ETV Bharat / entertainment

ಡಿ. 15ಕ್ಕೆ 'ಬಾ ನಲ್ಲೆ ಮದುವೆಗೆ' ಚಿತ್ರ ತೆರೆಗೆ - baa nalle maduvege

'ಬಾ ನಲ್ಲೆ ಮದುವೆಗೆ' ಸಿನಿಮಾ ಡಿಸೆಂಬರ್ 15 ತೆರೆಕಾಣಲಿದೆ.

baa nalle maduvege movie
ಬಾ ನಲ್ಲೆ ಮದುವೆಗೆ
author img

By ETV Bharat Karnataka Team

Published : Dec 13, 2023, 3:47 PM IST

'ಬಾ ನಲ್ಲೆ ಮದುವೆಗೆ' ಮಾಹಿತಿ ಹಂಚಿಕೊಂಡ ಯೋಗೇಶ್​ ನಂದನ್​​...

ಮೈಸೂರು: ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ವಿಭಿನ್ನ ಶೀರ್ಷಿಕೆ, ಕಥಾಹಂದರವುಳ್ಳ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ನಿರ್ಮಾಣಗೊಳ್ಳುತ್ತಿವೆ. ಇದೀಗ ವಿಭಿನ್ನ ಶೀರ್ಷಿಕೆಯುಳ್ಳ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದೆ. ಹೌದು, 'ಬಾ ನಲ್ಲೆ ಮದುವೆಗೆ' ಸಿನಿಮಾ ಇದೇ ಡಿಸೆಂಬರ್ 15, ಶುಕ್ರವಾರದಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ನಿರ್ಮಾಪಕ - ನಿರ್ದೇಶಕ ಯೋಗೇಶ್ ನಂದನ್ ತಿಳಿಸಿದರು. ಸಿನಿಮಾ ಬಿಡುಗಡೆಗೆ ಇನ್ನೊಂದೇ ದಿನ ಬಾಕಿ ಇದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಯೋಗೇಶ್​ ನಂದನ್​​, ಗಂಡು - ಹೆಣ್ಣು ಪ್ರೀತಿಯ ಮೋಹಕ್ಕೆ ಬಿದ್ದು, ಆತುರದ ನಿರ್ಧಾರ ಕೈಗೊಳ್ಳದೇ ಎಲ್ಲ ಬಗೆಯಲ್ಲೂ ಯೋಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದು ಚಿತ್ರದ ಕಥಾವಸ್ತು. ಈ ಚಿತ್ರದ ಚಿತ್ರಕಥೆ, ಸಂಗೀತ, ಸಾಹಿತ್ಯ, ನಿರ್ದೇಶನದ ಜವಾಬ್ದಾರಿ ಹೊತ್ತಿದ್ದೇನೆ. ಸಿನಿಮಾ ಯಶಸ್ಸು ಕಾಣಲು ನಿಮ್ಮೆಲ್ಲರ ಸಹಕಾರ ಬೇಕು ಎಂದು ತಿಳಿಸಿದರು.

ಚಿತ್ರದ ನಾಯಕನಾಗಿ ಅರ್ಜುನ್, ನಾಯಕಿಯಾಗಿ ಶೋಭಾ ನಟಿಸಿದ್ದಾರೆ. ಅಂಜನಪ್ಪ ಮೈಸೂರು ಮಂಜುಳಾ, ಗೋವಿಂದಪ್ಪ ಸೇರಿದಂತೆ ಹಲವರು ಈ ಚಿತ್ರದಲ್ಲಿದ್ದಾರೆ. ಈ ಸಿನಿಮಾ ಹಳ್ಳಿ ಹುಡುಗನ ಪ್ರೇಮ ಕಥೆ ಹೊಂದಿದ್ದು, ಇಂದಿನ ಯುವ ಜನಾಂಗಕ್ಕೆ ಇಷ್ಟವಾಗುವ ಚಿತ್ರವಾಗಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ದಿನೇಶ್ ಕುಮಾರ್ ಅವರ ಸಂಗೀತ ನಿರ್ದೇಶನವಿದೆ. ನಾಲ್ಕು ಫೈಟ್ ಸೀನ್​​​​ಗಳಿವೆ. ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ. ಚಾಮರಾಜನಗರ, ನಂಜನಗೂಡು ಭಾಗದಲ್ಲಿ ಚಿತ್ರಿಕರಣ ಮಾಡಲಾಗಿದ್ದು, ಸಿನಿಮಾ ಉತ್ತಮವಾಗಿ ಮೂಡಿಬಂದಿದೆ. ಇಡೀ ಕುಟುಂಬವೇ ಕುಳಿತು ವೀಕ್ಷಿಸುವ ಚಿತ್ರ ಇದಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಕಾಂತಾರ ಪ್ರೀಕ್ವೆಲ್​ನಲ್ಲಿ ನನಗೊಂದು ಅವಕಾಶ ಕೊಡಿ: ನಟಿ ಪಾಯಲ್​ ರಜಪೂತ್

ಇದೇ ಡಿಸೆಂಬರ್ 15 ರಂದು ರಾಜ್ಯಾದ್ಯಂತ ಚಿತ್ರ ತೆರೆಗಪ್ಪಳಿಸಲಿದೆ. ಹೊಸ ಪ್ರತಿಭೆಗಳು ಸೇರಿ ಸಿನಿಮಾ ಮಾಡಿದ್ದೇವೆ. ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆ ನೀಡಲಾಗಿದೆ. ಜನತೆ ಹೊಸ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭ ನಟ ಅರ್ಜುನ್, ಎರಡನೇ ನಟ ಸಚಿನ್, ಹಿರಿಯ ಕಲಾವಿದ ಉಮ್ಮತ್ತೂರು ಬಸವರಾಜು, ಸಿದ್ದರಾಜು ಭಾಗವಹಿಸಿದ್ದರು.

ಇದನ್ನೂ ಓದಿ: ಆಪರೇಷನ್ ಡಿ ಡಬ್ಬಿಂಗ್: ಹೊಸಬರ ಚಿತ್ರಕ್ಕೆ ಪತಿ ಸುದರ್ಶನ್ ಜೊತೆ ದನಿಯಾದ ಸಂಗೀತಾ ಭಟ್

ಪ್ರೀತಿ ಪ್ರೇಮ ಜೀವನದ ಸುತ್ತ ಕಥೆ ಎಣೆಯಲಾಗಿದೆ. ಆತುರದ ನಿರ್ಧಾರ ಸೂಕ್ತವಲ್ಲ. ಯೋಚಿಸಿ ನಿರ್ಧಾರ ಕೈಗೊಳ್ಳಬೇಕೆನ್ನುವ ಸಂದೇಶವನ್ನು ಸಿನಿಮಾ ಒಳಗೊಂಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಕಂಟೆಂಟ್​ ಓರಿಯೆಂಟೆಡ್​ ಸಿನಿಮಾಗಳಿಗೆ ಪ್ರೇಕ್ಷಕರು ಮಣೆ ಹಾಕುತ್ತಿದ್ದಾರೆ. ಈ ಸಿನಿಮಾ ಎಷ್ಟರ ಮಟ್ಟಿಗೆ ಗೆಲ್ಲಲಿದೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.