ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯ ನಡೆಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 23 ರನ್‌ಗಳಿಂದ ಸೋಲಿಸಿತು. ವಿರಾಟ್ ಕೊಹ್ಲಿ ಅವರು ತಮ್ಮ ತಂಡಕ್ಕೆ ಅರ್ಧಶತಕ ಬಾರಿಸಿದ ನಂತರ ವಿಜಯೋತ್ಸವ ಆಚರಿಸಿದರು. ಪತ್ನಿ, ನಟಿ ಅನುಷ್ಕಾ ಶರ್ಮಾ ಈ ವಿಜಯದ ನಂತರ ತಮ್ಮ ಹರ್ಷ ವ್ಯಕ್ತಪಡಿಸಲು ಇನ್ಸ್ಟಾ ವೇದಿಕೆ ಬಳಸಿಕೊಂಡರು.
ಇನ್ಸ್ಟಾಗ್ರಾಮ್ನಲ್ಲಿ ನಟಿ ಅನುಷ್ಕಾ ಶರ್ಮಾ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಚಿತ್ರದಲ್ಲಿ ಸ್ಟಾರ್ ಕಪಲ್ ಬಹಳ ಆರಾಮಾಗಿ ಮತ್ತು ಸಂತೋಷದಿಂದ ಕಾಣುತ್ತಿದ್ದರು. ಅನುಷ್ಕಾ ಅವರು ಕಪ್ಪು ಬಣ್ಣದ ಟಿ ಶರ್ಟ್ ಧರಿಸಿದ್ದರೆ, ವಿರಾಟ್ ತಮ್ಮ ಕ್ಯಾಶುಯಲ್ ಬೆಸ್ಟ್ ಲುಕ್ನೊಂದಿಗೆ ಕಾಣಿಸಿಕೊಂಡರು. ಈ ಸುಂದರ ಚಿತ್ರ ಹಂಚಿಕೊಂಡಿರುವ ನಟಿ ಪಂದ್ಯದ ನಂತರದ ಪಾರ್ಟಿ ("Post-match drinks sesh sparkling water....we party hard(ly)") ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ಎಂದಿನಂತೆ ನಿನ್ನೆ ನಡೆದ ಪಂದ್ಯಕ್ಕೂ ನಟಿ ಅನುಷ್ಕಾ ಶರ್ಮಾ ಹಾಜರಿದ್ದರು. ಪತಿ ವಿರಾಟ್ ಕೊಹ್ಲಿ ಮತ್ತು ವಿಜೇತ ತಂಡದ ಪ್ರದರ್ಶನವನ್ನು ಆನಂದಿಸುತ್ತಿರುವ ಅವರ ಹಲವಾರು ವಿಡಿಯೋಗಳು ಮತ್ತು ಫೋಟೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ.
ವಿರಾಟ್ ಮತ್ತು ಅನುಷ್ಕಾ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಇಬ್ಬರೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಬಗ್ಗೆ ನಿಮಗೆ ವಿಶೇಷವಾಗಿ ಹೇಳಬೇಕೆಂದಿಲ್ಲ. ಪತಿ ಪತ್ನಿ ಪರಸ್ಪರ ಕೀರ್ತಿ ಗಳಿಸುವ ಮೂಲಕ ಮಾದರಿ ದಂಪತಿ ಆಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಇನ್ನು ವಿರಾಟ್ ಅವರು ಈಗಾಗಲೇ ಅನೇಕ ಸಂದರ್ಶನಗಳಲ್ಲಿ ಪತ್ನಿ ಅನುಷ್ಕಾ ಶರ್ಮಾ ಅವರು ತಮ್ಮ ಶಕ್ತಿ ಎಂದು ಹೇಳಿಕೊಂಡಿದ್ದಾರೆ. ಅದರಂತೆ ಸ್ಟೇಡಿಯಂನಲ್ಲಿ ವಿರಾಟ್ ಅವರಿಗೆ ಬೆಂಬಲ ನೀಡಿದ್ದು, ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ. ಅಭಿಮಾನಿಗಳು ತಮ್ಮ ಮೆಚ್ಚಿನ ತಾರಾ ದಂಪತಿಗೆ ಪ್ರೀತಿಯ ಸುರಿಮಳೆಗರೆಯುತ್ತಿದ್ದಾರೆ.
ಇದನ್ನೂ ಓದಿ: ಅಬ್ಬಬ್ಬಾ, 10 ಭಾಷೆಗಳಲ್ಲಿ ನಿರ್ಮಾಣವಾಗಲಿದೆ ನಟ ಸೂರ್ಯ ಸಿನಿಮಾ: ಟೈಟಲ್ ಫಿಕ್ಸ್
ಇನ್ನು ಸೋಮವಾರ ಸಹ ನಟಿ ಅನುಷ್ಕಾ ಶರ್ಮಾ ಮ್ಯಾಚ್ ಸಲುವಾಗಿ ಬೆಂಗಳೂರಿಗೆ ಆಗಮಿಸಿದ್ದರು. ಲಖನೌ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪಂದ್ಯ ನಡೆದ ಹಿನ್ನೆಲೆ ವಿರಾಟ್ ಪತ್ನಿ ಸ್ಟೇಡಿಯಂನಲ್ಲಿ ಹಾಜರಿದ್ದರು. ಅಂದಿನ ಫೋಟೋಗಳೂ ಸಹ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದವು.
ಇದನ್ನೂ ಓದಿ: ಜೀವನ ಕೊಟ್ಟ 'ಎರಡನೇ ತಾಯಿ'ಯನ್ನು ಭೇಟಿಯಾದ ಡಾಲಿ: ಧನಂಜಯ್ ಭೂಮಿ ಮೇಲಿರಲು ಇವರೇ ಕಾರಣ
ಅನುಷ್ಕಾ ಶರ್ಮಾ ಭಾರತದ ಟಾಪ್ ನಟಿಯರಲ್ಲಿ ಒಬ್ಬರು. 2018ರ ಡಿಸೆಂಬರ್ 21ರಂದು ತೆರೆಕಂಡ ಝೀರೋ ಸಿನಿಮಾ ಅನುಷ್ಕಾರ ಕೊನೆಯ ಚಿತ್ರ. ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿದ್ದರು. ಬಳಿಕ ತಾಯಿಯಾದ ಹಿನ್ನೆಲೆ ಸಿನಿಮಾಗಳಿಂದ ಕೊಂಚ ಬಿಡುವು ತೆಗೆದುಕೊಂಡರು. ಬಾಲಿವುಡ್ನಲ್ಲಿ ಈಗಲೂ ಅನುಷ್ಕಾ ಶರ್ಮಾ ಬೇಡಿಕೆ ಹೊಂದಿದ್ದಾರೆ. ನಾಲ್ಕು ವರ್ಷಗಳ ಬ್ರೇಕ್ ಬಳಿಕ ತಮ್ಮ ಸಿನಿಮಾ ಕೊಡಲು ಮುಂದಾಗಿದ್ದಾರೆ. ಚಕ್ಡಾ ಎಕ್ಸ್ಪ್ರೆಸ್ ನಟಿಯ ಮುಂದಿನ ಸಿನಿಮಾ. ಭಾರತದ ಮಹಿಳಾ ಕ್ರಿಕೆಟರ್ ಜೂಲನ್ ಗೋಸ್ವಾಮಿ ಅವರ ಕಥೆಯಾಧರಿಸಿದ ಚಿತ್ರವಿದು.