ETV Bharat / entertainment

'ಡ್ರೀಮ್ ಗರ್ಲ್ 2' ಪೂಜಾ ಲುಕ್​ ಔಟ್​: ಮೆಚ್ಚುಗೆ ವ್ಯಕ್ತಪಡಿಸಿದ ಆಯುಷ್ಮಾನ್​ ಖುರಾನಾ ಪತ್ನಿ - ಡ್ರೀಮ್​ ಗರ್ಲ್

'ಡ್ರೀಮ್ ಗರ್ಲ್ 2' ನಿಂದ ಪೂಜಾ ಲುಕ್​ ಬಿಡುಗಡೆಯಾಗಿದೆ. ಒಂದಲ್ಲ, ಎರಡು ಪಾತ್ರದಲ್ಲಿ ಬೆರಗುಗೊಳಿಸುವ ಆಯುಷ್ಮಾನ್​ ಖುರಾನಾ ಪಾತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Ayushmann Khurrana
ಆಯುಷ್ಮಾನ್ ಖುರಾನಾ
author img

By

Published : Jul 25, 2023, 3:31 PM IST

2023ರ ಬಹುನಿರೀಕ್ಷಿತ ಚಿತ್ರ ಬಾಲಿವುಡ್​ ನಟ ಆಯುಷ್ಮಾನ್​ ಖುರಾನಾ ಅವರ 'ಡ್ರೀಮ್ ಗರ್ಲ್ 2'. ಇದು ಅವರ ಬ್ಲಾಕ್​ಬಸ್ಟರ್​ 'ಡ್ರೀಮ್​ ಗರ್ಲ್'​ನ ಮುಂದುವರಿದ ಭಾಗವಾಗಿದೆ. ಇದೀಗ ಚಿತ್ರ ತಯಾರಕರು 'ಡ್ರೀಮ್ ಗರ್ಲ್ 2' ನಿಂದ ಪೂಜಾ ಪಾತ್ರ ಕೈಬಿಟ್ಟಿದ್ದಾರೆ. ಆದರೂ ಹೆಚ್ಚು ಗಮನ ಸೆಳೆದದ್ದು ಪೋಸ್ಟರ್​ಗೆ ಆಯುಷ್ಮಾನ್ ಅವರ ಪತ್ನಿ ತಾಹಿರಾ ಕಶ್ಯಪ್ ಅವರ ಪ್ರತಿಕ್ರಿಯೆ. ಚಿತ್ರದಲ್ಲಿ ಒಂದಲ್ಲ, ಎರಡು ಪಾತ್ರದಲ್ಲಿ ಬೆರಗುಗೊಳಿಸುವ ನಟನ ಪಾತ್ರಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್​ಸ್ಟಾದಲ್ಲಿ ಪೋಸ್ಟರ್​ ಹಂಚಿಕೊಂಡಿರುವ ಆಯುಷ್ಮಾನ್​ ಖುರಾನಾ, "ಇದು ಕೇವಲ ಮೊದಲ ನೋಟ. ಕನ್ನಡಿಯಲ್ಲಿರುವ ವಸ್ತುಗಳು ಕಾಣಿಸಿಕೊಳ್ಳುವುದಕ್ಕಿಂತ ಹೆಚ್ಚು ಸುಂದರವಾಗಿರುತ್ತದೆ! ಡ್ರೀಮ್ ಗರ್ಲ್ 2 ಆಗಸ್ಟ್​ 25" ಎಂದು ಕ್ಯಾಪ್ಶನ್​ ನೀಡಿದ್ದಾರೆ. ಪೋಸ್ಟ್​ ಅನ್ನು ಹಂಚಿಕೊಂಡ ತಕ್ಷಣ ಅಭಿಮಾನಿಗಳು ಮತ್ತು ಬಿಟೌನ್​ ಸೆಲೆಬ್ರಿಟಿಗಳು ಚಿತ್ರದ ಮೇಲಿನ ಪ್ರೀತಿಯನ್ನು ತೋರಿಸಲು ಕಾಮೆಂಟ್​ ವಿಭಾಗವನ್ನು ಬಳಸಿಕೊಂಡರು. ಆಯುಷ್ಮಾನ್​ ಖುರಾನಾ ಅವರನ್ನು 2 ಅವತಾರದಲ್ಲಿ ಕಂಡ ಸಿನಿ ಪ್ರೇಕ್ಷಕರು ಫುಲ್​ ಖುಷಿಯಾದರು.

ಪೋಸ್ಟ್​ಗೆ ಸಾವಿರಾರು ಹೃದಯ ಮತ್ತು ಫೈರ್​ ಎಮೋಜಿನೊಂದಿಗೆ ಆಯುಷ್ಮಾನ್​ ಅವರ ಪತ್ನಿ ತಾಹಿರಾ ಕಶ್ಯಪ್​ ಅವರ ಕಾಮೆಂಟ್​ ಎದ್ದು ಕಾಣುತ್ತಿದೆ. ಪೋಸ್ಟರ್​ಗೆ ಪ್ರತಿಕ್ರಿಯಿಸಿದ ಆಯುಷ್ಮಾನ್​ ಅವರ ಪತ್ನಿ ಮತ್ತು ಲೇಖಕಿ ತಾಹಿರಾ ಕಶ್ಯಪ್​, ಕಾಮೆಂಟ್​ ವಿಭಾಗದಲ್ಲಿ ಹೃದಯ ಕಣ್ಣುಗಳ ಎಮೋಜಿ ಮತ್ತು ಫೈರ್​ ಎಮೋನಿನೊಂದಿಗೆ ಪೂಜಾ ಅವರ ನೋಟಕ್ಕೆ ಪ್ರತಿಕ್ರಿಯಿಸಿದರು. ಅದೇ ರೀತಿ ಅನೇಕ ಅಭಿಮಾನಿಗಳು ಆಯುಷ್ಮಾನ್​ ಅವರ ಸ್ತ್ರೀ ನೋಟವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Buddhivantha 2: ಉಪೇಂದ್ರ ಫ್ಯಾನ್ಸ್​ಗೆ ಗುಡ್​ ನ್ಯೂಸ್ - ಬುದ್ಧಿವಂತ 2 ರಿಲೀಸ್​ ಡೇಟ್​ ಫಿಕ್ಸ್!

ಪೋಸ್ಟರ್‌ನಲ್ಲಿ ಆಯುಷ್ಮಾನ್ ಗ್ಲಾಮರಸ್ ಮಹಿಳೆಯಂತೆ ಕಾಣುತ್ತಿದ್ದು, ಅದರಲ್ಲಿ ಲಿಪ್‌ಸ್ಟಿಕ್ ಹಚ್ಚಿಕೊಳ್ಳುತ್ತಿದ್ದಾರೆ. ಮೊದಲ ನೋಟ ಹಂಚಿಕೊಂಡ ನಟ, ಆಗಸ್ಟ್ 25 ಕ್ಕೆ ಒಂದು ತಿಂಗಳ ಕೌಂಟ್‌ಡೌನ್‌ನೊಂದಿಗೆ ಚಿತ್ರದ ಬಿಡುಗಡೆಯ ದಿನಾಂಕವನ್ನು ಸಹ ಉಲ್ಲೇಖಿಸಿದ್ದಾರೆ. ಆಯುಷ್ಮಾನ್ ಪೂಜಾ ಪಾತ್ರದೊಂದಿಗೆ ಮರಳಿರುವುದು ಅಭಿಮಾನಿಗಳಿಗೆ ಸಂತಸ ನೀಡಿದೆ. ಈ ಸಿನಿಮಾವನ್ನು ರಾಜ್​ ಶಾಂಡಿಲ್ಯ ನಿರ್ದೇಶಿಸಿದ್ದಾರೆ. ಚಿತ್ರವು ಆಗಸ್ಟ್​ 25 ರಂದು ತೆರೆ ಕಾಣಲಿದೆ.

ನಿಜವಾಗಿಯೂ ಜುಲೈನಲ್ಲೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಸಿನಿಮಾಗೆ ಅಗತ್ಯವಿರುವ ವಿಎಫ್‌ಎಕ್ಸ್ ಕೆಲಸದಿಂದಾಗಿ ವಿಳಂಬವಾಯಿತು. ​ಡ್ರೀಮ್ ಗರ್ಲ್ 2 ಗೆ ವಿಎಫ್​ ಕೆಲಸವು ನಿರ್ಣಾಯಕವಾಗಿದೆ. ಸಿನಿಮಾದ ಕುರಿತು ಈ ಹಿಂದೆ ಮಾತನಾಡಿದ್ದ ಬಾಲಾಜಿ ಟೆಲಿಫಿಲ್ಮ್ಸ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಏಕ್ತಾ ಕಪೂರ್, "ಡ್ರೀಮ್ ಗರ್ಲ್ 2 ನಲ್ಲಿ ಆಯುಷ್ಮಾನ್ ಖುರಾನಾ ಅವರ ಪಾತ್ರವು ಪರಿಪೂರ್ಣವಾಗಿ ಕಾಣಬೇಕು ಎಂದು ನಾವು ಬಯಸುತ್ತೇವೆ. ಅದಕ್ಕಾಗಿಯೇ ವಿಎಫ್​ಎಕ್ಸ್​ ಕೆಲಸವನ್ನು ಪರಿಪೂರ್ಣಗೊಳಿಸಲು ಹೆಚ್ಚುವರಿ ಸಮಯ ತೆಗೆದುಕೊಳ್ಳುತ್ತಿದ್ದೇವೆ" ಎಂದು ತಿಳಿಸಿದ್ದರು. ಈ ಚಿತ್ರಕ್ಕೆ ಅನನ್ಯಾ ಪಾಂಡೆ ಕೂಡ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: BAD: ಟೈಟಲ್​ನಿಂದಲೇ ಸದ್ದು ಮಾಡ್ತಿರುವ ಚಿತ್ರ.. ಕಾಮ ಪ್ರತಿನಿಧಿಸುವ ಪಾತ್ರದಲ್ಲಿ ಅಪೂರ್ವ ಭಾರದ್ವಾಜ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.