ETV Bharat / entertainment

Virushka: ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಸುಂದರ ಜೋಡಿ ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ - ವಿರುಷ್ಕಾ

ಸೆಲೆಬ್ರಿಟಿ ದಂಪತಿ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ.

Anushka Sharma
ಅನುಷ್ಕಾ ಶರ್ಮಾ ಮತ್ತು ವಿರಾಟ್​
author img

By

Published : Aug 12, 2023, 3:32 PM IST

Updated : Aug 12, 2023, 3:40 PM IST

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಮತ್ತು ಅವರ ಪತಿ, ಸ್ಟಾರ್​ ಕ್ರಿಕೆಟರ್ ವಿರಾಟ್​ ಕೊಹ್ಲಿ ಮತ್ತೊಮ್ಮೆ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ದಂಪತಿ ಸ್ಟೈಲಿಶ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಬಹಳ ದಿನಗಳ ನಂತರ ಈ ಜೋಡಿ ಜೊತೆಯಾಗಿ ಪಾಪ್​ಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. ಸದ್ಯ ಇವರಿಬ್ಬರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಅಭಿಮಾನಿಗಳು ಕೂಡ ಈ ಸುಂದರ ದೃಶ್ಯಕ್ಕೆ ಪ್ರೀತಿಯ ಸುರಿಮಳೆಗೈದಿದ್ದಾರೆ.

ಏರ್​ಪೋರ್ಟ್​ ಲುಕ್​ನಲ್ಲಿ ಅನುಷ್ಕಾ ವೈಟ್​ ಟಿ- ಶರ್ಟ್​ಗೆ ನೀಲಿ ಬಣ್ಣದ ಜಾಕೆಟ್​ನೊಂದಿಗೆ​ ಬ್ಲ್ಯಾಕ್​ ಕಾರ್ಗೋ ಪ್ಯಾಂಟ್​ ಧರಿಸಿದ್ದರು. ಅದಕ್ಕೆ ಹೊಂದಿಕೆಯಾಗುವಂತೆ ಬಿಳಿ ಬಣ್ಣದ ಸ್ನೀಕರ್ಸ್​ ಮತ್ತು ಬ್ಲ್ಯಾಕ್​ ಸನ್​ಗ್ಲಾಸ್​ನೊಂದಿಗೆ ತಮ್ಮ ನೋಟವನ್ನು ಬೀರಿದರು. ಇನ್ನು ವಿರಾಟ್​ ಕೊಹ್ಲಿ ಕಂಪ್ಲೀಟ್​ ಬಿಳಿ ಬಣ್ಣದ ದಿರಿಸಿನಲ್ಲಿ ಕಾಣಿಸಿಕೊಂಡರು. ವೈಟ್​ ಟಿ- ಶರ್ಟ್​, ಪ್ಯಾಂಟ್​ ಮತ್ತು ವೈಟ್​ ಸ್ನೀಕರ್ಸ್​ನೊಂದಿಗೆ ಹ್ಯಾಂಡ್ಸಮ್​ ಆಗಿ ಕಂಡರು.

ವಿರಾಟ್​​ ಮತ್ತು ಅನುಷ್ಕಾ ಇಬ್ಬರೂ ತಮ್ಮ ಕ್ಷೇತ್ರದಲ್ಲಿ ಸಾಧನೆಗೈದು, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಭಿಮಾನಿಗಳು ಈ ಜೋಡಿಯ ಸುದ್ದಿ, ಫೋಟೋಗಳಿಗಾಗಿ ಕಾದು ಕುಳಿತಿರುತ್ತಾರೆ. ಅದರಂತೆ ಇದೀಗ ವಿಮಾನ ನಿಲ್ದಾಣದಲ್ಲಿ ವಿರುಷ್ಕಾ ದಂಪತಿ ಕಾಣಿಸಿಕೊಂಡಿರುವ ವಿಡಿಯೋ ಮತ್ತು ಫೋಟೋಗಳು ಫ್ಯಾನ್ಸ್​ ಗಮನ ಸೆಳೆದಿವೆ.

ಇದನ್ನೂ ಓದಿ: Virat Kohli: ನನ್ನ ಸಂಪಾದನೆ ಬಗ್ಗೆ ಹರಿದಾಡುತ್ತಿರುವ ಅಂಕಿ ಅಂಶ ಸುಳ್ಳು: ವಿರಾಟ್​ ಕೊಹ್ಲಿ

ಸುಂದರ ಜೋಡಿ 'ವಿರುಷ್ಕಾ': ವಿರಾಟ್ ಕೊಹ್ಲಿ ಮತ್ತು ಮತ್ತು ಅನುಷ್ಕಾ ಶರ್ಮಾ 2017ರ ಡಿಸೆಂಬರ್ 11 ರಂದು ಇಟಲಿಯಲ್ಲಿ ಹಸೆಮಣೆ ಏರಿದ್ದರು. ಅತ್ಯಂತ ಜನಪ್ರಿಯ, ಅಭಿಮಾನಿಗಳಿಂದ ಪ್ರೀತಿಸಲ್ಪಡುವ ಸೆಲೆಬ್ರಿಟಿ ಜೋಡಿಗಳಲ್ಲಿ ಇವರಿದ್ದಾರೆ. 2021ರ ಜನವರಿ 11 ರಂದು ವಾಮಿಕಾ ಎಂಬ ಹೆಣ್ಣು ಮಗುವಿನ ಪೋಷಕರಾಗಿ ಭಡ್ತಿ ಪಡೆದರು.

ಅನುಷ್ಕಾ ಶರ್ಮಾ ಸಿನಿಮಾ.. ನಟಿ ಅನುಷ್ಕಾ ಶರ್ಮಾ ದಿ ರಬ್ ನೆ ಬನಾ ದಿ ಜೋಡಿ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬಹುಬೇಡಿಕೆ ನಟಿಯಾಗಿ ಮಿಂಚಿದವರು. ತಾಯಿಯಾದ ಬಳಿಕ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಮಗಳ ಪೋಷಣೆಯಲ್ಲಿ ಬ್ಯುಸಿಯಾಗಿದ್ದ ನಟಿ ಸದ್ಯ ಚಕ್ಡಾ ಎಕ್ಸ್‌ಪ್ರೆಸ್‌ನಲ್ಲಿ ನಟಿಸುತ್ತಿದ್ದಾರೆ. ಭಾರತೀಯ ಮಾಜಿ ಮಹಿಳಾ ಕ್ರಿಕೆಟಿಗರಾದ ಜೂಲನ್ ಗೋಸ್ವಾಮಿ ಅವರ (Jhulan Goswami) ಅವರ ಜೀವನ ಆಧರಿಸಿದ ಮುಂಬರುವ ಕ್ರೀಡಾ ಬಯೋಪಿಕ್ ಚಲನಚಿತ್ರ. ಚಕ್ಡಾ ಎಕ್ಸ್‌ಪ್ರೆಸ್‌ನಲ್ಲಿ ಅನುಷ್ಕಾ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದ್ದು, ಬಿಡುಗಡೆ ದಿನಾಂಕ ಇನ್ನೂ ಬಹಿರಂಗಗೊಂಡಿಲ್ಲ.

ಇದನ್ನೂ ಓದಿ: ವಿರಾಟ್​ ಡಕ್​ ಔಟ್​ ಬಗ್ಗೆ ಕಾಲೆಳೆದ ಅನುಷ್ಕಾ: ಸಿನಿಮೀಯ ಡೈಲಾಗ್​ನಲ್ಲಿ ಪ್ರತ್ಯುತ್ತರ ನೀಡಿದ ವಿರಾಟ್​.. ಸಂಭಾಷಣೆ ಇಲ್ಲಿದೆ ನೋಡಿ

Last Updated : Aug 12, 2023, 3:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.