ETV Bharat / entertainment

ಕನ್ನಡದಲ್ಲಿ ಬರುತ್ತಿದೆ ಮತ್ತೊಂದು ಶ್ವಾನದ ಪ್ರೀತಿ ಕಥೆಯ ಚಿತ್ರ.. ಟೈಟಲ್ ಏನು ಗೊತ್ತಾ? - ಈಟಿವಿ ಭಾರತ್​ ಕನ್ನಡ ನ್ಯೂಸ್

ಮಗು ಹಾಗು ಶ್ವಾನದ ಕಥೆ ಆಧರಿಸಿರೋ ಈ ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಗಿದೆ.

ಶ್ವಾನ ಪ್ರೀತಿಯ ಕುರಿತ ಕಥೆ
ಶ್ವಾನ ಪ್ರೀತಿಯ ಕುರಿತ ಕಥೆ
author img

By

Published : Jun 5, 2023, 7:39 PM IST

ಸಿಂಪಲ್​ಸ್ಟಾರ್ ರಕ್ಷಿತ್​ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಚಾರ್ಲಿ 777 ಕನ್ನಡದ ಸಿನಿಮಾ ಬಹು ದೊಡ್ಡ ಸಕ್ಸಸ್ ಕಂಡಿತ್ತು. ಬಳಿಕ ಶ್ವಾನಗಳಿಗೆ ಹಾಗು ಶ್ವಾನದ ಕಥೆ ಆಧರಿಸಿರೋ ಚಿತ್ರಗಳು ಸಿನಿ ಪ್ರೇಮಿಗಳ ಮನಸ್ಸು ಕದಿಯುತ್ತಿವೆ‌. ಇದೀಗ ಅಂತಹದ್ದೇ ವಿಭಿನ್ನ ಕಥೆ ಹೊಂದಿರುವ 'ಯಾವ ಮೋಹನ ಮುರಳಿ ಕರೆಯಿತು' ಎಂಬ ಚಿತ್ರವೊಂದು ಬೆಳ್ಳಿ ತೆರೆ ಮೇಲೆ ಬರ್ತಾ ಇದೆ.

ಅಮೇರಿಕಾ ಅಮೇರಿಕಾ ಸಿನಿಮಾದಲ್ಲಿ ಕವಿ ಗೋಪಾಲಕೃಷ್ಣ ಅಡಿಗರು ಬರೆದಿರುವ "ಯಾವ ಮೋಹನ ಮುರಳಿ ಕರೆಯಿತು" ಎಂಬ ಹಾಡು ಬಹಳ ಜನಪ್ರಿಯ. ಈಗ ಇದೇ ಹಾಡಿನ ಮೊದಲ ಸಾಲು ಚಿತ್ರದ ಶೀರ್ಷಿಕೆಯಾಗಿರೋದು ವಿಶೇಷ. ಕೆಳದ ಎರಡು ದಿನಗಳಿಂದೆ ಚಿತ್ರದ ಟೀಸರ್​ನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ. ಹರೀಶ್ ಟೀಸರ್ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶಿಲ್ಪ ಶ್ರೀನಿವಾಸ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಈ ವೇಳೆ ಮೊದಲಿಗೆ ಚಿತ್ರದ ನಿರ್ದೇಶಕ ವಿಶ್ವಾಸ್ ಕೃಷ್ಣ‌ ಮಾತನಾಡಿ, ಮನುಷ್ಯ ಹಾಗೂ ಶ್ವಾನದ ನಡುವಿನ ಪ್ರೀತಿಯ ಕುರಿತಾದ ಚಿತ್ರ ಇದಾಗಿದ್ದು, ಕನ್ನಡದಲ್ಲಿ ಶ್ವಾನದ ಕುರಿತಾದ ಚಿತ್ರಗಳು ಬಂದಿದೆಯಾದರೂ ಇದು ಸ್ವಲ್ಪ ಭಿನ್ನ. ಭರವಸೆಯ ಹುಡುಕಾಟದಲ್ಲಿರುವ ಅಂಗವಿಕಲ ಹುಡುಗಿಗೆ ಪ್ರೀತಿ ಅರಸಿ ಹೊರಟಿರುವಾಗ ಶ್ವಾನ ಸಿಗುತ್ತದೆ. ಇಬ್ಬರ ನಡುವೆ ಉತ್ತಮ ಬಾಂಧವ್ಯವಿರುತ್ತದೆ. ಆ ಸಮಯದಲ್ಲಿ ಇವರಿಬ್ಬರ ನಡುವೆ ಮತ್ತೊಬ್ಬ ವ್ಯಕ್ತಿ ಪ್ರವೇಶಿಸುತ್ತಾನೆ. ನಂತರ ಏನಾಗುತ್ತದೆ ಎಂಬುದೆ ಚಿತ್ರದ ಕಥೆ. ಈಗಾಗಲೇ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಿದ್ದವಾಗಿದೆ. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು, ಸದ್ಯದಲ್ಲೇ ಟ್ರೇಲರ್ ಬರಲಿದೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ ಖಂಡಿತಾ ಶ್ವಾನ ಪ್ರಿಯರಿಗೆ ಇಷ್ಟ ಆಗುತ್ತೆ ಎಂದರು‌.

ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಯುವ ಬಾಲ ನಟಿ ಬೇಬಿ ಪ್ರಕೃತಿ ವಿಶೇಷಚೇತನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಕೃತಿ ಜೊತೆಯಾಗಿ ರಾಕಿ ಎಂಬ ಶ್ವಾನ ಬಹಳ‌ ಅದ್ಭುತವಾಗಿ ಅಭಿನಯಿಸಿದೆ. ಇದರ ಜೊತೆಗೆ ಮಾಧವ, ಸ್ವಪ್ನಾ ಶೆಟ್ಟಿಗಾರ್ ನಟಿಸಿದ್ದಾರೆ‌. ವಿಶೇಷ ಕ್ಯಾರೆಕ್ಟರ್ ನಲ್ಲಿ ಪಟೇಲ್ ವರುಣ್ ರಾಜ್ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಅನಿಲ್ ಸಿ. ಜೆ ಸಂಗೀತ ನೀಡಿದ್ದಾರೆ.

ಈ ಚಿತ್ರದ ನಿರ್ಮಾಪಕ ಹಾಗು ಕಿಕ್ ಬಾಕ್ಸಿಂಗ್​ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಶರಣಪ್ಪ ಮಾತನಾಡಿ, ಸಿನಿಮಾ ಬಗ್ಗೆ ಅಷ್ಟು ಗೊತ್ತಿಲ್ಲ. ಸಾಹಿತಿ ಗೌಸ್ ಫಿರ್ ಅವರ ಮೂಲಕ ನಿರ್ದೇಶಕರ ಪರಿಚಯವಾಯಿತು. ಬಳಿಕ ಚಿತ್ರದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ ಎಂದರು. ಸದ್ಯ ಟೀಸರ್ ನಿಂದಲೇ ಕುತೂಹಲ ಹುಟ್ಟಿಸಿರೋ ಯಾವ ಮೋಹನ ಮುರಳಿ ಕರೆಯಿತು. ಚಿತ್ರ ಚಾರ್ಲಿ ಸಿನಿಮಾದಂತೆ ಸಿನಿಮಾ ಪ್ರಿಯರಿಗೆ ಇಷ್ಟ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.

ಇದನ್ನೂ ಓದಿ : 'ಸತ್ಯಪ್ರೇಮ್ ಕಿ ಕಥಾ'.. ನಾಳೆ ಬಿಡುಗಡೆಯಾಗಲಿದೆ 2023ರ ಬಹುನಿರೀಕ್ಷಿತ ಸಿನಿಮಾದ ಟ್ರೇಲರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.