ETV Bharat / entertainment

ಸ್ಯಾಂಡಲ್​ವುಡ್​ಗೆ ಮತ್ತೊಬ್ಬ ಪ್ರತಿಭಾನ್ವಿತ ಖಳನಟ; ನೆಗೆಟಿವ್​ ಪಾತ್ರದಲ್ಲಿ ಸುಬ್ಬರಾವ್​​

ಈ ಹಿಂದೆ ವಿವಿಧ ಪಾತ್ರಗಳಲ್ಲಿ ಮಿಂಚಿದ್ದ ನಟ ಸುಬ್ಬು ಇದೀಗ ಪೂರ್ಣ ಪ್ರಮಾಣದಲ್ಲಿ ಖಳನಟನಾಗಲು ಮುಂದಾಗಿದ್ದಾರೆ.

Another villain for Sandalwood; Subbarao in negative role

author img

By

Published : Mar 28, 2023, 1:20 PM IST

ಸಿನಿಮಾಗಳಲ್ಲಿ ಖಳನಟನಾಗುವುದು ಸುಲಭದ ಮಾತಲ್ಲ. ಅದಕ್ಕೆ ಅದರದೇ ಆದ ಖದರ್​, ಲುಕ್​ ಬಹುಮುಖ್ಯ. ಇದೀಗ ಅಂತಹ ಪಾತ್ರಗಳ ಮೂಲಕ ಗುರುತಿಸಿಕೊಳ್ಳಲು ಮುಂದಾಗಿರುವ ನಟ ಸುಬ್ಬುರಾವ್​. 'ಸ್ಟೇಟಸ್'​ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗಿಳಿದ ಸುಬ್ಬುರಾವ್​ ಇದೀಗ 'ಪ್ರೇಮಿಗಳ ಗಮನಕ್ಕೆ' ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಖಳನಟನಾಗಿ ಹೊರಹೊಮ್ಮುತ್ತಿದ್ದಾರೆ.

ಬಿಲ್ಡರ್​ ಆಗಿರುವ ಸುಬ್ಬು ರಾವ್​ ಸುಬ್ಬು ಎಂದೇ ಪರಿಚಿತರು. ಮಂಜುಕವಿ ಅವರ ನಿರ್ದೇಶನದ 'ಸ್ಟೇಟಸ್' ಚಿತ್ರದಲ್ಲಿ ಸುಬ್ಬು ಅವರು ಸೋಷಿಯಲ್ ವರ್ಕರ್ ಡಾ.ಸುಬ್ಬು ಹೆಸರಿನ ಪಾತ್ರ ನಿರ್ವಹಿಸಿ ಗುರುತಿಸಿಕೊಂಡಿದ್ದರು.‌ ಆ ನಂತರ 'ಮಿಸ್ ಗೈಡ್' ಎನ್ನುವ ಚಿತ್ರದ ಮೂಲಕ ಖಳನಾಯಕನಾಗಿ ಗುರುತಿಸಿಕೊಂಡರು.‌ ಇದೀಗ 'ಪ್ರೇಮಿಗಳ ಗಮನಕ್ಕೆ' ಚಿತ್ರದಲ್ಲಿ ಮತ್ತೊಮ್ಮೆ ಖಳನಟನಾಗಿ ಮಿಂಚಲಿದ್ದಾರೆ.

ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಕಥಾಹಂದರ ಹೊಂದಿರುವ ಪ್ರೇಮಿಗಳ ಗಮನಕ್ಕೆ ಎನ್ನುವ ಚಿತ್ರಕ್ಕೆ ಸುಬ್ಬು ಅವರೇ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಇದೀಗ ಹೊಸ ಪ್ರಯತ್ನದ ಕುರಿತು ಮಾತನಾಡಿರುವ ಅವರು, ಒಮ್ಮೆ ರಾಘವ ಅವರು ಇವರನ್ನು ನೋಡಿ ನೀನು ಖಳನಟನ ಹಾಗೆ ಕಾಣುತ್ತೀಯ ಎಂದು ಹೇಳಿದ್ದರಂತೆ. ಅವರ ಮಾತನ್ನೇ ವೇದವಾಕ್ಯದಂತೆ ತೆಗೆದುಕೊಂಡ ಸುಬ್ಬು ರಾಘವ ಅವರ ಬಳಿಯೇ ಅಭಿನಯದ ಪಾಠ ಕಲಿತರಂತೆ. ಮುಂದೆ ಅವರು ಚಿತ್ರರಂಗದಲ್ಲಿ ಪೊಲೀಸ್ ಅಧಿಕಾರಿ ಅಥವಾ ‍ಖಳನಟನಾಗಿ ಮುಂದುವರಿಯಬೇಕೆಂಬ ‌ಮಹದಾಸೆಯನ್ನೂ ಹೊಂದಿದ್ದಾರೆ.

ಪ್ರಕಾಶ್​ ರೈ ಸ್ಪೂರ್ತಿ: ಪಂಚ ಭಾಷೆಗಳಲ್ಲಿ ತಮ್ಮ ವಿಶಿಷ್ಟ ವ್ಯಕ್ತಿತ್ವದ ನಟ ಪ್ರಕಾಶ್ ರೈ ಅವರಂತೆ‌ ಚಿತ್ರರಂಗದಲ್ಲಿ ನಾನು ಗುರುತಿಸಿಕೊಳ್ಳಬೇಕು. ಉತ್ತಮ‌ ಖಳನಾಯಕ ಎಂದು ಇಂಡಸ್ಟ್ರಿಯಲ್ಲಿ ಹೆಸರು ಮಾಡಬೇಕು ಎಂದು ಅವರು ಹೇಳುತ್ತಾರೆ. ಅಲ್ಲದೆ ಸಿಟಾಡಿಲ್ ಫಿಲಂಸ್ ಮೂಲಕ ಸುಬ್ಬು ಅವರು ನಿರ್ಮಾಣ ಮಾಡಿರುವ ಪ್ರೇಮಿಗಳ ಗಮನಕ್ಕೆ ಚಿತ್ರ ಜುಲೈನಲ್ಲಿ ತೆರೆಕಾಣಲಿದೆ. ಇದರಲ್ಲಿ ಬಿಗ್ ಬಾಸ್ ಶಶಿ, ಚಿರಶ್ರೀ ಅಂಚನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಯುವಕ ಮತ್ತು ಯುವತಿ ಸಹ ಜೀವನದ ಕುರಿತು ಈ ಚಿತ್ರ ಕಥೆ ಹೊಂದಿದೆ. ಕೊರೊನಾ ಸಂದರ್ಭದಲ್ಲಿ ಇಡೀ ದೇಶ ಲಾಕ್‌ಡೌನ್ ಆಗಿ ಹೊರಗಡೆ ಎಲ್ಲೂ ಹೋಗದ ಸಂದರ್ಭದಲ್ಲಿ ಬೆಂಗಳೂರಿನ ಎಲ್ಲಾ ಐಟಿ, ಬಿಟಿ ಕಂಪನಿಗಳು ಉದ್ಯೋಗಿಗಳಿಗೆ ಮನೆಗಳಿಂದಲೇ ಕೆಲಸ ಮಾಡುವ ಅವಕಾಶ. ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಾಯಕ, ನಾಯಕಿ ಇಬ್ಬರೂ ಒಂದೇ ಮನೆಯಲ್ಲಿ ವಾಸಿಸತೊಡಗುತ್ತಾರೆ. ಆಗ ಅವರಿಗೆ ಎದುರಾಗುವ ಸಂದರ್ಭಗಳನ್ನು ಹೇಗೆ ಎದುರಿಸುತ್ತಾರೆ ಎನ್ನುವ ಕುರಿತು ಚಿತ್ರದಲ್ಲಿ ಹೇಳಲಾಗಿದೆ.

ಕನ್ನಡ ಬಿಗ್ ಬಾಸ್ ಖ್ಯಾತಿಯ ಶಶಿ ನಾಯಕ. ಚಿರಶ್ರೀ ನಾಯಕಿ. ಜುಲೈ ಅಥವಾ ಆಗಸ್ಟ್ ವೇಳೆಗೆ ಚಿತ್ರವನ್ನು ತೆರೆಗೆ ತರುವ ಯೋಜನೆ ಚಿತ್ರತಂಡಕ್ಕಿದೆ. ವಿನ್ಸೆಂಟ್ ಇನ್ಬರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಅರುಳ್ ಸೆಲ್ವನ್ ಛಾಯಾಗ್ರಹಣ, ಡೆನ್ನಿಸ್ ವಲ್ಲಭನ್ ಸಂಗೀತವಿದೆ.

ಇದನ್ನೂ ಓದಿ: ಹೊಸ ಪ್ರತಿಭೆಗಳ ವಿಭಿನ್ನ ಕಥೆಯುಳ್ಳ 'ಆರ' ಚಿತ್ರದ ಟೀಸರ್​​ ರಿಲೀಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.