ಕೇಸರಿ'. ಅನಿಲ್ ರವಿಪುಡಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಇದೇ ಅಕ್ಟೋಬರ್​ 19 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಪೋಸ್ಟರ್​ ಹಾಗೂ ಟೀಸರ್​ನಿಂದ ಕುತೂಹಲ ಮೂಡಿಸಿರುವ ಚಿತ್ರದ ಟ್ರೇಲರ್​ ಬಿಡುಗಡೆಗೆ ಮುಹೂರ್ತ ಫಿಕ್ಸ್​ ಆಗಿದೆ.

ಟ್ರೇಲರ್​ ಯಾವಾಗ?: 'ಭಗವಂತ ಕೇಸರಿ' ಟ್ರೇಲರ್​ ಡೇಟ್​ ಅನೌನ್ಸ್​ ಮಾಡಲು ಚಿತ್ರತಂಡ 'ಲಾಕ್​ ಅಂಡ್​ ಲೋಡ್'​ ಎಂಬ ಶೀರ್ಷಿಕೆಯೊಂದಿಗೆ ಹೊಸ ಪೋಸ್ಟರ್​ ಅನ್ನು ಹಂಚಿಕೊಂಡಿದೆ. ಅಕ್ಟೋಬರ್​ 8 ರಂದು (ನಾಳೆ) ರಾತ್ರಿ 8.16ಕ್ಕೆ ಟ್ರೇಲರ್​ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ. ಟ್ರೇಲರ್​ ಬಿಡುಗಡೆ ಕಾರ್ಯಕ್ರಮವು ತೆಲಂಗಾಣದ ಹನುಮಕೊಂಡದ ಯೂನಿವರ್ಸಿಟಿ ಆರ್ಟ್ಸ್ & ಸೈನ್ಸ್ ಕಾಲೇಜು ಆವರಣದಲ್ಲಿ ನಡೆಯಲಿದೆ. ​

ಈಗಾಗಲೇ 'ಅಖಂಡ', 'ವೀರ ಸಿಂಹ ರೆಡ್ಡಿ'ಯಂತಹ ಬ್ಯಾಕ್​ ಟು ಬ್ಯಾಕ್​ ಬ್ಲಾಕ್​ಬಸ್ಟರ್​ ಹಿಟ್​ ಸಿನಿಮಾಗಳನ್ನು ನೀಡಿರುವ ಕಾರಣ ಬಾಲಯ್ಯ ಅವರ 'ಭಗವಂತ ಕೇಸರಿ' ಚಿತ್ರದ ಮೇಲೆ ಉತ್ತಮ ನಿರೀಕ್ಷೆಗಳಿವೆ. ಈ ಸಿನಿಮಾದಿಂದ ಬಾಲಯ್ಯ ಹ್ಯಾಟ್ರಿಕ್​ ಹಿಟ್​ ಪಡೆಯಲಿ ಎಂದು ಸಿನಿ ಪ್ರೇಮಿಗಳು ಹಾಗೂ ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್​ ಮತ್ತು ಹಾಡುಗಳಿಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಸಿಕ್ಕಿದೆ.

ಇದನ್ನೂ ಓದಿ: HBD Balakrishna: 'ಭಗವಂತ ಕೇಸರಿ' ಟೀಸರ್​ ರಿಲೀಸ್​, ಬಾಲಯ್ಯ ರಗಡ್​ ಲುಕ್​ಗೆ ಫ್ಯಾನ್ಸ್​ ಫಿದಾ

ರಗಡ್​ ಅವತಾರದಲ್ಲಿ ಬಾಲಯ್ಯ: ಟೀಸರ್​ನಲ್ಲಿ ಬಾಲಯ್ಯ ಅವರ ಡೈಲಾಗ್​ಗಳು, ಆ್ಯಕ್ಷನ್​ ದೃಶ್ಯಗಳು ಅದ್ಭುತವಾಗಿದೆ. ಮೊದಲ ನೋಟ​ ಆಕರ್ಷಕವಾಗಿದ್ದು, ಫುಲ್​ ರಗಡ್​ ಅವತಾರದಲ್ಲಿ ಬಾಲಯ್ಯ ಕಾಣಿಸಿಕೊಂಡಿದ್ದಾರೆ. ತೆಲಂಗಾಣ ಆಡುಭಾಷೆಯಲ್ಲಿರುವ ಬಾಲಯ್ಯ ಅವರ ಡೈಲಾಗ್‌ಗಳು ಪ್ರೇಕ್ಷಕರನ್ನು ಸೆಳೆದಿವೆ. ಮಾಸ್​ ಅವತಾರದಲ್ಲಿರುವ ಬಾಲಯ್ಯ ಚಿತ್ರದಲ್ಲಿ ಕಾಮಿಡಿ ಮಾಡುವ ಮೂಲಕ ಮನರಂಜನೆ ಕೂಡ ಕೊಡಲಿದ್ದಾರೆ.

ಅದ್ಧೂರಿ ಆ್ಯಕ್ಷನ್ ಎಂಟರ್‌ಟೈನ್‌ಮೆಂಟ್ ಆಗಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಬಾಲಯ್ಯ ಹಿರಿ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಅನಿಲ್ ರವಿಪುಡಿ ಅವರು ಬಾಲಯ್ಯ ಅವರಿಗೆ ತಕ್ಕಂತೆ ಮಾಸ್ ಎಲಿಮೆಂಟ್ಸ್ ಸೇರಿಸಿ, ಮನರಂಜನೆಯನ್ನು ಮಿಸ್ ಮಾಡದೇ ಚಿತ್ರವನ್ನು ರೂಪಿಸಿದ್ದಾರೆ. ಬಾಲಯ್ಯ ಜೊತೆ ನಟಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್​ನ ಮೊದಲ ಚಿತ್ರವಿದು.

ಶ್ರೀಲೀಲಾ ಮತ್ತು ತಮಿಳಿನ ಸ್ಟಾರ್ ನಟ ಶರತ್ ಕುಮಾರ್ ತಂದೆ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಬಾಲಯ್ಯ ಎದುರು ಪವರ್​ಫುಲ್​ ವಿಲನ್​ ಅಗಿ ಕಾಣಿಸಿಕೊಳ್ಳಲಿದ್ದಾರೆ. ಶೈನ್ ಸ್ಕ್ರೀನ್ ಬ್ಯಾನರ್ ಅಡಿ ಹರೀಶ್ ಪೆದ್ದಿ ಮತ್ತು ಸಾಹು ಗರಪಾಟಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರವು ವಿಜಯದಶಮಿಯ ಉಡುಗೊರೆಯಾಗಿ ಅಕ್ಟೋಬರ್​ 19ರಂದು ತೆರೆಗೆ ಬರಲಿದೆ. ಅದಕ್ಕೂ ಮುನ್ನ ಅಕ್ಟೋಬರ್ 18 ರಂದು USA ನಲ್ಲಿ ಗ್ರ್ಯಾಂಡ್ ಪ್ರೀಮಿಯರ್ ನಡೆಯಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: NBK108: 'ಭಗವಂತ ಕೇಸರಿ'ಯಾಗಿ ಟಾಲಿವುಡ್​​ ನಟಸಿಂಹ ನಂದಮೂರಿ ಬಾಲಕೃಷ್ಣ; ರಗಡ್​ ಲುಕ್​ನಲ್ಲಿ ಬಾಲಯ್ಯ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.