ಅಕ್ಷರ ಕಲಿಸಿದ ಶಾಲಾ - ಕಾಲೇಜುಗಳ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳುವ ಅವಕಾಶ ಸಿಗುವುದು ಕೆಲವರಿಗೆ ಮಾತ್ರ. ಇದೊಂದು ರೋಮಾಂಚಕ ಅನುಭವ. ಎಷ್ಟೋ ಜನರ ಕನಸೂ ಕೂಡ ಹೌದು. ಓದು ಮುಗಿಸಿ ಒಂದಷ್ಟು ವರ್ಷಗಳಾದ ನಂತರ, ಅದೇ ಕಾಲೇಜಿನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಕಾಣಿಸಿಕೊಳ್ಳುವುದೇ ಒಂದು ಸಂಭ್ರಮ.
ಕ್ರೈಸ್ಟ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ: ಸದ್ಯ ಕನ್ನಡ ಚಿತ್ರರಂಗದಲ್ಲಿ 'ಡಿಯರ್ ಸತ್ಯ' ಚಿತ್ರದ ಮೂಲಕ ಭರವಸೆ ನಟಿಯಾಗಿ ಗುರುತಿಸಿಕೊಂಡಿರುವ ಅರ್ಚನಾ ಕೊಟ್ಟಿಗೆ ಅವರಿಗೆ ಈ ಉತ್ತಮ ಅವಕಾಶ ತಾನೇ ತಾನಾಗಿ ಒಲಿದು ಬಂದಿದೆ. ಅದರ ಭಾಗವಾಗಿಯೇ, ತಾವು ಡಿಗ್ರಿ ವ್ಯಾಸಂಗ ನಡೆಸಿದ್ದ ಕೋರಮಂಗಲದ 'ಕ್ರೈಸ್ಟ್ ಯೂನಿವರ್ಸಿಸಿ'ಯ ಭಾಗವಾಗಿರುವ ಕ್ರೈಸ್ಟ್ ಶಾಲೆಯಲ್ಲಿ ನಡೆದ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅರ್ಚನಾ ಕೊಟ್ಟಿಗೆ ಮುಖ್ಯ ಅತಿಥಿಯಾಗಿ ಭಾಗಿಯಾಗಿ ಸಾರ್ಥಕ ಕ್ಷಣಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿ: ಇತ್ತೀಚೆಗೆ ಬೆಂಗಳೂರಿನ ಕೋರಮಂಗಲದ ಕ್ರೈಸ್ಟ್ ಯೂನಿವರ್ಸಿಟಿಯ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನೆರವೇರಿದೆ. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಟಿ ಅರ್ಚನಾ ಕೊಟ್ಟಿಗೆ ಪಾಲಿಗಿದು ಅತ್ಯಂತ ಅರ್ಥಪೂರ್ಣ ದಿನ. ನಟಿಗೆ ಕನ್ನಡ ಹಬ್ಬದಲ್ಲಿ ಭಾಗಿಯಾದ ಖುಷಿ ಸಿಕ್ಕಿದೆ. ಏಕೆಂದರೆ, ಅದು ಮಾಮೂಲಿ ಕಾರ್ಯಕ್ರಮವಾಗಿರಲಿಲ್ಲ. ನಾಡು ನುಡಿಗೆ ಗೌರವ ಸಮರ್ಪಿಸುವ, ಕುವೆಂಪು, ಡಾ. ರಾಜ್ ಕುಮಾರ್ ಸೇರಿದಂತೆ ಕನ್ನಡದ ಅಸ್ಮಿತೆಯನ್ನು ಸ್ಮರಿಸುವ ಸಮಾರಂಭವಾಗಿತ್ತು.
ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪದವಿ ವ್ಯಾಸಂಗ: ಅರ್ಚನಾ ಕೊಟ್ಟಿಗೆ ವಿಭಿನ್ನ ಪಾತ್ರಗಳಿಂದ ಕನ್ನಡ ಸಿನಿ ಪ್ರೇಕ್ಷಕರ ಪ್ರೀತಿ ಸಂಪಾದಿಸಿಸಿದ್ದಾರೆ. 2015-18ನೇ ಸಾಲಿನಲ್ಲಿ ಕೋರಮಂಗಲದ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪದವಿ ವ್ಯಾಸಂಗ . ಆ ಕಾಲದಲ್ಲಿ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಸೀಟು ಸಿಕ್ಕಿದರೆ ಸಾಕೆಂಬ ಮನಃಸ್ಥಿತಿ ಅರ್ಚನಾರಲ್ಲಿತ್ತಂತೆ. ಪದವಿ ಪೂರೈಸಿದ ನಂತರ ನಟಿಯಾಗಿ ಹೊರ ಹೊಮ್ಮಿದ್ದ ಅವರು, ಅತ್ಯಂತ ಕಡಿಮೆ ಅವಧಿಯಲ್ಲಿ ಜನಪ್ರಿಯರಾಗಿದ್ದಾರೆ. ನಟಿಯ ಸಾಧನೆ ಯೂನಿವರ್ಸಿಟಿಯ ಮುಖ್ಯಸ್ಥರು ಅವರನ್ನು ಗುರುತಿಸುವಂತೆ ಮಾಡಿದೆ.
ಇದನ್ನೂ ಓದಿ: ಸಾರಾ ಅಲಿ ಖಾನ್ ವರ್ಕ್ಔಟ್: ಎರಡೇ ವಾರದಲ್ಲಿ ಎಷ್ಟೊಂದು ವ್ಯತ್ಯಾಸ - ನಟಿಯಿಂದ ಫೋಟೋ ಶೇರ್
ಕ್ರೈಸ್ಟ್ ಯೂನಿವರ್ಸಿಟಿ ಆಹ್ವಾನ ಸ್ವೀಕರಿಸಿದ ನಟಿ: ಕ್ರೈಸ್ಟ್ ಶಾಲೆಯ ಕನ್ನಡ ರಾಜ್ಯೋತ್ಸವಕ್ಕೆ ತಯಾರಿ ನಡೆಯೋ ಹೊತ್ತಿಗೆ ಮುಖ್ಯ ಅತಿಥಿಯಾಗಿ ಯಾರನ್ನು ಕರೆಯೋದೆಂಬ ಬಗ್ಗೆ ಚರ್ಚೆ ನಡೆದಿತ್ತು. ಆ ಸಂದರ್ಭದಲ್ಲಿ ಆಡಳಿತ ಮಂಡಳಿಯವರೊಬ್ಬರು ತಮ್ಮಲ್ಲಿಯೇ ಓದಿ ಪ್ರಸಿದ್ಧಿ ಪಡೆದುಕೊಂಡಿರುವ ಅರ್ಚನಾ ಕೊಟ್ಟಿಗೆ ಹೆಸರನ್ನು ಸೂಚಿಸಿದ್ದರಂತೆ. ನಂತರ ಫಾದರ್ ಕೂಡಾ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಕ್ರೈಸ್ಟ್ ಯೂನಿವರ್ಸಿಟಿ ಕಡೆಯಿಂದ ಬಂದ ಆಹ್ವಾನ ಸ್ವೀಕರಿಸಿದ ನಟಿ ಈ ಸಮಾರಂಭಕ್ಕೆ ಸಾಕ್ಷಿಯಾದರು.
ಇದನ್ನೂ ಓದಿ: ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ 'ಮೆಲ್ಲಗೆ' ರೊಮ್ಯಾಂಟಿಕ್ ಹಾಡು ಬಿಡುಗಡೆ