ETV Bharat / entertainment

'ಸನಕ್​' ಸಾಹಿತ್ಯಕ್ಕೆ ಆಕ್ಷೇಪ: ಸೋಷಿಯಲ್​ ಮೀಡಿಯಾದಲ್ಲಿ ಕ್ಷಮೆಯಾಚಿಸಿದ ರ‍್ಯಾಪರ್ ಬಾದ್​ಶಾ - ಈಟಿವಿ ಭಾರತ ಕನ್ನಡ

ರ‍್ಯಾಪರ್ ಬಾದ್​ಶಾ ಅವರ 'ಸನಕ್​' ಸಾಹಿತ್ಯಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ಅವರು ಸೋಷಿಯಲ್​ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾರೆ.

Badshah
ರ‍್ಯಾಪರ್ ಬಾದ್​ಶಾ
author img

By

Published : Apr 24, 2023, 6:45 PM IST

ಇತ್ತೀಚೆಗೆ ಬಿಡುಗಡೆಯಾದ 'ಸನಕ್'​ ರ‍್ಯಾಪ್​ ಸಾಂಗ್​ ಸಾಹಿತ್ಯಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರ‍್ಯಾಪರ್ ಬಾದ್​ಶಾ ಸೋಮವಾರ ಕ್ಷಮೆಯಾಚಿಸಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಹಾಕಿಕೊಂಡಿರುವ ಅವರು, "ನನ್ನ ಇತ್ತೀಚಿನ ಬಿಡುಗಡೆಗಳಲ್ಲಿ ಒಂದಾದ 'ಸನಕ್' ಸಾಹಿತ್ಯವು ಕೆಲವರ ಭಾವನೆಗೆ ದಕ್ಕೆ ತಂದಿದೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ನಾನು ಯಾವತ್ತಿಗೂ ಸ್ವಇಚ್ಛೆಯಿಂದ ಅಥವಾ ತಿಳಿದು ಯಾರ ಭಾವನೆಗೂ ಧಕ್ಕೆ ತರುವ ಕೆಲಸ ಮಾಡುವುದಿಲ್ಲ. ನಾನು ರಚಿಸುವ ಸಾಹಿತ್ಯಗಳು ಅತ್ಯಂತ ಪ್ರಾಮಾಣಿಕತೆಯಿಂದ, ಉತ್ಸಾಹದಿಂದ ಅಭಿಮಾನಿಗಳ ಮುಂದೆ ತರಲು ಇಚ್ಛಿಸುತ್ತೇನೆ" ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನದ ಹಿರಿಯ ಅರ್ಚಕರೊಬ್ಬರು ಹಾಡಿನಲ್ಲಿ ಅಶ್ಲೀಲ ಪದಗಳ ಜೊತೆಗೆ ಭಗವಾನ್​ ಶಿವನ (ಬೋಲೆನಾಥ್​) ಹೆಸರನ್ನು ಬಳಸಿದ್ದಕ್ಕಾಗಿ ಬಾದ್​ಶಾ ಅವರನ್ನು ದೂಷಿಸಿದ್ದಾರೆ. ಹಾಡಿನಿಂದ ದೇವರ ಹೆಸರನ್ನು ತೆಗೆದು ಕ್ಷಮೆ ಕೇಳುವಂತೆ ಅರ್ಚಕ ಮಹೇಶ್​ ಕೇಳಿಕೊಂಡಿದ್ದಾರೆ. ಇಲ್ಲವಾದಲ್ಲಿ, ರ‍್ಯಾಪರ್ ವಿರುದ್ಧ ಎಫ್​ಐಆರ್​ ದಾಖಲಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಬಾದ್​ಶಾ ಈಗ ಹಾಡಿನ ಕೆಲವು ಸಾಲುಗಳನ್ನು ಬದಲಾಯಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಹೊಸ ಫಿಟ್ನೆಸ್​ ವಿಡಿಯೋ ಹಂಚಿಕೊಂಡ ನಟಿ ಸಾರಾ: ಜಿಮ್​ನಲ್ಲೂ ಮೇಕಪ್​ ಬಿಡಲ್ವಾ ಎಂದ ನೆಟ್ಟಿಗರು

ಬಾದ್​ಶಾ ಪೋಸ್ಟ್​ ಹೀಗಿದೆ..: "ಇತ್ತೀಚೆಗೆ ಬಿಡುಗಡೆಯಾದ 'ಸನಕ್' ಸಾಹಿತ್ಯವು ಕೆಲವರ ಭಾವನೆಗೆ ದಕ್ಕೆ ತಂದಿದೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ನಾನು ಯಾವತ್ತಿಗೂ ಸ್ವಇಚ್ಛೆಯಿಂದ ಅಥವಾ ತಿಳಿದು ಯಾರ ಭಾವನೆಗೂ ಧಕ್ಕೆ ತರುವ ಕೆಲಸ ಮಾಡುವುದಿಲ್ಲ. ನಾನು ರಚಿಸುವ ಸಾಹಿತ್ಯಗಳು ಅತ್ಯಂತ ಪ್ರಾಮಾಣಿಕತೆಯಿಂದ, ಉತ್ಸಾಹದಿಂದ ಅಭಿಮಾನಿಗಳ ಮುಂದೆ ತರಲು ಇಚ್ಛಿಸುತ್ತೇನೆ. ಹೀಗಾಗಿ ನಾನು ಹಾಡಿನ ಕೆಲವು ಸಾಲುಗಳನ್ನು ಬದಲಾಯಿಸಲು ಪೂರ್ವಭಾವಿ ಕ್ರಮವನ್ನು ತೆಗೆದುಕೊಂಡಿದ್ದೇನೆ. ಯಾರನ್ನೂ ನೋಯಿಸಲು ನಾನು ಇಚ್ಛಿಸುವುದಿಲ್ಲ. ಹೀಗಾಗಿ ಎಲ್ಲ ಡಿಜಿಟಲ್​ ಪ್ಲಾಟ್​ಫಾರ್ಮ್​ಗಳಲ್ಲಿ ಈ ಹೊಸ ಆವೃತ್ತಿಯೊಂದಿಗೆ ಬದಲಿ ಕ್ರಮವನ್ನು ಕೈಗೊಂಡಿದ್ದೇನೆ. ಈ ಬದಲಾವಣೆ ಪ್ರಕ್ರಿಯೆಯು ಕೆಲವು ದಿನಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ಅಷ್ಟು ಸಮಯ ಎಲ್ಲರೂ ಸ್ವಲ್ಪ ತಾಳ್ಮೆಯಿಂದ ಇರಬೇಕೆಂದು ನಾನು ವಿನಂತಿಸುತ್ತೇನೆ. ನಾನು ತಿಳಿಯದೇ ನೋಯಿಸಿದವರಿಗೆ ಪ್ರಾಮಾಣಿಕ ಕ್ಷಮೆಯನ್ನು ಕೇಳುತ್ತಿದ್ದೇನೆ. ನನ್ನ ಅಭಿಮಾನಿಗಳು ನನಗೆ ಆಧಾರಸ್ತಂಭ. ಹೀಗಾಗಿ ನಾನು ಅವರನ್ನು ಯಾವಾಗಲೂ ಅತ್ಯುನ್ನತ ಗೌರವ ಮತ್ತು ಮಿತಿಯಿಲ್ಲದ ಪ್ರೀತಿಯಿಂದ ಹಿಡಿದಿಟ್ಟುಕೊಳ್ಳುತ್ತೇನೆ" ಎಂದು ಸಾರ್ವಜನಿಕವಾಗಿ ರ‍್ಯಾಪರ್ ಬಾದ್​ಶಾ ಕ್ಷಮೆಯಾಚಿಸಿದ್ದಾರೆ.

ಒಂದು ತಿಂಗಳ ಹಿಂದೆ ರ‍್ಯಾಪರ್ ಬಾದ್​ಶಾ ಅವರ ಸನಕ್​ ಬಿಡುಗಡೆಯಾಯಿತು. ಈ ಹಾಡು ಇಲ್ಲಿಯವರೆಗೆ 22 ಮಿಲಿಯನ್​ ವೀಕ್ಷಣೆ ಪಡೆದಿದೆ. ಇದೀಗ ಸಾಹಿತ್ಯಕ್ಕೆ ಟೀಕೆಗಳು ವ್ಯಕ್ತವಾದ ಹಿನ್ನೆಲೆ ಕೆಲವೊಂದು ಸಾಲುಗಳನ್ನು ಬದಲಾಯಿಸಲು ರ‍್ಯಾಪರ್ ಬಾದ್​ಶಾ ನಿರ್ಧರಿಸಿದ್ದು, ಪ್ರೇಕ್ಷಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ನಟ ಸಂಪತ್​ ಆತ್ಮಹತ್ಯೆ ಪ್ರಕರಣ.. ಘಟನೆ ಹಿಂದಿನ ಸತ್ಯ ಬಿಚ್ಚಿಟ್ಟ ಸ್ನೇಹಿತ ರಾಜೇಶ್ ಧ್ರುವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.