ETV Bharat / entertainment

ನೀನಾಸಂ ಸತೀಶ್ 'ಮ್ಯಾಟ್ನಿ' ಚಿತ್ರದ ಪಾರ್ಟಿ ಸಾಂಗ್ ರಿಲೀಸ್​ - kannada matney movie

ಮ್ಯಾಟ್ನಿ ಚಿತ್ರತಂಡ ಹೊಸ ವರ್ಷದಂದು ಹೊಸ ಮಾಸ್​ ಹಾಡು ಬಿಡುಗಡೆ ಮಾಡಿದೆ.

ಮ್ಯಾಟ್ನಿ ಚಿತ್ರದ ಮತ್ತೊಂದು ಹಾಡು ರಿಲೀಸ್
ಮ್ಯಾಟ್ನಿ ಚಿತ್ರದ ಮತ್ತೊಂದು ಹಾಡು ರಿಲೀಸ್
author img

By ETV Bharat Karnataka Team

Published : Jan 1, 2024, 2:01 PM IST

ಅಯೋಗ್ಯ ಚಿತ್ರದ ಬಳಿಕ ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಒಟ್ಟಿಗೆ ಅಭಿನಯಿಸುತ್ತಿರುವ ಹೊಸ ಚಿತ್ರ ಮ್ಯಾಟ್ನಿ. ಪೋಸ್ಟರ್ ಹಾಗು ಹಾಡುಗಳಿಂದಲೇ ಸ್ಯಾಂಡಲ್​ವುಡ್​ನಲ್ಲಿ ಟಾಕ್ ಆಗುತ್ತಿರುವ ಚಿತ್ರದ ಮತ್ತೊಂದು ಮಾಸ್ ಹಾಡು "ಬಾರೋ ಬಾರೋ ಬಾಟಲ್​ ತಾರೋ" ಹೊಸ ವರ್ಷಕ್ಕೆ ರಿವೀಲ್ ಆಗಿದೆ. ಈ ಹಾಡನ್ನು ಡಾಲಿ ಧನಂಜಯ್‌ ಬಿಡುಗಡೆ ಮಾಡುವ ಮೂಲಕ ನೀನಾಸಂ ಸತೀಶ್ ಚಿತ್ರಕ್ಕೆ ಸಾಥ್ ನೀಡಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಬರೆದು ಸಂಗೀತ ನೀಡಿರುವ ಈ ಹಾಡನ್ನು ಪೂರ್ಣಚಂದ್ರ ತೇಜಸ್ವಿ, ನೀನಾಸಂ ಸತೀಶ್ ಹಾಗೂ ರೀಲ್​ ರೀನಾ ಹಾಡಿದ್ದಾರೆ. ಯುವಪೀಳಿಗೆಗೆ ಹೇಳಿಮಾಡಿಸಿದಂತಿರುವ ಹಾಡಿಗೆ ನೀನಾಸಂ ಸತೀಶ್, ನಾಗಾಭೂಷಣ್ ಹಾಗೂ ಶಿವರಾಜ್ ಕೆ.ಆರ್.ಪೇಟೆ ಹೆಜ್ಜೆ ಹಾಕಿದ್ದಾರೆ. ಹೊಸ ವರ್ಷದ ಹರುಷವನ್ನು ಹೆಚ್ಚಿಸುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಹಾಡು ಬಿಡುಗಡೆಗೊಂಡ 24 ಗಂಟೆಯಲ್ಲಿ ಯೂಟ್ಯೂಬ್​ನಲ್ಲಿ 87 ಸಾವಿರ ವೀಕ್ಷಣೆ ಪಡೆದಿದೆ.

ಮ್ಯಾಟ್ನಿ ಚಿತ್ರದ ಮತ್ತೊಂದು ಹಾಡು ಬಿಡುಗಡೆ
ಮ್ಯಾಟ್ನಿ ಚಿತ್ರದ ಮತ್ತೊಂದು ಹಾಡು ಬಿಡುಗಡೆ

ಇತ್ತೀಚೆಗೆ ಸಂಜೆ ಮೇಲೆ ಸುಮ್ನೆ ಫೋನು ಮಾಡ್ಲ ನಿಂಗೆ ಎಂಬ ಹಾಡು ಕೂಡ ಇತ್ತೀಚೆಗಷ್ಟೇ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿತ್ತು. ವಿಜಯ್ ಪ್ರಕಾಶ್ ಹಾಡಿರುವ ಈ ಹಾಡಿಗೂ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಇತ್ತೀಚೆಗೆ ಈ ಹಾಡಿನ ಬಿಡುಗಡೆ ಸಮಾರಂಭ ಕೂಡ ಮಾಡಲಾಗಿತ್ತು. ಚಿತ್ರ ಮತ್ತು ಹಾಡಿನ ಬಗ್ಗೆ ಚಿತ್ರತಂಡ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿತ್ತು.

ಯುವ ನಿರ್ದೇಶಕ ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡಿದ್ದು, ಅದ್ದೂರಿ ವೆಚ್ಚದಲ್ಲಿ ಪಾರ್ವತಿ ಎಸ್.ಗೌಡ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸುಧಾಕರ್​ ರಾಜ್ ಮತ್ತು​ ಕೀರ್ತನ್​ ಪೂಜಾರಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್​ ಸಂಕಲನವಿದೆ.

ಪ್ರೇಮಿಗಳ ದಿನಕ್ಕೆ ಟೀಸರ್​ ಅನ್ನು ಚಿತ್ರತಂಡ ಉಡುಗೊರೆಯಾಗಿ ನೀಡಿತ್ತು. ಸದ್ಯ ಹಾಡುಗಳು ಪೋಸ್ಟರ್‌ನಿಂದ‌ ಸದ್ದು ಮಾಡುತ್ತಿರುವ ಮ್ಯಾಟ್ನಿ ಈ ವರ್ಷದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

ಇದನ್ನೂ ಓದಿ: 'ಕಾಂತಾರ ಪ್ರೀಕ್ವೆಲ್'​​ ಸೇರಿದಂತೆ 2024ರಲ್ಲಿ ತೆರೆಕಾಣಲಿರುವ ಸಿನಿಮಾಗಳಿವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.