ETV Bharat / entertainment

ಒಡಹುಟ್ಟಿದವರ ದಿನ: ಸಹೋದರನ ಜೊತೆಗಿನ ವಿಶೇಷ ಫೋಟೋ ಹಂಚಿಕೊಂಡ ಅಥಿಯಾ ಶೆಟ್ಟಿ - ಅಥಿಯಾ ಶೆಟ್ಟಿ ಫೋಟೋ ಪೋಸ್ಟ್

ಸುನೀಲ್​ ಶೆಟ್ಟಿ ಮಗಳು, ಬಾಲಿವುಡ್​ ನಟಿ ಅಥಿಯಾ ಶೆಟ್ಟಿ ಒಡಹುಟ್ಟಿದವರ ದಿನಕ್ಕೆ ತಮ್ಮ ಮದುವೆ ದಿನ ಸಹೋದರ ಅಹಾನ್​ ಶೆಟ್ಟಿ ಜೊತೆಗಿನ ಫೋಟೋ ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ.

Athiya Shetty shared a special photo
ಸಹೋದರನ ಜೊತೆಗಿನ ವಿಶೇಷ ಫೋಟೋ ಹಂಚಿಕೊಂಡ ಅಥಿಯಾ ಶೆಟ್ಟಿ
author img

By

Published : Apr 10, 2023, 8:11 PM IST

ಒಡಹುಟ್ಟಿದವರು ನಮ್ಮ ಮೊದಲನೇ ಬೆಸ್ಟ್​ ಫ್ರೆಂಡ್ಸ್​ ಆಗಿರ್ತಾರೆ. ನಮ್ಮ ರಹಸ್ಯಗಳು, ದುಃಖ ಮತ್ತು ಸಂತೋಷವನ್ನು ಹಂಚಿಕೊಳ್ಳಲು ಅವರೇ ಸುರಕ್ಷಿತ ಮನಸ್ಸುಗಳು. ಒಂದೇ ಕುಟುಂಬದಲ್ಲಿ ಬೆಳೆದಿರುವುದು ಇದಕ್ಕೆ ಬಲವಾದ ಕಾರಣ. ಇಂದು ವಿಶ್ವ ಒಡಹುಟ್ಟಿದವರ ದಿನ. ಒಡಹುಟ್ಟುದವರ ದಿನದ ಸಂದರ್ಭದಲ್ಲಿ ಬಾಲಿವುಡ್​ ನಟಿ ಅಥಿಯಾ ಶೆಟ್ಟಿ ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಸಹೋದರ ಅಹಾನ್​ ಶೆಟ್ಟಿ ಜೊತೆಗಿನ ಹೃದಯಸ್ಪರ್ಶಿ ಫೋಟೋ ಹಂಚಿಕೊಂಡಿದ್ದಾರೆ.

ಅಥಿಯಾ ಶೆಟ್ಟಿ ಭಾರತದ ಕ್ರಿಟಿಗ ಕೆ.ಎಲ್.ರಾಹುಲ್​ ಅವರನ್ನು ಮದುವೆಯಾಗಿದ್ದಾರೆ. ಮದುವೆ ಸಂದರ್ಭದ ಇದುವರೆಗೆ ಎಲ್ಲೂ ಹಂಚಿಕೊಂಡಿರದ ಸಹೋದರನ ಜೊತೆಗಿನ ಫೋಟೋವನ್ನು ಅವರು ಶೇರ್ ಮಾಡಿದ್ದಾರೆ. ಈ ಮೂಲಕ ಒಡಹುಟ್ಟಿದವರ ದಿನಕ್ಕೆ ಶುಭಾಶಯವನ್ನು ಸಹೋದರನಿಗೆ ತಿಳಿಸಿದ್ದಾರೆ. ಇನ್​ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಪೋಸ್ಟ್‌ ಮಾಡಿರುವ ಅಥಿಯಾ ಶೆಟ್ಟಿ, "ಯಾವಾಗಲೂ ನನಗೆ ದಾರಿ ತೋರಿಸುತ್ತಿರುವೆ" ಎಂದು ಬರೆದುಕೊಂಡಿದ್ದು, ಅಹಾನ್​ ಶೆಟ್ಟಿ ಅವರನ್ನು ಟ್ಯಾಗ್​ ಮಾಡಿದ್ದಾರೆ.

ಅಥಿಯಾ ಫೋಟೋ ಪೋಸ್ಟ್​ ಮಾಡಿದ ತಕ್ಷಣ, ಅಭಿಮಾನಿಗಳು ಕಾಮೆಂಟ್​ಗಳ ಸುರಿಮಳೆ ಸುರಿಸಲು ಪ್ರಾರಂಭಿಸಿದ್ದಾರೆ. ಕಾಮೆಂಟ್​ಗಳ ತುಂಬಾ ಅಥಿಯಾ ಶೆಟ್ಟಿ ಹಾಗೂ ಅಹಾನ್​ ಶೆಟ್ಟಿ, ಸಹೋದರ- ಸಹೋದರಿ ಜೋಡಿಯನ್ನು ಹೊಗಳಿದ್ದಾರೆ. ಅಭಿಮಾನಿಯೊಬ್ಬರು, "ಜಗತ್ತಿನ ಅತ್ಯುತ್ತಮ ಸಹೋದರ ಸಹೋದರಿ, ದೇವರು ನಿಮ್ಮಿಬ್ಬರನ್ನೂ ಸಾಕಷ್ಟು ಪ್ರೀತಿಯಿಂದ ಆಶೀರ್ವದಿಸಲಿ. ಪಂಜಾಬ್​ನಿಂದ ನಾನು ನಿಮ್ಮಿಬ್ಬರ ದೊಡ್ಡ ಅಭಿಮಾನಿ @athiyashetty @ahan.shetty️" ಎಂದು ಹರಸಿದ್ದಾರೆ. ಮತ್ತೊಬ್ಬರು, "ಸಹೋದರಿಯರ ಬಂಧವನ್ನು ಪ್ರೀತಿಸಿ" ಎಂದಿದ್ದಾರೆ.

ಅಥಿಯಾ ಶೆಟ್ಟಿ ಹಂಚಿಕೊಂಡಿರುವ ಫೋಟೋದಲ್ಲಿ, ಅಥಿಯಾ ತನ್ನ ವಧುವಿನ ಉಡುಪಿನಲ್ಲಿ ಕಾಣಿಸುತ್ತಿದ್ದಾರೆ. ಸಹೋದರ ಅಹಾನ್​ ಶೆಟ್ಟಿ ಶೇರ್ವಾನಿ ತೊಟ್ಟಿದ್ದು, ಸಹೋದರಿಯ ಕೈಹಿಡಿದು ಮನೆಯಿಂದ ಹೊರಗೆ ಕರೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಈ ಚಿತ್ರ ಅಥಿಯಾ ಶೆಟ್ಟಿ ಮದುವೆ ದಿನದ್ದು. ಮೋತಿಚೂರ್​ ಚಕ್ನಾಚೂರ್​ ಸಿನಿಮಾದ ನಟಿ ಅಥಿಯಾ ಶೆಟ್ಟಿ ತಮ್ಮ ಸಹೋದರನ ಜೊತೆ ಫೋಟೋ ಹಂಚಿಕೊಂಡಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ರಾಖಿ ಹಬ್ಬದಂದು ಸಹೋದರನೊಂದಿಗೆ ಇನ್​ಸ್ಟಾಗ್ರಾಂನಲ್ಲಿ ಥ್ರೋಬ್ಯಾಕ್​ ಫೋಟೋ ಹಂಚಿಕೊಂಡಿದ್ದರು. "ರಾಖಿ ಹಬ್ಬದ ಶುಭಾಶಯಗಳು, ಹೌದು ಅವನು ಇನ್ನೂ ಚೆಕರ್ಡ್ ಪೈಜಾಮಾಗಳನ್ನು ಧರಿಸುತ್ತಾನೆ ಮತ್ತು ಅವನ ನೀರಿನ ಬಾಟಲಿಯೊಂದಿಗೆ ಇನ್ನೂ ಗೀಳನ್ನು ಹೊಂದಿದ್ದಾನೆ." ಎಂದು ಕ್ಯಾಪ್ಷನ್​ ಬರೆದುಕೊಂಡಿದ್ದರು.

ಅಥಿಯಾ 2015 ರಲ್ಲಿ ನಿಖಿಲ್ ಅಡ್ವಾಣಿ ನಾಯಕನಾಗಿ ಅಭಿನಯಿಸಿದ್ದ ರೋಮ್ಯಾಂಟಿಕ್ ಆ್ಯಕ್ಷನ್ ಚಿತ್ರ 'ಹೀರೋ' ಮೂಲಕ ಸಿನಿಪಯಣ ಪ್ರಾರಂಭಿಸಿದ್ದರು. ಈ ಚಲನಚಿತ್ರವು ಅದೇ ಹೆಸರಿನ 1983 ರ ಕ್ಲಾಸಿಕ್‌ನ ರಿಮೇಕ್ ಆಗಿದೆ. ಸುಭಾಷ್ ಘಾಯ್ ಸಹ-ನಿರ್ಮಾಣ ಮಾಡಿದ್ದರು. 2017ರಲ್ಲಿ ಮುಬಾರಕನ್, 2018 ರಲ್ಲಿ ನವಾಬ್ಜಾದೆ ಮತ್ತು 2019ರಲ್ಲಿ ಮೋತಿಚೂರ್ ಚಕ್ನಾಚೂರ್ ಸಿನಿಮಾಗಳಲ್ಲಿ ಅಭಿನಯಿಸಿದ್ದರು.

ಇದನ್ನೂ ಓದಿ: ಬರ್ತ್‌ಡೇ ದಿನ ಅಪಾರ ಪ್ರೀತಿ ತೋರಿದ ಅಭಿಮಾನಿಗಳಿಗೆ ಅಲ್ಲು ಅರ್ಜುನ್​ ಕೃತಜ್ಞತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.