ETV Bharat / entertainment

ರಂಗೀಲಾ, ದೇವದಾಸ್​ ಸೂಪರ್​ಹಿಟ್​ ಸಿನಿಮಾಗಳ ಕಲಾ ನಿರ್ದೇಶಕ ನಿತೀನ್​​ ದೇಸಾಯಿ ಆತ್ಮಹತ್ಯೆ - ಕಲಾ ನಿರ್ದೇಶಕ ನಿತೀನ್​​ ದೇಸಾಯಿ

ಹಲವು ಸೂಪರ್​ಹಿಟ್​ ಸಿನಿಮಾಗಳನ್ನು ನೀಡಿದ್ದ ಕಲಾ ನಿರ್ದೇಶನ ನಿತೀನ್​ ಚಂದ್ರಕಾಂತ್​ ದೇಸಾಯಿ ಅವರು ಮುಂಬೈಯ ತಮ್ಮ ಸ್ಟುಡಿಯೋದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿನಿಮಾ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕಲಾ ನಿರ್ದೇಶಕ ನಿತೀನ್​​ ದೇಸಾಯಿ ಆತ್ಮಹತ್ಯೆ
ಕಲಾ ನಿರ್ದೇಶಕ ನಿತೀನ್​​ ದೇಸಾಯಿ ಆತ್ಮಹತ್ಯೆ
author img

By

Published : Aug 2, 2023, 11:32 AM IST

ಮುಂಬೈ: ಸಿನಿಮಾ ರಂಗದಲ್ಲಿ ಹುಚ್ಚೆಬ್ಬಿಸಿದ್ದ ಹಮ್ ದಿಲ್ ದೇ ಚುಕೇ ಸನಮ್, ರಂಗೀಲಾ, ದೇವದಾಸ್​​ನಂತಹ ಸೂಪರ್​ಹಿಟ್​ ಸಿನಿಮಾಗಳ ಕಲಾ ನಿರ್ದೇಶಕ ನಿತೀನ್​ ಚಂದ್ರಕಾಂತ್​ ದೇಸಾಯಿ ಅವರು ಇಲ್ಲಿನ ತಮ್ಮ ಸ್ಟುಡಿಯೋದಲ್ಲಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್​ ತನಿಖೆ ನಡೆಯುತ್ತಿದೆ.

ಮುಂಬೈನ ಕರ್ಜಾತ್‌ನಲ್ಲಿರುವ ಎನ್‌ಡಿ ಸ್ಟುಡಿಯೋದಲ್ಲಿ ಖ್ಯಾತ ಕಲಾ ನಿರ್ದೇಶಕ ನಿತಿನ್ ಚಂದ್ರಕಾಂತ್ ದೇಸಾಯಿ ಅವರ ಮೃತದೇಹ ಪತ್ತೆಯಾಗಿದೆ. ಅವರಿಗೆ 58 ವರ್ಷ ವಯಸ್ಸಾಗಿತ್ತು. ಸ್ಟುಡಿಯೋದಲ್ಲಿ ಯಾವುದೇ ಡೆತ್​ನೋರ್ಟ್​ ಕೂಡ ಸದ್ಯಕ್ಕೆ ಪತ್ತೆಯಾಗಿಲ್ಲ. ದೇಸಾಯಿ ಅವರ ನಿಧನಕ್ಕೆ ಹಲವಾರು ಸಿನಿಮಾ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕಲಾತ್ಮಕ ಸಿನಿಮಾಗಳಿಗೆ ಹೆಸರಾಗಿದ್ದ ನಿತಿನ್​ ಚಂದ್ರಕಾಂತ್​ ದೇಸಾಯಿ ಅವರು, ವೃತ್ತಿಜೀವನದಲ್ಲಿ ಹತ್ತು ಹಲವು ಅದ್ಭುತ ಸಿನಿಮಾಗಳನ್ನು ನೀಡಿದ್ದರು. ಅದರಲ್ಲಿ ಪರಿಂದಾ, ಹಮ್ ದಿಲ್ ದೇ ಚುಕೇ ಸನಮ್, 1942 - ಎ ಲವ್ ಸ್ಟೋರಿ, ರಾಜುಚಾಚಾ, ರಂಗೀಲಾ, ದೌಡ್, ಇಷ್ಕ್, ದೇವದಾಸ್, ಹರಿಶ್ಚಂದ್ರ ಫ್ಯಾಕ್ಟರಿ ಸೇರಿದಂತೆ ಮುಂತಾದ ಅನೇಕ ಸಿನಿಮಾಗಳಿಗೆ ಕಲಾ ನಿರ್ದೇಶನ ಮಾಡಿದ್ದರು.

ನಿತಿನ್ ಚಂದ್ರಕಾಂತ್ ದೇಸಾಯಿ ಅವರ ಕಲಾ ಕೊಡುಗೆಗಾಗಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಹೇಳುವ 'ರಾಜಾ ಶಿವ ಛತ್ರಪತಿ' ಧಾರಾವಾಹಿ ಮರಾಠಿ ದೂರದರ್ಶನದಲ್ಲಿ ಭಾರಿ ಯಶಸ್ಸು ಕಂಡಿತ್ತು. ಧಾರಾವಾಹಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರ ಪೋಷಿಸಿದ್ದ ಡಾ. ಅಮೋಲ್ ಕೊಲ್ಹೆ ಅವರು ಈಗ ಎನ್‌ಸಿಪಿ ಸಂಸದರಾಗಿದ್ದಾರೆ. ದೇಸಾಯಿ ಅವರಂತಹ ಗಹನ ಕಲಾವಿದರ ಜೀವನವು ಭವ್ಯತೆಯಿಂದ ಕೂಡಿದ್ದು, ಅನೇಕ ಜನರನ್ನು ವಿಸ್ಮಯಗೊಳಿಸಿತ್ತು.

ಸಂದರ್ಶನದಲ್ಲಿ ಸಾವಿನ ಮಾತು: ಕೆಲ ದಿನಗಳ ಹಿಂದೆ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ಸಾವಿನ ಬಗ್ಗೆ ಮಾತನಾಡಿದ್ದರು. ಮನಸ್ಸಿನಲ್ಲಿ ಆತ್ಮಹತ್ಯೆಯ ಯೋಚನೆ ಬರುತ್ತಿದೆ. ಜೀವನ ಜಿಗುಪ್ಸೆಯಾಗಿದೆ ಎಂದೆಲ್ಲಾ ನೋವಿನ ನುಡಿಗಳನ್ನು ಆಡಿದ್ದರು. ಜೀವನ ಮತ್ತು ವೃತ್ತಿಯಲ್ಲಿನ ಒತ್ತಡದಿಂದಾಗಿ ಅವರು ಈ ರೀತಿ ಮಾತನಾಡಿರಬಹುದು ಎಂದುಕೊಂಡಾಗಲೇ ಅವರು ಇಹಲೋಕ ತ್ಯಜಿಸಿದ್ದಾರೆ.

ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ : ನಿತಿನ್ ದೇಸಾಯಿ ಅವರು ಬುಧವಾರ ಮುಂಜಾನೆ 4.30ಕ್ಕೆ ಕರ್ಜಾತ್‌ನಲ್ಲಿರುವ ಎನ್‌ಡಿ ಸ್ಟುಡಿಯೋದಲ್ಲಿ ಸಾವನ್ನಪ್ಪಿದ್ದಾರೆ. ಆರ್ಥಿಕ ಸಮಸ್ಯೆಯಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಾಸಕ ಮಹೇಶ್ ಬಾಲ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಖ್ಯಾತಿಯ ರಾಜೀವ್ ಅಭಿನಯದ ಉಸಿರೇ ಉಸಿರೇ ಚಿತ್ರದ ಮೊದಲ ಹಾಡಿಗೆ ಫ್ಯಾನ್ಸ್ ಫಿದಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.