ETV Bharat / entertainment

ಹೊಸಬರ 'ಆಪಲ್​ ಕಟ್'​ ಸಿನಿಮಾಗೆ ಸಿಕ್ತು ವಿಕಟಕವಿ ಯೋಗರಾಜ್​ ಭಟ್​ ಅಭಯಹಸ್ತ

author img

By ETV Bharat Karnataka Team

Published : Oct 7, 2023, 8:05 PM IST

'ಆಪಲ್​ ಕಟ್' ಟೀಸರ್​ಗೆ ನಿರ್ದೇಶಕ ಯೋಗರಾಜ್​ ಭಟ್​ ಧ್ವನಿ ನೀಡುವ ಮೂಲಕ ಹೊಸಬರ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ.

apple cut movie supported by yogaraj bhat
ಹೊಸಬರ 'ಆಪಲ್​ ಕಟ್'​ ಸಿನಿಮಾಗೆ ಸಿಕ್ತು ವಿಕಟಕವಿ ಯೋಗರಾಜ್​ ಭಟ್​ ಅಭಯಹಸ್ತ

ಈ ಸಿನಿಮಾ ಎಂಬ ಬಣ್ಣದ ಲೋಕಕ್ಕೆ ಹೊಸ ಪ್ರತಿಭೆಗಳ ಆಗಮನ ಆಗುತ್ತಲೇ ಇರುತ್ತದೆ. ಹೊಸಬರ ಸಿನಿಮಾಗಳು ತೆರೆ ಮೇಲೆ ರಾರಾಜಿಸುತ್ತಿರುತ್ತದೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜ್​ ಕಿಶೋರ್​ ಅವರ ಪುತ್ರಿ ಸಿಂಧು ಗೌಡ ನಿರ್ದೇಶಕಿಯ ಕ್ಯಾಪ್​ ತೊಟ್ಟು ಇಂಡಸ್ಟ್ರಿಗೆ ಪ್ರವೇಶಿಸಿದ್ದಾರೆ. 'ಆಪಲ್​ ಕಟ್'​ ಎಂಬ ಕ್ಯಾಚಿ ಟೈಟಲ್​ ಜೊತೆ ವಿಭಿನ್ನ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಜ್ಜಾಗಿದ್ದಾರೆ. ಈ ಚಿತ್ರದ ಶೂಟಿಂಗ್​ ಸದ್ದಿಲ್ಲದೇ ಈಗಾಗಲೇ ಮುಕ್ತಾಯಗೊಂಡಿದೆ.

ಸಿಂಧು ಗೌಡ ನಿರ್ದೇಶನದ ಈ ಚೊಚ್ಚಲ ಚಿತ್ರಕ್ಕೆ ವಿಕಟಕವಿ ಯೋಗರಾಜ್​ ಭಟ್​ ಸಾಥ್​ ಸಿಕ್ಕಿದೆ. 'ಆಪಲ್​ ಕಟ್' ಟೀಸರ್​ಗೆ ನಿರ್ದೇಶಕ ಯೋಗರಾಜ್​ ಭಟ್​ ಧ್ವನಿ ನೀಡುವ ಮೂಲಕ ಹೊಸಬರ ಚಿತ್ರ ತಂಡಕ್ಕೆ ಬೆಂಬಲ ನೀಡಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಟೀಸರ್​ ಬಿಡುಗಡೆ ಆಗಲಿದೆ. ಹೊಸ ತಂಡ, ವಿಭಿನ್ನ ಪ್ರಯತ್ನಕ್ಕೆ ಬೆಂಬಲ ನೀಡಿದ ಯೋಗರಾಜ್​ ಭಟ್ರಿಗೆ 'ಆಪಲ್​ ಕಟ್' ಚಿತ್ರತಂಡ ಧನ್ಯವಾದ ತಿಳಿಸಿದೆ. ಜೊತೆಗೆ ಅಕ್ಟೋಬರ್​ 8 ರಂದು ನಿರ್ದೇಶಕರ ಹುಟ್ಟುಹಬ್ಬವಿದ್ದು, ಚಿತ್ರತಂಡ ಮುಂಚಿತವಾಗಿ ಶುಭಾಶಯಗಳನ್ನು ತಿಳಿಸಿದೆ.

ಇದನ್ನೂ ಓದಿ: ಪಂಚಭಾಷೆಗಳಲ್ಲಿ ಬಿಡುಗಡೆಯಾಗಲಿದೆ ರಂಜನ್‌ ಛತ್ರಪತಿ ಅಭಿನಯದ 'ಇನಾಮ್ದಾರ್' ಚಿತ್ರ - ಟ್ರೇಲರ್​ ಅನಾವರಣ

ಚಿತ್ರತಂಡ: 'ಆಪಲ್​ ಕಟ್' ಚಿತ್ರದಲ್ಲಿ ಯುವ ನಟ ಸೂರ್ಯ ಗೌಡ ನಾಯಕನಾಗಿ ನಟಿಸಿದ್ದಾರೆ. ಅಶ್ವಿನಿ ಪೋಲೆಪಲ್ಲಿ ಚಿತ್ರದ ನಾಯಕಿ. ಕಾಮಿಡಿ ಕಿಲಾಡಿ ಖ್ಯಾತಿಯ ಅಪ್ಪಣ್ಣ, ಅಭಿಜಿತ್, ಮೀನಾಕ್ಷಿ, ಬಾಲ ರಾಜವಾಡಿ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕಿ ಸಿಂಧು ಗೌಡ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಇದು ಅವರ ನಿರ್ದೇಶನದ ಚೊಚ್ಚಲ ಚಿತ್ರ.

ವೀರ್ ಸಮರ್ಥ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್, ಸತ್ಯಪ್ರಕಾಶ್ ಬರೆದಿದ್ದಾರೆ. ವಾಸುಕಿ ವೈಭವ್, ವಿಜಯಶ್ರೀ ಹಾಡಿದ್ದಾರೆ. ರಾಜೇಶ್ ಗೌಡ ಛಾಯಾಗ್ರಹಣ ಹಾಗೂ ಸುಚೇಂದ್ರ ಎನ್ ಮೂರ್ತಿ ಸಂಕಲನ 'ಆಪಲ್ ಕಟ್' ಚಿತ್ರಕ್ಕಿದೆ. ಸಾನ್ವಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಶಿಲ್ಪ ಪ್ರಸನ್ನ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

ಸ್ಯಾಂಡಲ್​ವುಡ್​ನಲ್ಲಿ ಅನೇಕ ಹೊಸಬರ ಸಿನಿಮಾಗಳು ತೆರೆ ಕಾಣುತ್ತಿವೆ. ಇನ್ನು ಕೆಲವು ಬಿಡುಗಡೆಯಾಗಲು ಸಜ್ಜಾಗಿದೆ. ಅವುಗಳಲ್ಲಿ 'ಆಪಲ್​ ಕಟ್' ಕೂಡ ಒಂದು. ಸಿಂಧು ಗೌಡ ನಿರ್ದೇಶನದ ಮೊದಲ ಚಿತ್ರ ಪ್ರೇಕ್ಷಕರನ್ನು ರಂಜಿಸುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಬಹುದು ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: ನಿಖಿಲ್​ ಶೂಟಿಂಗ್​ ಸೆಟ್​ಗೆ ಯುವ ರಾಜ್​ಕುಮಾರ್ ಸರ್​ಪ್ರೈಸ್​ ವಿಸಿಟ್​; ದೊಡ್ಮನೆ ಅಭಿಮಾನಿಗಳಲ್ಲಿ ಕುತೂಹಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.