ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ನಟನೆ, ನಿರ್ದೇಶನ ಹಾಗೂ ನಿರ್ಮಾಣದಿಂದ ತನ್ನದೇ ಸ್ಟಾರ್ ಡಮ್ ಹೊಂದಿರುವ ನಟ ರಕ್ಷಿತ್ ಶೆಟ್ಟಿ. ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಾಣ ಮಾಡಿದ್ದ ಸೂಪರ್ ಹಿಟ್ ಸಿನಿಮಾ ಕಿರಿಕ್ ಪಾರ್ಟಿ ತೆರೆಕಂಡು ಬರೋಬ್ಬರಿ ಏಳು ವರ್ಷಗಳಾಗಿವೆ. ಆ ಭರ್ಜರಿ ಯಶಸ್ಸಿನ ಬಳಿಕ ಇಡೀ ತಂಡ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದು, ನಿಮಗೆ ಗೊತ್ತೇ ಇದೆ. ಇದೀಗ ಅವರೆಲ್ಲರೂ ಮತ್ತಷ್ಟು ಜನಪ್ರಿಯರಾಗಿ, ಉನ್ನತ ಮಟ್ಟದಲ್ಲಿದ್ದಾರೆ. ಆ ರೀತಿಯ ಯೂಥ್ ಕಾಮಿಡಿ ಸಿನಿಮಾ ಮತ್ತೊಂದು ಬರಲಿಲ್ಲವಲ್ಲ ಎಂಬ ಕೊರಗನ್ನು ನೀಗಿಸಲು ಮತ್ತದೇ ಬರಹಗಾರರ ತಂಡ ಸಜ್ಜಾಗಿದೆ. ಅವರೀಗ 'ಬ್ಯಾಚುಲರ್ ಪಾರ್ಟಿ' ಕೊಡಲು ಸಜ್ಜಾಗಿದ್ದಾರೆ ಎಂಬುದು ವಿಶೇಷ.
-
Here’s the fun you ordered ☺️ Get set for all the fun and adventure as #BachelorParty is coming soon.
— Rakshit Shetty (@rakshitshetty) December 13, 2023 " class="align-text-top noRightClick twitterSection" data="
ಈ ಸಲ ಪಾರ್ಟಿ ಜೋರು! @iAm1289 @diganthmanchale @LooseMada_Yogi #AchyuthKumar @SiriRavikumar #BalajiManohar @AcharaKirk @ParamvahStudios #BachelorPartyMovie #ParamvahStudios pic.twitter.com/oSgPsSdRqW
">Here’s the fun you ordered ☺️ Get set for all the fun and adventure as #BachelorParty is coming soon.
— Rakshit Shetty (@rakshitshetty) December 13, 2023
ಈ ಸಲ ಪಾರ್ಟಿ ಜೋರು! @iAm1289 @diganthmanchale @LooseMada_Yogi #AchyuthKumar @SiriRavikumar #BalajiManohar @AcharaKirk @ParamvahStudios #BachelorPartyMovie #ParamvahStudios pic.twitter.com/oSgPsSdRqWHere’s the fun you ordered ☺️ Get set for all the fun and adventure as #BachelorParty is coming soon.
— Rakshit Shetty (@rakshitshetty) December 13, 2023
ಈ ಸಲ ಪಾರ್ಟಿ ಜೋರು! @iAm1289 @diganthmanchale @LooseMada_Yogi #AchyuthKumar @SiriRavikumar #BalajiManohar @AcharaKirk @ParamvahStudios #BachelorPartyMovie #ParamvahStudios pic.twitter.com/oSgPsSdRqW
ಹೌದು, ಕಿರಿಕ್ ಪಾರ್ಟಿಯ ಬರಹಗಾರ ಅಭಿಜಿತ್ ಮಹೇಶ್ ಅವರು ಈಗಾಗಲೇ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಸೇರಿದಂತೆ ಅನೇಕರ ಸಿನಿಮಾಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ನಿರ್ದೇಶಕರಾಗಿ ಬಡ್ತಿ ಪಡೆದಿದ್ದು, ಬ್ಯಾಚುಲರ್ ಪಾರ್ಟಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಚಗುಳಿ ಇಡುವ ಸಂಭಾಷಣೆಗೆ ಖ್ಯಾತರಾಗಿರುವ ಅಭಿಜಿತ್, ತಮ್ಮ ಮೊದಲ ಸಿನಿಮಾದಲ್ಲಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂಬುದಕ್ಕೆ ಸಿನಿಮಾ ಬಿಡುಗಡೆಯವರೆಗೂ ಕಾಯಬೇಕು. ಅದಕ್ಕೂ ಮುನ್ನ ಬ್ಯಾಚುಲರ್ ಪಾರ್ಟಿಯ ಮೊದಲ ಝಲಕ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ದೂದ್ ಪೇಡಾ ಖ್ಯಾತಿಯ ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ಅವರು ಈ ಫಸ್ಟ್ ಗ್ಲಿಂಪ್ಸ್, ಪೋಸ್ಟರ್‌ನಲ್ಲಿದ್ದಾರೆ. ಅದರ ಹಿನ್ನೆಲೆಯಲ್ಲಿ ಬ್ಯಾಂಕಾಕ್‌ನ ಕೆಲ ಸ್ಥಳಗಳನ್ನೂ ಕಾಣಬಹುದು. ವೀಲ್‌ಚೇರ್‌ನಲ್ಲಿ ಅಚ್ಯುತ್ ಕುಳಿತುಕೊಂಡಿದ್ದರೆ, ಅವರ ಹಿಂದೆ ಯೋಗಿ, ದಿಗಂತ್ ಓಡಿ ಬರುತ್ತಿರುವ ದೃಶ್ಯ ಸದ್ಯ ಗಮನ ಸೆಳೆಯುತ್ತಿದೆ. ಪೋಸ್ಟರ್‌ನಲ್ಲಿ ಇನ್ನೂ ಗಮನಾರ್ಹ ಅಂಶಗಳಿದ್ದು, ಅವೆಲ್ಲವೂ ಸಿನಿಮಾದ ಕಥೆಗೆ ಪೂರಕವಾಗಿದೆಯಾ ಎಂಬುದಕ್ಕೆ ಚಿತ್ರತಂಡ ಉತ್ತರಿಸಬೇಕಿದೆ. ವಿಶೇಷವೆಂದರೆ ಈ ಪೋಸ್ಟರ್ ಅನ್ನು ಹ್ಯಾಂಡ್ ಸ್ಕೆಚ್ ಮೂಲಕ ಡಿಸೈನ್ ಮಾಡಲಾಗಿದೆ.
ಇದನ್ನೂ ಓದಿ: 'ಅನಿಮಲ್'ನಲ್ಲಿದ್ದ ರಣ್ಬೀರ್ ಕಪೂರ್ - ಬಾಬಿ ಡಿಯೋಲ್ ಕಿಸ್ಸಿಂಗ್ ಸೀನ್ ಕಟ್
ಬರಿ ಪೋಸ್ಟರ್ ಹರಿಬಿಡದೇ ಅದರೊಟ್ಟಿಗೆ ಸಣ್ಣ ವಿಡಿಯೋವೊಂದನ್ನು ರಿಲೀಸ್ ಮಾಡಿದೆ. ಅದರಲ್ಲೂ ಕೆಲ ಅಂಶಗಳು ಗಮನ ಸೆಳೆಯುವಂತಿದ್ದು, ಹಿನ್ನೆಲೆ ಸಂಗೀತವೂ ಚೆನ್ನಾಗಿದೆ. ಕಣ್ಮನ ಸೆಳೆಯುವ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿರುವಂತೆ ತೋರುತ್ತಿದೆ. ಚಿತ್ರಮಂದಿರಗಳಲ್ಲಿ ಕುಳಿತು ನಗೆಗಡಲಲ್ಲಿ ತೇಲುವ ಸಿನಿಮಾ ಇದಾಗಿದೆ ಎಂಬುದು ಚಿತ್ರತಂಡದ ಅನಿಸಿಕೆ. ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಅಮಿತ್ ಗುಪ್ತ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅರವಿಂದ್ ಛಾಯಾಗ್ರಹಣ, ಅರ್ಜುನ್ ರಾಮು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಇದನ್ನೂ ಓದಿ: ಆಪರೇಷನ್ ಡಿ ಡಬ್ಬಿಂಗ್: ಹೊಸಬರ ಚಿತ್ರಕ್ಕೆ ಪತಿ ಸುದರ್ಶನ್ ಜೊತೆ ದನಿಯಾದ ಸಂಗೀತಾ ಭಟ್