ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಅವರ 'ಅವತಾರ್'ನ ಮುಂದುವರೆದ ಭಾಗ 'ಅವತಾರ್ ದಿ ವೇ ಆಫ್ ವಾಟರ್' ಕನ್ನಡ ಭಾಷೆಯಲ್ಲಿಯೂ ರಿಲೀಸ್ ಆಗಲಿದೆ. ಕೆಜಿಎಫ್, ಕಾಂತಾರ, ವಿಕ್ರಾಂತ್ ರೋಣ, ಜೇಮ್ಸ್ ಅಂತ ಸಿನಿಮಾಗಳಿಂದ ಸ್ಯಾಂಡಲ್ವುಡ್ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿದೆ. ಇದೀಗ ಹಾಲಿವುಡ್ ಸಿನಿಮಾವನ್ನು ಕನ್ನಡದಲ್ಲಿಯೂ ಬಿಡುಗಡೆ ಮಾಡಲಾಗುತ್ತಿದ್ದು, ಕನ್ನಡಿಗರ ಖುಷಿಗೆ ಕಾರಣವಾಗಿದೆ.
2009ರಲ್ಲಿ ಮೂಡಿ ಬಂದ ಅವತಾರ್ ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿತ್ತು. ಪರದೆ ಮೇಲೆ ಬರುವ ಒಂದೊಂದು ದೃಶ್ಯಗಳು ಕೂಡ ಬಹಳ ರೋಮಾಂಚನಕಾರಿಯಾಗಿದ್ದವು. ನಮ್ಮನ್ನು ಬೇರೆ ಪ್ರಪಂಚಕ್ಕೆ ಕೊಂಡೊಯ್ದ ಅನುಭವ ನೀಡಿತ್ತು.
-
ಡಿಸೆಂಬರ್ 16ರಂದು, ಪ್ಯಾಂಡೋರಗೆ ಮತ್ತೆ ಬನ್ನಿ. ಹೊಚ್ಚಹೊಸ ಟ್ರೆಯಲರ್ ಅನ್ನು ನೋಡಿ ಮತ್ತು ಆನಂದಿಸಿ #AvatarTheWayOfWater 3Dಯಲ್ಲಿ https://t.co/hqEZajzZ4M
— 20th Century Studios India (@20thCenturyIN) November 10, 2022 " class="align-text-top noRightClick twitterSection" data="
">ಡಿಸೆಂಬರ್ 16ರಂದು, ಪ್ಯಾಂಡೋರಗೆ ಮತ್ತೆ ಬನ್ನಿ. ಹೊಚ್ಚಹೊಸ ಟ್ರೆಯಲರ್ ಅನ್ನು ನೋಡಿ ಮತ್ತು ಆನಂದಿಸಿ #AvatarTheWayOfWater 3Dಯಲ್ಲಿ https://t.co/hqEZajzZ4M
— 20th Century Studios India (@20thCenturyIN) November 10, 2022ಡಿಸೆಂಬರ್ 16ರಂದು, ಪ್ಯಾಂಡೋರಗೆ ಮತ್ತೆ ಬನ್ನಿ. ಹೊಚ್ಚಹೊಸ ಟ್ರೆಯಲರ್ ಅನ್ನು ನೋಡಿ ಮತ್ತು ಆನಂದಿಸಿ #AvatarTheWayOfWater 3Dಯಲ್ಲಿ https://t.co/hqEZajzZ4M
— 20th Century Studios India (@20thCenturyIN) November 10, 2022
'ಅವತಾರ್: ದಿ ವೇ ಆಫ್ ವಾಟರ್' ಶೀರ್ಷಿಕೆಯುಳ್ಳ ಚಿತ್ರದ ಎರಡನೇ ಭಾಗ ಡಿ.16ಕ್ಕೆ ಬಿಡುಗಡೆ ಆಗಲಿದೆ. ಜನರನ್ನು ಮತ್ತೆ ಅವತಾರ್ ಲೋಕಕ್ಕೆ ಕೊಂಡೊಯ್ಯುವ ಮೊದಲು ಅವತಾರ್ ಭಾಗ 1ನ್ನು ರೀ-ರಿಲೀಸ್ ಕೂಡ ಮಾಡಲಾಗಿತ್ತು. ಸೆ.23ಕ್ಕೆ ಮರು ಬಿಡುಗಡೆ ಆದ ಅವತಾರ್ ಭಾಗ 1 ಕೇವಲ 2 ವಾರಗಳ ಕಾಲ ಮಾತ್ರ ಥಿಯೇಟರ್ಗಳಲ್ಲಿ ಪ್ರದರ್ಶನಗೊಂಡಿತು.
-
Namaste India!
— Jon Landau (@jonlandau) November 10, 2022 " class="align-text-top noRightClick twitterSection" data="
I see you. Your diversity continues to amaze me. I am so excited for you to experience #AvatarTheWayOfWater in 6 languages - English, Hindi, Tamil, Telugu, Malayalam, and Kannada. Let's celebrate the return to Pandora on 16th Dec. Please enjoy the Kannada trailer. https://t.co/MT9IziYTXS
">Namaste India!
— Jon Landau (@jonlandau) November 10, 2022
I see you. Your diversity continues to amaze me. I am so excited for you to experience #AvatarTheWayOfWater in 6 languages - English, Hindi, Tamil, Telugu, Malayalam, and Kannada. Let's celebrate the return to Pandora on 16th Dec. Please enjoy the Kannada trailer. https://t.co/MT9IziYTXSNamaste India!
— Jon Landau (@jonlandau) November 10, 2022
I see you. Your diversity continues to amaze me. I am so excited for you to experience #AvatarTheWayOfWater in 6 languages - English, Hindi, Tamil, Telugu, Malayalam, and Kannada. Let's celebrate the return to Pandora on 16th Dec. Please enjoy the Kannada trailer. https://t.co/MT9IziYTXS
ಕಳೆದ ವಾರ ಅವತಾರ್ 2 ಟ್ರೈಲರ್ ರಿಲೀಸ್ ಆಗಿತ್ತು. ಡಿಸೆಂಬರ್ 16ಕ್ಕೆ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ ಎಂದು ತಿಳಿಸಲಾಗಿತ್ತು. ಇದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಕನ್ನಡಿಗರ ಒತ್ತಾಯಕ್ಕೆ ಮಣಿದಿರುವ ಚಿತ್ರದ ಭಾರತದಲ್ಲಿನ ಹಂಚಿಕೆದಾರರಾದ '20th ಸೆಂಚುರಿ ಸ್ಟುಡಿಯೋಸ್ ಇಂಡಿಯಾ' ಕಂಪನಿ ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಚಿತ್ರದ ಕನ್ನಡ ಟ್ರೈಲರ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ.
ಹಾಲಿವುಡ್ ನಿರ್ಮಾಪಕ ಜಾನ್ ಲ್ಯಾಂಡೌ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ನಮಸ್ತೆ ಇಂಡಿಯಾ, ನಾನು ಭಾರತದ ಬಹುಭಾಷಾ ಸಂಸ್ಕೃತಿಯನ್ನು ಗೌರವಿಸುತ್ತೇನೆ, ಆರು ಭಾಷೆಗಳಲ್ಲಿ ಅವತಾರ್ 2 ಬಿಡುಗಡೆಯಾಗುತ್ತಿದೆ. ಡಿಸೆಂಬರ್ 16ರಂದು ಪಂಡೋರಗೆ ಬನ್ನಿ. ಈಗ ಹೊಚ್ಚ ಹೊಸ ಟ್ರೇಲರ್ ಅನ್ನು ನೋಡಿ ಮತ್ತು ಆನಂದಿಸಿ ಎಂದು ಹೇಳಿದ್ದಾರೆ.
- " class="align-text-top noRightClick twitterSection" data="">
ಇದನ್ನೂ ಓದಿ: ನೋಡಿ ‘ಅವತಾರ್: ದಿ ವೇ ಆಫ್ ವಾಟರ್’ ಟೀಸರ್; ಡಿ.16ಕ್ಕೆ ಕನ್ನಡದಲ್ಲೂ ಚಿತ್ರ ತೆರೆಗೆ
ಅವತಾರ್ ಸರಣಿಯಿಂದ ಐದು ಸಿನಿಮಾಗಳು ಹೊರ ಬರಲಿವೆ. ಮೊದಲ ಸಿನಿಮಾ 2009ರಲ್ಲಿ ತೆರೆಗೆ ಅಪ್ಪಳಿಸಿತ್ತು. ಇದಾದ ಬಳಿಕ ಸೀಕ್ವೆಲ್ ಬರಲು ಸುಮಾರು 13 ವರ್ಷಗಳೇ ಬೇಕಾಯಿತು. ಇನ್ನು, ಹಾಲಿವುಡ್ ಮಂದಿಗೆ ಡಿಸೆಂಬರ್ ತಿಂಗಳು ತುಂಬಾನೇ ವಿಶೇಷ. ಕ್ರಿಸ್ಮಸ್ ಇರುವುದರಿಂದ ದುಬಾರಿ ವೆಚ್ಚದ ಸಿನಿಮಾಗಳು ಈ ಸಂದರ್ಭದಲ್ಲೇ ರಿಲೀಸ್ ಆಗುತ್ತವೆ. ಕ್ರಿಸ್ಮಸ್ ಪ್ರಯುಕ್ತ 2022ರ ಡಿಸೆಂಬರ್ 16ರಂದು ಅವತಾರ್ ಎರಡನೇ ಭಾಗ ರಿಲೀಸ್ ಆಗುತ್ತಿದೆ.
ಇದನ್ನೂ ಓದಿ: ಸೆ.23ಕ್ಕೆ ಅವತಾರ್ ಮರು ಬಿಡುಗಡೆ.. ಡಿ.16ಕ್ಕೆ ಅವತಾರ್ 2 ರಿಲೀಸ್
ಚಿತ್ರದ ಟೀಸರ್‌ನ ದೃಶ್ಯವೈಭವ ನೋಡಿ ಸಿನಿಮಾಪ್ರಿಯರು ನಿಬ್ಬೆರಗಾಗಿದ್ದಾರೆ. ಭೂಮಿಯಂತೆ ಕಾಣುವ, ಆಕರ್ಷಕ ಪಂಡೋರಾ ಜಗತ್ತಿನಲ್ಲಿ ವಾಸಿಸುವ 'ನಾವಿ' ಜೀವಿಗಳ ಕುಟುಂಬ ಮತ್ತಷ್ಟು ವಿಸ್ತಾರಗೊಂಡಿದೆ. ಅವರೊಂದಿಗೆ ಬೆಸೆದುಕೊಂಡಿರುವ ಹಾರುವ ಜೀವಿಗಳ ಜೊತೆಗೆ ಈಜುವ ವಿಶೇಷ ಜಲಚರಗಳ ದರ್ಶನವೂ ಆಗುತ್ತದೆ. ನೀರಿನೊಳಗೆ, ಮೇಲೆ.. ಹೀಗೆ ನೀರು ಇಲ್ಲಿನ ಕಥಾವಸ್ತು ಎಂಬಂತೆ ಭಾಸವಾಗುತ್ತದೆ.