ಟೈಟಲ್ ಹಾಗೂ ಟೀಸರ್ನಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಸಿನಿಮಾ 'ಉಸಿರೇ ಉಸಿರೇ'. ಬಿಗ್ ಬಾಸ್ ಖ್ಯಾತಿಯ ರಾಜೀವ್ ಅಭಿನಯದ ಉಸಿರೇ ಉಸಿರೇ ಚಿತ್ರಕ್ಕೆ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಎಂಟ್ರಿಯಾಗುತ್ತಲೇ ಚಿತ್ರಕ್ಕೆ ಹೈ ವೋಲ್ಟೇಜ್ ಸಿಕ್ಕಿತ್ತು. ಶೂಟಿಂಗ್ ಸಮಯದಲ್ಲೇ ಚಿತ್ರ ಗಮನ ಸೆಳೆದಿತ್ತು. ಇದೀಗ ಚಿತ್ರದ ಟೀಸರ್ ಅನಾವರಣಗೊಂಡು ಪ್ರೇಕ್ಷಕರ ಹೃದಯ ಬಡಿತ ಹೆಚ್ಚಿಸಿತ್ತು.
ಇತ್ತೀಚೆಗೆ ಈ ಚಿತ್ರದ ಟೀಸರ್ ಅನ್ನು ಬಳ್ಳಾರಿ ಶ್ರೀ ರೇಣುಕಾ ಎಲ್ಲಮ್ಮ ಜಾತ್ರೆಯಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರ ಸಮ್ಮುಖದಲ್ಲಿ ಸದ್ಗುರು ಜುಮಾರಿ ತಾತಾಯ್ಯ ಅವರಿಂದ ಅನಾವರಣಗೊಳಿಸಲಾಗಿದೆ. ಅಂದು ಸಂಜೆ ಮಂತ್ರಾಲಯದ ಗುರು ಸಾರ್ವಭೌಮರ ಸನ್ನಿಧಿಯಲ್ಲಿ ಶ್ರೀ ಸುಬುಧೇಂದ್ರ ತೀರ್ಥರು ಕೂಡ ಟೀಸರ್ ಬಿಡುಗಡೆ ಮಾಡಿ ಆಶೀರ್ವಾದಿಸಿದ್ದಾರೆ. ನಾಯಕ ರಾಜೀವ್, ನಾಯಕಿ ಶ್ರೀಜಿತ ಹಾಗೂ ನಿರ್ದೇಶಕ ಸಿ.ಎಂ. ವಿಜಯ್ ಸೇರಿ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ಟೀಸರ್ ಬಿಡುಗಡೆ ಆಗಿ ಎರಡು ದಿನಗಳಲ್ಲಿ ಒಂದು ಮಿಲಿಯನ್ಗೂ ಅಧಿಕ ವೀಕ್ಷಣೆಯಾಗಿ, ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
- " class="align-text-top noRightClick twitterSection" data="">
ಟೀಸರ್ನಲ್ಲಿರುವ ಸಂಗೀತ, ಹೀರೋನ ಎಂಟ್ರಿ, ಅಲಿ, ಬ್ರಹ್ಮಾನಂದಮ್ ಕಾಮಿಡಿ, ದೇವರಾಜ್ ಅವರ ಪಾತ್ರ ಹಾಗೂ ಸಂಭಾಷಣೆ ಪ್ರೇಕ್ಷಕರ ಮನಸನ್ನು ದೋಚಿ ಒಂದೇ ದಿನದಲ್ಲಿ ಒಂದು ಮಿಲಿಯನ್ಗೂ ಹೆಚ್ಚು ವೀಕ್ಷಣೆ ಪಡೆದಿದೆ. ಈ ಚಿತ್ರದಲ್ಲಿ ನಾಯಕ ರಾಜೀವ್ ಹಾಗೂ ನಾಯಕಿ ಶ್ರೀಜಿತ ಅಲ್ಲದೇ, ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಅಲಿ, ಬ್ರಹ್ಮಾನಂದಮ್, ಸಾಧುಕೋಕಿಲ, ದೇವರಾಜ್, ಮಂಜು ಪಾವಗಡ, ಜಗಪ್ಪ, ಶಿವು, ಸುಶ್ಮಿತಾ ಮತ್ತು ವಿಶೇಷ ಪಾತ್ರವೊಂದರಲ್ಲಿ ಕಿಚ್ಚ ಸುದೀಪ್ ಇದ್ದಾರೆ.
ಇದನ್ನೂ ಓದಿ: ವಿಡಿಯೋ: ಮೂಗುತಿ ಚುಚ್ಚಿಸಿಕೊಳ್ಳಲು ರಾಜ್ ಬಿ ಶೆಟ್ಟಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ - 'ಟೋಬಿ' ಹಿಂದಿದೆ ನೋವಿನ ಕತೆ!
ಸಿ.ಎಂ. ವಿಜಯ್ ನಿರ್ದೇಶನದ ಈ ಚಿತ್ರಕ್ಕೆ ಮನು ಬಿ.ಕೆ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಮೋಹನ್ ಮತ್ತು ಹೈಟ್ ಮಂಜು ಅವರ ನೃತ್ಯ ನಿರ್ದೇಶನ ಇದೆ. ವಿವೇಕ್ ಚಕ್ರವರ್ತಿಯ ಸಂಗೀತ ಈ ಚಿತ್ರಕ್ಕಿರಲಿದೆ. ಎನ್ ಗೊಂಬೆ ಲಾಂಛನದಲ್ಲಿ ಪ್ರದೀಪ್ ಯಾದವ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹಲವು ವಿಶೇಷತೆಗಳಿಂದ ಸದ್ದು ಮಾಡುತ್ತಿರುವ ಉಸಿರೇ ಉಸಿರೇ ಚಿತ್ರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ರಿಷಬ್ ಶೆಟ್ಟಿ ನಿರ್ಮಾಣದ 'ಶಿವಮ್ಮ'ನಿಗೆ ಪ್ರಶಸ್ತಿಗಳ ಮಳೆ - ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮನ್ನಣೆ
ಸ್ಯಾಂಡಲ್ವುಡ್ನಲ್ಲಿ ಸಿಸಿಎಲ್ ಮೂಲಕ ಜನಪ್ರಿಯತೆ ಪಡೆದ ಇವರು ಕಿಚ್ಚ ಸುದೀಪ್ ನಿರೂಪಣೆಯ ಜನಪ್ರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗಿ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡರು. ಇದೀಗ 'ಉಸಿರೇ ಉಸಿರೇ' ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸ್ನೇಹಿತ ಸುದೀಪ್ ಸಹ ಸಾಥ್ ಕೊಟ್ಟಿದ್ದು, ಎಷ್ಟರ ಮಟ್ಟಿಗೆ ಸಿನಿಮಾ ಗೆಲ್ಲಲಿದೆ ಅನ್ನೋದನ್ನು ಕಾದು ನೋಡಬೇಕಿದೆ.