ETV Bharat / entertainment

ಬೈರಾಗಿಯ ‘ರಿದಮ್ ಆಫ್ ಶಿವಪ್ಪ’ ಹಾಡಿಗೆ ಧ್ವನಿಯಾದ ಸೆಂಚುರಿ ಸ್ಟಾರ್ ಮತ್ತು ಶರಣ್ - ಶಿವರಾಜ್​ ಕುಮಾರ್​ ಮತ್ತು ಶರಣ್​ರ ಕಂಠದಲ್ಲಿ ಹಾಡು

ಶಿವರಾಜ್​ ಕುಮಾರ್​ ಅಭಿನಯದ ಬೈರಾಗಿ ಸಿನಿಮಾದ ರಿದಮ್ ಆಫ್ ಶಿವಪ್ಪ ಲಿರಿಕಲ್​ ಹಾಡು ಬಿಡುಗಡೆಯಾಗಿದೆ. ಈ ಹಾಡಿಗೆ ಶಿವರಾಜ್​ ಕುಮಾರ್​ ಮತ್ತು ಶರಣ್​ ಅವರ ಕಂಠ ಇದೆ. ಹಾಡು ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್​ ವೀಕ್ಷಣೆ ಗಳಿಸಿದೆ.

bairagee film new lyrical song rhythm of shivappa released
ಬೈರಾಗಿಯ ‘ರಿದಮ್ ಆಫ್ ಶಿವಪ್ಪ’ ಹಾಡಿಗೆ ಧ್ವನಿಯಾದ ಸೆಂಚುರಿ ಸ್ಟಾರ್ ಮತ್ತು ಶರಣ್
author img

By

Published : Jun 3, 2022, 4:22 PM IST

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 123ನೇ ಸಿನಿಮಾ ಬೈರಾಗಿ ತಂಡದಿಂದ ಹೊಸ ಹೊಸ ಸುದ್ದಿಗಳು ಬರುತ್ತಿದೆ. ಬೈರಾಗಿ ಶೀರ್ಷಿಕೆಯಿಂದ ಜನರ ಮನ್ನಣೆಗೆ ಒಳಗಾಗಿತ್ತು. ನಂತರ ಇತ್ತಿಚೆಗೆಷ್ಟೇ ಬಿಡುಗಡೆಯಾಗಿದ್ದ ಹಾಡಿಗೂ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಈ ಬೈರಾಗಿ ತಂಡದಿಂದ ಇನ್ನೊಂದು ಹಾಡು ಬಿಡುಗಡೆ ಆಗಿದೆ.

ಬೈರಾಗಿ ಸಿನಿಮಾದಲ್ಲಿ ಶಿವರಾಜ್​ ಕುಮಾರ್​ ಜೊತೆಗೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಮತ್ತು ದಾಲಿ ಧನಂಜಯ್​ ಕಾಣಿಸಿಕೊಳ್ಳಲಿದ್ದಾರೆ. ರಿದಮ್ ಆಫ್ ಶಿವಪ್ಪ ಕಾನ್ಸೆಪ್ಟ್‌ ನಡಿ ಹೊಸ ಹಾಡು ಬಿಡುಗಡೆಯಾಗಿದೆ. ಈ ಹಾಡಿಗೆ ಅನುಪ್​ ಸೀಳಿನ್​ ಸಂಗೀತ ಸಂಯೋಜಿಸಿದ್ದಾರೆ.

ಈ ಹಾಡನ್ನು ಶಿವಣ್ಣನ ಜೊತೆ ಶರಣ್ ಕೂಡ ಹಾಡಿದ್ದಾರೆ. ಈಗ ಈ ಹಾಡು ಟ್ರೆಂಡಿಂಗ್​ನಲ್ಲಿದೆ. ಹಾಡು ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ​ ಲಕ್ಷಾಂತರ ಜನರಿಂದ ವೀಕ್ಷಣೆಯಾಗಿದೆ. ವಜ್ರಕಾಯ ಸಿನಿಮಾದ ಬಳಿಕ ಶಿವಣ್ಣನ ಜೊತೆ ಮತ್ತೆ ಶರಣ್​ ಹಾಡಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯವಿರುವ ಸಂಡೆ ಮಂಡೆ ಎವೆರಿಡೇ, ಲವ್ವಿಗಿಲ್ಲ ಹಾಲಿಡೇ...ಎಂಬ ಹಾಡು ಸಿಂಗಲ್ ಶಾಟ್​ನಲ್ಲಿ ಶೂಟ್ ಮಾಡಿರುವುದು ವಿಶೇಷ.

bairagee film new lyrical song rhythm of shivappa released
ರಿದಮ್ ಆಫ್ ಶಿವಪ್ಪ ಕಾನ್ಸೆಪ್ಟ್‌ ನಡಿ ಮೂಡಿಬಂದಿರುವ ಈ ಹಾಡಿಗೆ ಇಡೀ ಬೈರಾಗಿ ತಂಡ ಹೆಜ್ಜೆ ಹಾಕಿದೆ

ರಿದಮ್ ಆಫ್ ಶಿವಪ್ಪ ಕಾನ್ಸೆಪ್ಟ್‌ ನಡಿ ಮೂಡಿಬಂದಿರುವ ಈ ಹಾಡಿಗೆ ಇಡೀ ಬೈರಾಗಿ ತಂಡ ಹೆಜ್ಜೆ ಹಾಕಿದ್ದು, ದೇವನಹಳ್ಳಿ ಬಳಿಯಿರುವ ನೂತನ ಮಾಲ್​ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮುರಳಿ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ನಖರನಖ ಹಾಡಿಗೆ ಆ್ಯಂಥೋನಿ ದಾಸ್ ದನಿಗೂಡಿಸಿದ್ದರು. ಇದೀಗ ಸಂಡೆ-ಮಂಡೆ ಹಾಡು ಶಿವಣ್ಣ-ಶರಣ್ ದನಿಯಲ್ಲಿ ಮೂಡಿಬಂದಿದ್ದು ಜೆ.ಪಿ ಮ್ಯೂಸಿಕ್ ಯೂಟ್ಯೂಬ್ ಚಾನಲ್​ನಲ್ಲಿ ರಿಲೀಸ್ ಆಗಿದೆ.

ಬೈರಾಗಿ ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಹಿರಿಯ ನಟ ಶಶಿಕುಮಾರ್, ಅನು ಪ್ರಭಾಕರ್, ಅಂಜಲಿ, ಯಶ ಶಿವಕುಮಾರ್, ಚಿಕ್ಕಣ್ಣ ಹೀಗೆ ದೊಡ್ಡ ತಾರಾದಂಡೇ ಇದೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ಬೈರಾಗಿಗೆ ಬಂಡವಾಳ ಹೂಡಿದ್ದಾರೆ. ತಮಿಳು ನಿರ್ದೇಶಕ ವಿಜಯ್ ಮಿಲ್ಟನ್‌ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸದ್ಯ ಟೀಸರ್ ಹಾಗೂ ಹಾಡುಗಳಿಂದ ಸದ್ದು ಮಾಡುತ್ತಿರೋ ಬೈರಾಗಿ ಸಿನಿಮಾ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.

ಇದನ್ನೂ ಓದಿ: ವಿಭಿನ್ನ ಪೋಸ್ಟರ್​ನಿಂದ ಅಭಿಮಾನಿಗಳ ತಲೆಯಲ್ಲಿ ಹುಳಬಿಟ್ಟ ರಿಯಲ್​ ಸ್ಟಾರ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.