ETV Bharat / entertainment

'ಭಜರಂಗಿ 2' ಚೆಲುವರಾಜು ಅಭಿನಯದ 'ಮನಸು ಜಾರಿದೆ' ಆಲ್ಭಂ ಸಾಂಗ್ ರಿಲೀಸ್​ - ಪ್ರಣಯ ರಾಜ ಶ್ರೀನಾಥ್​

'ಭಜರಂಗಿ 2' ಖ್ಯಾತಿಯ ನಟ ಚೆಲುವರಾಜು ಅಭಿನಯದ 'ಮನಸು ಜಾರಿದೆ' ಆಲ್ಭಂ ಸಾಂಗ್​ ಬಿಡುಗಡೆಯಾಗಿದೆ.

manasu jaride album song
'ಮನಸು ಜಾರಿದೆ' ಆಲ್ಭಂ ಸಾಂಗ್ ತಂಡ
author img

By

Published : Jul 3, 2023, 12:52 PM IST

ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಅಭಿನಯದ 'ಭಜರಂಗಿ 2' ಸಿನಿಮಾದಲ್ಲಿ ವಿಲನ್​ ಪಾತ್ರದಿಂದ ಗಮನ ಸೆಳೆದಿದ್ದ ನಟ ಚೆಲುವರಾಜು ಇದೀಗ 'ಮನಸು ಜಾರಿದೆ' ಆಲ್ಭಂ ಸಾಂಗ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಆಲ್ಬಂ ಸಾಂಗ್​ ಬಿಡುಗಡೆಯಾಯಿತು. ಹಾಡಿನಲ್ಲಿ ಚೆಲುವರಾಜು ಜೋಡಿಯಾಗಿ ನಟಿ ವಿದ್ಯಾ ವಿಜಯ್​ ಅಭಿನಯಿಸಿದ್ದಾರೆ.

ಈ ವೇಳೆ ತಂಡದಿಂದ, ಪ್ರಣಯ ರಾಜ ಶ್ರೀನಾಥ್​ ಅವರಿಗೆ ಜೀವಮಾನ ಸಾಧನೆಗಾಗಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾಜಿ ಸಚಿವ ಕೃಷ್ಣಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್​ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀನಾಥ್​, "ಇಲ್ಲಿರುವವರೆಲ್ಲ ಬಹಳ ಚಿಕ್ಕವರು. ಈಗಿನ ಪೀಳಿಗೆಯವರು ನನಗೆ ಪ್ರಶಸ್ತಿ ನೀಡಿ ಗೌರವಿಸಿರುವುದು ತುಂಬಾ ಖುಷಿಯಾಗಿದೆ" ಎಂದರು.

manasu jaride album song
'ಮನಸು ಜಾರಿದೆ' ಆಲ್ಭಂ ಸಾಂಗ್ ತಂಡ

ಬಳಿಕ ನಟ ಚೆಲುವರಾಜು ಹಾಗೂ ನಟಿ ವಿದ್ಯಾ ವಿಜಯ್​ ಮಾತನಾಡಿ, "ಮನಸು ಜಾರಿದೆ ಆಲ್ಭಂ ಸಾಂಗ್​ ಬಹಳ ಚೆನ್ನಾಗಿ ಮೂಡಿ ಬಂದಿದೆ. ಯುವ ಪೀಳಿಗೆಗೆ ಈ ಹಾಡು ಇಷ್ಟ ಆಗುತ್ತೆ" ಎಂದು ಹೇಳಿದರು. ದಿವಂಗತ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಸ್ಮರಣಾರ್ಥ ನಡೆದ ಸಮಾರಂಭದಲ್ಲಿ ದೇಸಿ ಶೈಲಿಯ 'ದೇಸಿ ನಡಿಗೆ' ಎಂಬ ಫ್ಯಾಷನ್​ ಶೋ ಕೂಡ ಆಯೋಜಿಸಲಾಗಿತ್ತು. ಈ ವೇಳೆ ನಟ ಶ್ರೀನಾಥ್ ಅವರನ್ನು ಗೌರವಿಸಿದ್ದು, ಎಲ್ಲರ ಗಮನ ಸೆಳೆಯಿತು.

ಇದನ್ನೂ ಓದಿ: 'ನಮೋ ಭೂತಾತ್ಮ 2' ಟೀಸರ್ ಬಿಡುಗಡೆಗೊಳಿಸಿ, ನಾನು ಕೋಮಲ್ ಸಾರ್ ಅಭಿಮಾನಿ ಎಂದ ಧ್ರುವ ಸರ್ಜಾ

'ಭಜರಂಗಿ 2' ಸಿನಿಮಾ ಕುರಿತು..: ನಟ ಚೆಲುವರಾಜು 'ಭಜರಂಗಿ 2' ಸಿನಿಮಾ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು. ಅಕ್ಟೋಬರ್​ 29, 2021 ರಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್​ ಎರಡು ಶೇಡ್​ನಲ್ಲಿ ಕಾಣಿಸಿಕೊಂಡಿದ್ದರು. ಶಿವರಾಜ್​ಕುಮಾರ್​ಗೆ ನಾಯಕಿಯಾಗಿ ಭಾವನಾ ಮೆನನ್ ನಟಿಸಿದ್ದಾರೆ. ಮಿಕ್ಕಂತೆ, ಶ್ರುತಿ, ಲೋಕಿ ಮುಂತಾದವರು ಅಭಿನಯಿಸಿದ್ದಾರೆ. ಭಜರಂಗಿ-2 ಚಿತ್ರದ ಹಾಡುಗಳಿಗೆ ಖ್ಯಾತ ಗಾಯಕ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

ನಿರ್ದೇಶಕ ಎ. ಹರ್ಷ ನಿರ್ದೇಶನದ ಈ ಚಿತ್ರವನ್ನು ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾವು ಕನ್ನಡದಲ್ಲಿ ಸೂಪರ್​ ಹಿಟ್​ ಆಗಿತ್ತು. ಭಜರಂಗಿ ಸಿನಿಮಾದ ಮುಂದುವರೆದ ಭಾಗ ಇದಾಗಿದೆ. ಶಿವಣ್ಣನ ಜೊತೆ ಚೆಲುವರಾಜು ಈ ಸಿನಿಮಾದಲ್ಲಿ ಅಭಿನಯಿಸಿ ಉತ್ತಮ ಸಕ್ಸಸ್​ ಕಂಡಿದ್ದಾರೆ. ಭಜರಂಗಿ ಸಿನಿಮಾ ಹಿಟ್​ ಆದ ಬಳಿಕ ಅಭಿಮಾನಿಗಳ ಅಪೇಕ್ಷೆಯ ಮೇರೆಗೆ 'ಭಜರಂಗಿ 2' ಹೊರತರಲಾಯಿತು. ಅಲ್ಲದೇ ಭಜರಂಗಿಯ ಮೊದಲ ಭಾಗದಲ್ಲಿ ಸಸ್ಪೆನ್ಸ್ ಮೂಲಕ ಕಥೆಯನ್ನು ಕೊನೆಗೊಳಿಸಲಾಗಿತ್ತು. 'ಭಜರಂಗಿ 2' ಅದೆಲ್ಲದಕ್ಕೂ ಸ್ಪಷ್ಟನೆ ನೀಡುವುದರೊಂದಿಗೆ, ಸೂಪರ್​ ಹಿಟ್​ ಆಯಿತು. ​

ಇದನ್ನೂ ಓದಿ: Roopesh Shetty 'ಸರ್ಕಸ್'​ ಸಕ್ಸಸ್​; 'ಬಿಗ್​ ಬಾಸ್​' ವಿನ್ನರ್​ಗೆ ಸ್ಪರ್ಧಿಗಳು ಸಾಥ್​, ಸಿಂಪಲ್​ ಸುನಿ ಪ್ರಶಂಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.