ಮುಂಬೈ (ಮಹಾರಾಷ್ಟ್ರ): ದಿ ಕೇರಳ ಸ್ಟೋರಿಯ ಯಶಸ್ಸು ಹೊಸ ಯಶೋಗಾಥೆಯನ್ನೇ ಬರೆದಿದೆ. ಚಿತ್ರ 100 ಕೋಟಿ ಕ್ಲಬ್ ಸೇರಿದೆ. ವಿವಾದಾತ್ಮಕ ಸಿನಿಮಾದಿಂದ ಅಪರಿಚಿತ ಮುಖವಾಗಿದ್ದ ನಟಿ ಅದಾ ಶರ್ಮಾ ಈಗ ಸ್ಟಾರ್ ಆಗಿದ್ದಾರೆ. ಸಂದರ್ಶನವೊಂದರಲ್ಲಿ, ಅವರು ಇಲ್ಲಿಯವರೆಗಿನ ಪ್ರಯಾಣಕ್ಕೆ ಸಂಬಂಧಿಸಿದ ಭಯ ಹಂಚಿಕೊಂಡಿದ್ದಾರೆ. ಇದು ಅವರ ಕೊನೆಯ ಚಿತ್ರ ಎಂದು ಯಾವಾಗಲೂ ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ನಾನು ಯಾವಾಗಲೂ ಇದೇ ನನ್ನ ಕೊನೆಯ ಚಿತ್ರ ಎಂದು ಭಾವಿಸಿ ಕೆಲಸ ಮಾಡುತ್ತೇನೆ. ನನಗೆ ಮತ್ತೊಂದು ಅವಕಾಶ ಸಿಗಬಹುದು ಎಂದು ತಿಳಿದುಕೊಳ್ಳುತ್ತೇನೆ. ಆದರೆ, ಈ ಚಿತ್ರದ ನಂತರ ಮುಂದೆ ಏನಾಗುತ್ತದೆ ಎಂದು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ. ನಾನು ಮರುಜನ್ಮ ಪಡೆಯಬೇಕು ಎಂದು ಯೋಚಿಸುತ್ತಿದ್ದೆ ಎಂದು ಅದಾ ಶರ್ಮಾ ಹೇಳಿದ್ದಾರೆ.
ಪ್ರೇಕ್ಷಕರ ಪ್ರೀತಿ: ಯಾರಾದರೂ ನನ್ನನ್ನು ನಂಬಿ ಮುಂದಿನ ಚಿತ್ರವನ್ನು ಏಕೆ ಕೊಡುತ್ತಾರೆಯೇ ಎಂದು ನಾನು ಯೋಚಿಸುತ್ತಿರುತ್ತೇನೆ. ಆದರೆ, ಪ್ರೇಕ್ಷಕರು ನನ್ನ ಬಗ್ಗೆ ಹೊಂದಿದ್ದ ಕನಸು ಯಾವಾಗಲೂ ದೊಡ್ಡದಾಗಿದೆ ಎಂದು ನಾನು ಭಾವಿಸುತ್ತೇನೆ. ಪ್ರೇಕ್ಷಕರು ನನಗೆ ಇಂತಹದೊಂದು ಪಾತ್ರ ಸಿಗಬೇಕಾಗಿತ್ತು ಎಂದು ಕೇಳುತ್ತಿದ್ದರು. ಅವರ ಕನಸು ನನಸಾಯಿತು ಎಂದು ನಾನು ಭಾವಿಸುತ್ತೇನೆ. ನಾನು ಅದೃಷ್ಟವಂತೆ. ನಾನು ಆನೆಯೊಂದಿಗೆ ಅಥವಾ ನಾಯಿಯೊಂದಿಗೆ ಆಟವಾಡಲು ಬಯಸುವಂತೆಯೇ ನನ್ನ ಕನಸುಗಳು ಯಾವಾಗಲೂ ಚಿಕ್ಕದಾಗಿದ್ದವು. ನಾನು ಒಳ್ಳೆಯ ಪಾತ್ರವನ್ನು ಮಾಡಬೇಕು ಎಂದು ಬಯಸಿದ್ದೆ, ಆದರೆ ನಾನು ಮುಂದೆ ಎಷ್ಟು ಚಿತ್ರಗಳನ್ನು ಮಾಡುತ್ತೇನೆ ಎಂಬುದರ ಬಗ್ಗೆ ಯೋಚಿಸಲಿಲ್ಲ ಎಂದು ಹೇಳಿದರು.
ನಾವು ಸಿನಿಮಾ ಮಾಡಲು ಆರಂಭಿಸಿದಾಗ ಕೇವಲ ಹುಡುಗಿಯರಿಗೆ ಅರಿವು ಮೂಡಿಸುವುದಷ್ಟೇ ನನ್ನ ಗುರಿಯಾಗಿತ್ತು. ಇಷ್ಟು ಜನ ಸಿನಿಮಾ ನೋಡಿ, ಮುಚ್ಚಿಟ್ಟಿದ್ದ ಸತ್ಯ ಈಗ ಗೊತ್ತಾಗಿದ್ದು ಖುಷಿ ತಂದಿದೆ. ಜನರು ನಮ್ಮ ಕೆಲಸವನ್ನು ನೋಡಬೇಕೆಂಬುದು ಪ್ರತಿಯೊಬ್ಬ ಕಲಾವಿದರ ಬಯಕೆ ಆಗಿರುತ್ತದೆ. ನನಗೆ ಅಂತಹ ಅವಕಾಶ ಸಿಕ್ಕಿರುವುದು ತಮಗೆ ಖುಷಿ ತಂದಿದೆ. ಜನರು ಚಿತ್ರವನ್ನು ವೀಕ್ಷಿಸುತ್ತಿದ್ದಾರೆ ಮತ್ತು ನನ್ನ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಮೇ 5 ರಂದು ಬಿಡುಗಡೆಯಾಗಿರುವ ಕೇರಳ ಸ್ಟೋರಿ ಮೂವರು ಯುವತಿಯರನ್ನು ಬಲವಂತವಾಗಿ ಪ್ರೀತಿಸಿ ನಂತರ ಐಸಿಸ್ಗೆ ಸೇರಿಸಿಕೊಳ್ಳುವುದರ ಕಥೆಯಾಗಿದೆ. ಚಿತ್ರ ತೆರೆಗೆ ಬರುವ ಮುನ್ನವೇ ವಿವಾದಗಳ ಸುಳಿಯಲ್ಲಿ ಸಿಲುಕಿತ್ತು. ಟ್ರೇಲರ್ ಅನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಇದು ಸಾಕಷ್ಟು ಲೈಕ್ಸ್ಗಳನ್ನು ಕೂಡಾ ಪಡೆದುಕೊಂಡಿತ್ತು. ಆದರೆ, ರಾಜಕೀಯ ವಿಭಾಗವು ಅದರ ವಿರುದ್ಧ ನಿಂತಿದೆ. ಇನ್ನು ಈ ಚಿತ್ರ 9 ದಿನದಲ್ಲಿ ಚಿತ್ರ 100 ಕೋಟಿ ಕ್ಲಬ್ ಸೇರಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡದಲ್ಲಿ ಚಿತ್ರವು ತೆರಿಗೆ ಮುಕ್ತವಾಗಿದ್ದರೆ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳು ಈ ಚಿತ್ರವನ್ನು ನಿಷೇಧಿಸಿವೆ.
ಓದಿ: 100 ಕೋಟಿ ಕ್ಲಬ್ ಸೇರಿದ 'ದಿ ಕೇರಳ ಸ್ಟೋರಿ'.. ಟೀಕೆಗೊಳಗಾದರೂ 2023ರ ಯಶಸ್ವಿ ಚಲನಚಿತ್ರವಿದು