ETV Bharat / entertainment

ಮೈಸೂರಿನಲ್ಲೇ ಫಿಲ್ಮ್ ಸಿಟಿ ಆಗ್ಬೇಕು ಅನ್ನೋದು ಅಣ್ಣಾವ್ರ ಆಸೆ ಆಗಿತ್ತು: ರಾಜೇಂದ್ರ ಸಿಂಗ್ ಬಾಬು

ಮೈಸೂರಿನಲ್ಲೇ ಫಿಲ್ಮ್ ಸಿಟಿ ಆಗಬೇಕು ಅನ್ನೋದು ಅಣ್ಣಾವ್ರ ಆಸೆ ಆಗಿತ್ತು ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ. ಈ ಬಗ್ಗೆ ಸದ್ಯದಲ್ಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.

Rajendra Singh Babu React On Film City
Rajendra Singh Babu React On Film City
author img

By

Published : Jun 7, 2023, 8:20 PM IST

ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿಕೆ

90 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಚಿತ್ರರಂಗಕ್ಕೆ ಇಷ್ಟು ವರ್ಷ ಕಳೆದರೂ ಕರ್ನಾಟಕದಲ್ಲೊಂದು ಬೃಹತ್ ಮಟ್ಟದ ಫಿಲ್ಮ್ ಸಿಟಿ ನಿರ್ಮಾಣವಾಗಿಲ್ಲ ಎಂಬ ಕೊರಗು ಕಾಡುತ್ತಿದೆ. ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ, ಎಸ್. ಬಂಗಾರಪ್ಪ ಸೇರಿದಂತೆ ಇತ್ತೀಚಿನ ರಾಜಕಾರಣಿಗಳು, ಹಲವು ಸಿನಿಮಾ ನಟರು ಚಿತ್ರನಗರಿ ಕಟ್ಟುವ ಕನಸು ಕಂಡಿದ್ದರು. ಆದರೆ, ಚಿತ್ರನಗರಿ ಈವರೆಗೂ ಮರೀಚಿಕೆಯಾಗಿಯೇ ಉಳಿದಿದೆ. ಅದಕ್ಕೆ ಕಾರಣಗಳು ಹಲವು. ಆದರೆ, ಇದೀಗ ಆ ಆಸೆ ಮತ್ತೆ ಚಿಗುರೊಡೆದಿದೆ. ಸದ್ಯದಲ್ಲೇ ಫಲ ನೀಡುವ ನಿರೀಕ್ಷೆ ಹುಟ್ಟಿಸಿದೆ.

Rajendra Singh Babu React On Film City
ಫಿಲ್ಮ್ ಸಿಟಿ (ಸಂಗ್ರಹ ಚಿತ್ರ)

ಕನ್ನಡದ ಖ್ಯಾತ ಸಿನಿಮಾ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ರಾಜೇಂದ್ರ ಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್, ಪಿ.ಶೇಷಾದ್ರಿ, ನಿರ್ಮಾಪಕ ಕೃಷ್ಣೇಗೌಡ, ನಿರ್ಮಾಪಕರು, ತಂತ್ರಜ್ಞರು, ಕಥೆಗಾರರು ಸೇರಿದಂತೆ ಒಟ್ಟು 654 ಜನರಿರುವ 'ಗಂಧದಗುಡಿ ಗೃಹ ನಿರ್ಮಾಣ ವೇದಿಕೆ' ಎಂಬ ಸಮಾನ ಮನಸ್ಕರು ಕೂಟ ಕಟ್ಟಿಕೊಂಡಿದ್ದಾರೆ. ಈ ಕೂಟವೇ ಚಿತ್ರನಗರಿ ಕಟ್ಟುವ ಹೋರಾಟಕ್ಕೆ ಧುಮುಕಿದೆ. ಮೈಸೂರಿನಲ್ಲಿ ಕನ್ನಡಕ್ಕೊಂದು ಚಿತ್ರನಗರಿ ಆಗಬೇಕೆಂಬ ಮಹದಾಸೆ ಹೊತ್ತಿರುವ ಗಂಧದಗುಡಿ ಗೃಹ ನಿರ್ಮಾಣ ವೇದಿಕೆ ರಾಜೇಂದ್ರ ಸಿಂಗ್ ಬಾಬು ನೇತೃತ್ವದಲ್ಲಿ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಲಿದೆ. ರಾಜೇಂದ್ರ ಸಿಂಗ್ ಬಾಬು ಈ ಬಗ್ಗೆ ಮಾಹಿತಿ ನೀಡಿದರು. ಮೈಸೂರಿನಲ್ಲೇಕೆ ಚಿತ್ರನಗರಿ ಆಗಬೇಕು, ಇದರಿಂದ ಏನೆಲ್ಲ ಉಪಯೋಗಗಳಿವೆ ಎಂಬುದರ ಬಗ್ಗೆ ಅವರು ಮಾತನಾಡಿದರು.

Rajendra Singh Babu React On Film City
ಅಂದಿನ ಫಿಲ್ಮ್​ ಚೇಂಬರ್​ ಕಟ್ಟಡ

"ಈಗಾಗಲೇ ಮೈಸೂರಿನಲ್ಲಿ ಫಿಲ್ಮ್ ಸಿಟಿ ಆಗಬೇಕು ಎಂಬುದರ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಸರ್ಕಾರಕ್ಕೆ ಮನವಿ ಮಾಡಿದೆ. ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡದ ಹಿರಿಯ ನಟರನ್ನು ಅಣ್ಣಾವ್ರ ಫಾರಂ ಹೌಸ್​ಗೆ ಕರೆಸಿ ಈ ಬಗ್ಗೆ ಮಾತನಾಡಿದ್ದರು. ಫಿಲ್ಮ್ ಸಿಟಿ ಎಲ್ಲಿ ಆದರೆ ಚೆನ್ನಾಗಿರುತ್ತೆ ಅಂತಾ ಅಭಿಪ್ರಾಯ ಕೇಳಿದ್ದರು. ಹೀಗೆ ಕೇಳಿದಾಗ ಡಾ.ರಾಜ್​ಕುಮಾರ್ ಅವರು ಮೈಸೂರಿನಲ್ಲಿ ಫಿಲ್ಮ್ ಸಿಟಿ ಆದರೆ ಚೆಂದ ಅಂತಾ ಹೇಳಿದ್ದರು. ಟ್ರಾಫಿಕ್​, ಪರಿಸರ ಮಾಲಿನ್ಯದಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲು ಕಷ್ಟ ಎಂದೆಲ್ಲ ಕೆಲವು ಕಾರಣಗಳನ್ನೂ ಕೊಟ್ಟಿದ್ದರು" ಎಂದು ನೆನಪಿಸಿಕೊಂಡರು.

Rajendra Singh Babu React On Film City
ಆಗಿನ ಸಿಎಂ ರಾಮಕೃಷ್ಣ ಹೆಗಡೆ

"ಡಾ.ರಾಜ್​ಕುಮಾರ್ ಅವರು ಹೇಳಿದಂತೆ ಮೈಸೂರು ಚಿತ್ರನಗರಿಗೆ ಹೇಳಿ ಮಾಡಿಸಿದ ಜಾಗ ಅನ್ನೋದರಲ್ಲಿ ಎರಡು ಮಾತಿಲ್ಲ. ಮೈಸೂರಿನಲ್ಲಿ 250ಕ್ಕೂ ಹೆಚ್ಚು ಲೋಕೇಶನ್​ಗಳಿವೆ. ಯಾಕಂದ್ರೆ ಆ ಕಾಲದ ನಿರ್ದೇಶಕರಾದ ಶಾಂತರಾಮ್, ಪುಟ್ಟಣ್ಣ ಕಣಗಾಲ್, ಬಾಲಿವುಡ್ ನಟ ರಾಜ್​ಕಪೂರ್, ತಮಿಳು ನಿರ್ದೇಶಕ ಮಣಿರತ್ನಂ, ಅಷ್ಟೇ ಅಲ್ಲದೇ ರಜನಿಕಾಂತ್ ಸೇರಿದಂತೆ ಸಾಕಷ್ಟು ತಾರೆಯರು ಹಾಗೂ ನಿರ್ದೇಶಕರು ಮೈಸೂರಿನಲ್ಲಿ ಸಿನಿಮಾ ಶೂಟಿಂಗ್ ಮಾಡಲು ಇಷ್ಟಪಡುತ್ತಾರೆ. ಹೀಗಾಗಿ ಮೈಸೂರು ಹಾಗೂ ಸುತ್ತಮುತ್ತಲಿನ ತಾಣ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಸೇರಿದಂತೆ ಹಲವಾರು ಭಾಷೆಗಳ ಚಿತ್ರ ನಿರ್ಮಾಪಕರ ನೆಚ್ಚಿನ ತಾಣ. 16 ಅರಮನೆಗಳು, ನದಿ, ನಾಲೆ, ಕಾಲುವೆ, ಬೆಟ್ಟ-ಗುಡ್ಡಗಳು ಚಿತ್ರೀಕರಣಕ್ಕೆ ಉತ್ತಮ ತಾಣವಾಗಿದೆ. ಇದೀಗ ವಿಮಾನ ಸೌಲಭ್ಯವೂ ಇದೆ. ಹಾಗಾಗಿ ಚಿತ್ರನಗರಿ ಮೈಸೂರಿನಲ್ಲಿ ಆಗಬೇಕು ಅನ್ನೋದು ನಮ್ಮ ಬಯಕೆ. ಸದ್ಯದಲ್ಲೇ ಗಂಧದಗುಡಿ ಗೃಹ ನಿರ್ಮಾಣ ವೇದಿಕೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಕೊಟ್ಟು ಐದು ವರ್ಷದಲ್ಲಿ ಚಿತ್ರನಗರಿ ಸ್ಟಾರ್ಟ್ ಆಗುವಂತೆ ಮಾಡೋದು ನಮ್ಮ ಕೆಲಸ" ಎಂದು ತಿಳಿಸಿದರು.

Rajendra Singh Babu React On Film City
ಮೈಸೂರು ನಗರಿ

"ಮೈಸೂರಿನಲ್ಲಿ ಚಿತ್ರನಗರಿ ಆಗುವುದರಿಂದ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿ ಆಗುತ್ತದೆ. ಚಿತ್ರರಂಗದವರಿಗೆ ಗೃಹ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಜಮೀನು ಕೊಡುವಂತೆ ಕೇಳಿಕೊಳ್ಳಲು ಗಂಧದಗುಡಿ ಗೃಹ ನಿರ್ಮಾಣ ವೇದಿಕೆ ರೆಡಿಯಾಗಿದೆ" ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದರು.

ಇದನ್ನೂ ಓದಿ: ಸೋಲಿನಿಂದ ಮನಸ್ಸು ಕಲ್ಲಾಗಿದೆ, ಇನ್ಮುಂದೆ ಯಾರದ್ದೇ ಮದುವೆಗೆ ಬಂದರೂ ಮುಯ್ಯಿ ಹಾಕಲ್ಲ; ಮಾಜಿ ಶಾಸಕ ಸುರೇಶ್ ಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.