ETV Bharat / entertainment

ಅಪ್ಪು ಹುಟ್ಟುಹಬ್ಬಕ್ಕೆ 'ಬಾನ ದಾರಿಯಲ್ಲಿ' ಗಿಫ್ಟ್ ರೆಡಿ ಮಾಡಿಕೊಂಡ ಗೋಲ್ಡನ್ ಸ್ಟಾರ್ - puneeth rajkumar birthday

'ಬಾನ ದಾರಿಯಲ್ಲಿ' ಸಿನಿಮಾವನ್ನು ಮಾರ್ಚ್ 17ರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಹುಟ್ಟುಹಬ್ಬದಂದು ರಿಲೀಸ್ ಮಾಡಲು ಸಿದ್ಧತೆ ನಡೆಯುತ್ತಿದೆ.

Baana daariyalli movie release date
ಬಾನ ದಾರಿಯಲ್ಲಿ ಸಿನಿಮಾ
author img

By

Published : Dec 8, 2022, 11:52 AM IST

'2022' ಕನ್ನಡ ಚಿತ್ರರಂಗದ ನಟ ಗಣೇಶ್​ ಅವ್ರಿಗೆ ಗೋಲ್ಡನ್ ಇಯರ್. ಸೋಲುಗಳಿಂದ ಸೈಲೆಂಟ್ ಆಗಿದ್ದ ಗಣಿ ಅವರ ಎರಡು ಚಿತ್ರಗಳು ಈ ಸಾಲಿನಲ್ಲಿ ಹಿಟ್ ಲಿಸ್ಟ್ ಸೇರಿದೆ. ಅಭಿಮಾನಿಗಳಲ್ಲಿ ಮತ್ತೆ ಮಂದಹಾಸ ಮೂಡಿದೆ. ಗೋಲ್ಡನ್ ಸ್ಟಾರ್ ಮುಂದಿನ ಸಿನಿಮಾ 'ಬಾನ ದಾರಿಯಲ್ಲಿ' ಮೇಲಿನ‌ ನಿರೀಕ್ಷೆ ದುಪ್ಪಟ್ಟಾಗಿದೆ. ಅದರಲ್ಲೂ ಗಣಿ ಅವರ ಮೆಚ್ಚಿನ ಕ್ರೀಡೆ ಕ್ರಿಕೆಟ್ ಆಟಗಾರನ ಪಾತ್ರದಲ್ಲಿ ಕಾಣಿಸಿರೋದು ಅವರ ಜೋಶ್ ಹೆಚ್ಚಿಸಿದೆ. ಈ ಚಿತ್ರವನ್ನು ಯಾವಾಗ ನೋಡ್ತಿವೋ ಅನ್ನೋ ಕಾತರ ಮಳೆ ಹುಡುಗನ‌ ಅಭಿಮಾನಿಗಳಲ್ಲಿ ಮೂಡಿದೆ.

ನಟ ಗಣೇಶ್ ಬಾಳಲ್ಲಿ ಮುಂಗಾರು ಮಳೆ ಸುರಿಸಿದ ಕತೆಗಾರ ಪ್ರೀತಂ ಗುಬ್ಬಿ ಕಲ್ಪನೆಯಲ್ಲಿ ಅರಳಿದ ಬಾನ ದಾರಿಯಲ್ಲಿ ಚಿತ್ರ ಸೆಟ್ಟೇರಿದಾಗಿನಿಂದಲೂ ಸಖತ್ ಸೌಂಡ್ ಮಾಡ್ತಿದೆ. ಅಲ್ಲದೇ ಚಿತ್ರದ ಪ್ರತಿಯೊಂದು ಪೋಸ್ಟರ್ ಕೂಡ ಪ್ರಾಮಿಸಿಂಗ್ ಆಗಿದ್ದು, ಈ ಚಿತ್ರದ ಮೂಲಕ ಮತ್ತೊಂದು ಸೆಂಚುರಿ ಪಕ್ಕಾ ಅಂತಿದ್ದಾರೆ ಸಿನಿಪ್ರಿಯರು. ಬಾನ ದಾರಿಯಲ್ಲಿ ಸಿನಿಮಾ ಚಿತ್ರ ಮಂದಿರದ ದಾರಿಯಲ್ಲಿ ಕಾಣಿಸೋದ್ಯಾವಾಗ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ.

Baana daariyalli movie release date
ಬಿಡುಗಡೆಗೆ ಸಜ್ಜಾಗುತ್ತಿದೆ ಬಾನ ದಾರಿಯಲ್ಲಿ ಸಿನಿಮಾ

ಈಗಾಗಲೇ ದೇಶ ವಿದೇಶದಲ್ಲಿ ಶೂಟಿಂಗ್ ಮುಗಿಸಿ ಬಂದಿರುವ ಬಾನ ದಾರಿಯಲ್ಲಿ ಬಳಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಜನವರಿ ಮೊದಲ ವಾರ ಸಿನಿಮಾ ಪತ್ರಕರ್ತರ ಜೊತೆ ಕ್ರಿಕೆಟ್ ಟೂರ್ನಮೆಂಟ್‌ ಆಡಿ, ಅದೇ ದಿನ ಚಿತ್ರದ ಮೊದಲ ಹಾಡನ್ನು ಲಾಂಚ್ ಮಾಡಲು ಪ್ಲಾನ್ ಮಾಡಿರುವ ಚಿತ್ರತಂಡ ಸಿನಿಮಾವನ್ನು ಮಾರ್ಚ್ 17ರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಹುಟ್ಟುಹಬ್ಬದಂದು ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಪ್ರೀತಿಯ ಅಪ್ಪು ಅವರಿಗೆ ಈ ಚಿತ್ರವನ್ನು ಅರ್ಪಿಸಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ನಾಳೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಕನ್ನಡದ ಮೊದಲ ಬಯೋಪಿಕ್ 'ವಿಜಯಾನಂದ'

ಇನ್ನು, ಈ ಚಿತ್ರವನ್ನು ಮಾರ್ಚ್ 17ಕ್ಕೆ ರಿಲೀಸ್ ಮಾಡಿ ಎಂಬ ಸಲಹೆ ಕೊಟ್ಟಿದ್ದು ಪವರ್ ಸ್ಟಾರ್ ಮಡದಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅನ್ನೋದು ವಿಶೇಷವಾಗಿದೆ. ಹೌದು, ಬಾನ ದಾರಿಯಲ್ಲಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಪಿಅರ್​ಕೆಯಲ್ಲಿ ನಡೆಯುತ್ತಿದ್ದು, ಚಿತ್ರದ ಒಂದಷ್ಟು ಸೀನ್​ಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿರೋ ಅಶ್ವಿನಿ ಪುನೀತ್ ರಾಜ್​​​ಕುಮಾರ್ ಮಾರ್ಚ್​​ನಲ್ಲಿ ಸಿನಿಮಾ ರಿಲೀಸ್ ಮಾಡುವಂತೆ ಸಲಹೆ ಕೊಟ್ಟಿದ್ದಾರೆ. ಮಾರ್ಚ್​​ನಲ್ಲಿ ಸಿನಿಮಾ‌ ರಿಲೀಸ್ ಮಾಡೋದಾದ್ರೆ ಅಪ್ಪು ಅವರ ಹುಟ್ಟುಹಬ್ಬದಂದು ಈ ಚಿತ್ರವನ್ನು ರಿಲೀಸ್ ಮಾಡೋಣ ಬಗ್ಗೆ ಚಿತ್ರತಂಡ ನಿರ್ಧರಿಸಿದೆ.

ಇದನ್ನೂ ಓದಿ: ಕ್ರಿಕೆಟ್ ಆಟಗಾರನಾಗಿ ಗೋಲ್ಡನ್​ ಸ್ಟಾರ್​ ಗಣೇಶ್.. ಬಾನ ದಾರಿಯಲ್ಲಿ ಚಿತ್ರೀಕರಣ

ಇದಲ್ಲದೇ ಬಾನ ದಾರಿಯಲ್ಲಿ ಚಿತ್ರದ ಆಡಿಯೋ ರೈಟ್ಸ್ ದುಬಾರಿ ಮೊತ್ತಕ್ಕೆ ಆನಂದ್ ಆಡಿಯೋ ಪಾಲಾಗಿದ್ದು, ಚಿತ್ರ ತಂಡದ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಜೊತೆಗೆ ಮಾರ್ಚ್ 17ರ ಪವರ್ ಸ್ಟಾರ್ ಹುಟ್ಟಿದ ಪವರ್ ಫುಲ್ ದಿನದಂದು ಬಾನ ದಾರಿಯಲ್ಲಿ ರಿಲೀಸ್ ಆಗಲಿರೋದು ಕನ್ನಡ ಸಿನಿರಸಿಕರಿಗೆ ಸರ್​ಪ್ರೈಸ್​ ಆಗಿದೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.