ETV Bharat / entertainment

ಸೂಪರ್​ ಹಿಟ್​ 'ಬ್ರಹ್ಮಾಸ್ತ್ರ'ಗೆ ಒಂದು ವರ್ಷ: ಸೀಕ್ವೆಲ್​ ಅಪ್​ಡೇಟ್​ಗಾಗಿ ಸ್ಪೆಷಲ್​ ವಿಡಿಯೋ ಹಂಚಿಕೊಂಡ ನಿರ್ದೇಶಕ - ಈಟಿವಿ ಭಾರತ ಕನ್ನಡ

Brahmastra Part Two- Dev: ಒಂದು ವರ್ಷದ ಸಂಭ್ರಮದಲ್ಲಿರುವ 'ಬ್ರಹ್ಮಾಸ್ತ್ರ' ಚಿತ್ರತಂಡ ಪಾರ್ಟ್​ 2 ಬಗ್ಗೆ ಅಪ್​ಡೇಟ್​ ನೀಡಿದೆ.

Brahmastra
'ಬ್ರಹ್ಮಾಸ್ತ್ರ
author img

By ETV Bharat Karnataka Team

Published : Sep 9, 2023, 4:37 PM IST

ನಿರ್ದೇಶಕ ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ' ಸಿನಿಮಾ ತೆರೆಕಂಡು ಇಂದಿಗೆ ಒಂದು ವರ್ಷ ಪೂರೈಸಿದೆ. ಕಳೆದ ಸೆಪ್ಟೆಂಬರ್​ 9 ರಂದು ತೆರೆಕಂಡು ಸೂಪರ್​ ಹಿಟ್ ಆಗಿ ಹೊರಹೊಮ್ಮಿತ್ತು. ರಣ್​​​ಬೀರ್ ಕಪೂರ್, ಆಲಿಯಾ ಭಟ್, ಅಮಿತಾಭ್ ಬಚ್ಚನ್, ನಾಗಾರ್ಜುನ್, ಮೌನಿ ರಾಯ್​ ಮುಖ್ಯಭೂಮಿಕೆಯಲ್ಲಿ ತೆರೆಕಂಡ ಈ ಚಿತ್ರದಲ್ಲಿ ಶಾರುಖ್ ಖಾನ್ ಕೂಡ ಅತಿಥಿ ಪಾತ್ರ ನಿರ್ವಹಿಸಿದ್ದರು. ರಾಲಿಯಾ ನಟನೆ ಸಿನಿ ರಸಿಕರ ಮನ ಗೆದ್ದಿತ್ತು. ಇದೀಗ ಅದರ ಮುಂದುವರಿದ ಭಾಗದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಬ್ರಹ್ಮಾಸ್ತ್ರ ಭಾಗ 1: ಶಿವ ಶೀರ್ಷಿಕೆಯಲ್ಲಿ ಬಿಡುಗಡೆಯಾಗಿತ್ತು. ಒಂದು ವರ್ಷದ ಸಂಭ್ರಮದಲ್ಲಿರುವ ಚಿತ್ರತಂಡ ಪಾರ್ಟ್​ 2 ಬಗ್ಗೆ ಅಪ್​ಡೇಟ್​ ನೀಡಿದೆ. ವಿಶೇಷ ಪೋಸ್ಟ್​ ಶೇರ್​ ಮಾಡಿರುವ ನಿರ್ದೇಶಕ ಅಯಾನ್ ಮುಖರ್ಜಿ, ಬ್ರಹ್ಮಾಸ್ತ್ರ ಭಾಗ 2: ದೇವ್​ ಚಿತ್ರಕ್ಕೆ ಸಂಬಂಧಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ಬ್ರಹ್ಮಾಸ್ತ್ರ ಭಾಗ 2: ದೇವ್ ಅರ್ಲಿ ಕಾನ್ಸೆಪ್ಟ್​ ಆರ್ಟ್​ ವರ್ಕ್​. ಬ್ರಹ್ಮಾಸ್ತ್ರ 2 ಮತ್ತು 3ರ ಕಥೆಯ ಕೆಲಸ ನಡೆಯುತ್ತಿದೆ. ಈ ವಿಶೇಷ ದಿನದಂದು ಸೀಕ್ವೆಲ್​ ಅಪ್​ಡೇಟ್​ ನೀಡಬೇಕು ಎಂದು ವಿಡಿಯೋ ಹಂಚಿಕೊಂಡಿದ್ದೇನೆ" ಎಂದು ಶೀರ್ಷಿಕೆ ನೀಡಿದ್ದಾರೆ.

ಇದಕ್ಕೂ ಮುನ್ನ ಚಿತ್ರದ ಮುಂದುವರೆದ ಭಾಗದ ಕುರಿತು ನಿರ್ದೇಶಕ ಅಯಾನ್ ಮುಖರ್ಜಿ ಮಾಹಿತಿ ನೀಡಿದ್ದರು. ಬ್ರಹ್ಮಾಸ್ತ್ರದ ಎರಡು ಭಾಗಗಳ ಕೆಲಸವನ್ನು ಏಕಕಾಲದಲ್ಲಿ ಮಾಡಲು ಯೋಜಿಸುತ್ತಿರುವುದಾಗಿ ತಿಳಿಸಿದ್ದರು. ರಣ್​​ಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಎರಡನೇ ಅಧ್ಯಾಯವು 2026ರಲ್ಲಿ ತೆರೆಕಾಣಲಿದೆ ಎಂದು ಕೂಡ ಮಾಹಿತಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ 'ದಿ ವ್ಯಾಕ್ಸಿನ್​ ವಾರ್​' ಫಸ್ಟ್​ ಲುಕ್​ ಪೋಸ್ಟರ್​ ರಿಲೀಸ್​

ಬ್ರಹ್ಮಾಸ್ತ್ರದ ಮುಂದುವರಿದ ಭಾಗಗಳನ್ನು ಬರೆಯಲು ಸ್ವಲ್ಪ ಸ್ವಲ್ಪ ಸಮಯ ತೆಗೆದುಕೊಳ್ಳಲಿದ್ದೇವೆ. ಈ ಚಿತ್ರದ ಸೀಕ್ವೆಲ್ ಸಂಬಂಧ ಸಾಕಷ್ಟು ನಿರೀಕ್ಷೆ ಇದೆ ಎಂದು ನನಗೆ ತಿಳಿದಿದೆ. ಸಿನಿ ರಸಿಕರು ಶೀಘ್ರದಲ್ಲೇ ಚಿತ್ರ ಬಿಡುಗಡೆಯಾಗಬೇಕೆಂದು ಬಯಸುತ್ತಾರೆ. ಆದರೆ, ನಾವು ಚಿತ್ರದ ಕಥೆ ಸಂಬಂಧ ಯಾವುದೇ ರಾಜಿ ಮಾಡಿಕೊಳ್ಳದೇ ಬರೆಯಬೇಕು. ಸುಮಾರು ಮೂರು ವರ್ಷ ಸಮಯ ಹಿಡಿಯಲಿದೆ ಎಂದು ತಿಳಿಸಿದ್ದರು.

ಅಲ್ಲದೇ, 'ಬ್ರಹ್ಮಾಸ್ತ್ರ' ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 400 ಕೋಟಿಗೂ ಹೆಚ್ಚು ಕಲೆಕ್ಷನ್​ ಮಾಡಿ ಯಶಸ್ವಿಯಾಗಿದ್ದರೂ ಕೂಡ ಚಲನಚಿತ್ರವು ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದಿದೆ. ಚಿತ್ರಕ್ಕೆ ಬಂದ ಟೀಕೆಗಳನ್ನು ತಾನು ಗಮನಿಸಿದ್ದೇನೆ. ಮುಂದಿನ ಹಂತದಲ್ಲಿ ತಪ್ಪುಗಳನ್ನು ಪುನರಾವರ್ತಿಸದಿರಲು ಪ್ರಯತ್ನಿಸುತ್ತೇನೆ ಎಂದು ಅಯಾನ್​ ಮುಖರ್ಜಿ ಇದೇ ವೇಳೆ ಹೇಳಿದ್ದರು.

ಬ್ರಹ್ಮಾಸ್ತ್ರ ಭಾಗ 1: ಶಿವ.. 2022ರ ಸೆಪ್ಟೆಂಬರ್ 9ರಂದು ಬಿಗ್ ಬಜೆಟ್ ಫ್ಯಾಂಟಸಿ ಸಾಹಸ ಮಹಾಕಾವ್ಯವಾಗಿ ಹೊರಹೊಮ್ಮಿತು. ಕಥೆಯು ಶಿವ (ರಣ್​ಬೀರ್ ಕಪೂರ್) ಸುತ್ತ ಸುತ್ತಿದೆ. ಆತ ತನ್ನ ವಿಶೇಷ ಶಕ್ತಿಗಳ ಮೂಲವನ್ನು ಹುಡುಕಲು ಪ್ರಯಾಣ ಬೆಳೆಸುತ್ತಾನೆ. ಇಶಾ (ಆಲಿಯಾ ಭಟ್) ಜೊತೆ ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುತ್ತಾನೆ. ಇದು ಚಿತ್ರದ ಕಥೆ. ಸ್ಟಾರ್ ಸ್ಟುಡಿಯೋಸ್ ಮತ್ತು ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದ ಚಲನಚಿತ್ರದಲ್ಲಿ ಹಿರಿಯ ನಟ ಅಮಿತಾಭ್​​ ಬಚ್ಚನ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಶಾರುಖ್ ಖಾನ್ ಮತ್ತು ನಾಗಾರ್ಜುನ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಭೂಗತ ಜಗತ್ತಿನ ಬೆದರಿಕೆ ಎದುರಿಸಿ ಮುನ್ನಡೆದ ಏಕೈಕ ನಟ ಶಾರುಖ್​ ಖಾನ್​: ನಿರ್ದೇಶಕ ಸಂಜಯ್​ ಗುಪ್ತಾ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.