ETV Bharat / entertainment

'ಏ.30ರಂದು ಸಲ್ಮಾನ್ ಖಾನ್​ ಕೊಲ್ಲುತ್ತೇವೆ': ಪೊಲೀಸರಿಗೂ ಬಂತು ಕೊಲೆ ಬೆದರಿಕೆ - ರಾಜಸ್ಥಾನದಿಂದ ಸಲ್ಮಾನ್ ಖಾನ್​ಗೆ ಬೆದರಿಕೆ

ಸೂಪರ್​ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಮತ್ತೊಂದು ಕೊಲೆ ಬೆದರಿಕೆ ಬಂದಿದೆ. ಈ ಬಾರಿ ಬೆದರಿಕೆ ನೇರವಾಗಿ ಮುಂಬೈ ಪೊಲೀಸರಿಗೇನೆ ಬಂದಿದೆ.

death threat to Salman Khan
ಸಲ್ಮಾನ್ ಖಾನ್​ ಕೊಲೆ ಬೆದರಿಕೆ
author img

By

Published : Apr 11, 2023, 1:37 PM IST

Updated : Apr 11, 2023, 1:50 PM IST

ಬಾಲಿವುಡ್ ಸೂಪರ್​ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಇ ಮೇಲ್ ಮೂಲಕ ಬೆದರಿಕೆ ಪತ್ರ ಬಂದಿದ್ದು, ತನಿಖೆ ಚುರುಕುಗೊಂಡಿದೆ. ಅದಾದ ಕೆಲವೇ ದಿನಗಳ ನಂತರ ಮುಂಬೈ ಪೊಲೀಸರಿಗೆ ಸೋಮವಾರ ರಾಜಸ್ಥಾನದ ವ್ಯಕ್ತಿಯಿಂದ ಕರೆ ಬಂದಿದ್ದು, ಈ ತಿಂಗಳ ಕೊನೆಯಲ್ಲಿ ಸಲ್ಮಾನ್​​ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ಏಪ್ರಿಲ್ 30 ರಂದು ಸಲ್ಮಾನ್​ ಖಾನ್​ರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ. ಆ ವ್ಯಕ್ತಿ ತನ್ನನ್ನು ರಾಜಸ್ಥಾನದ ಜೋಧ್‌ಪುರದ ರೋಕಿ ಭಾಯ್ ಎಂದು ಪರಿಚಯಿಸಿಕೊಂಡಿದ್ದಾನೆ. "ನಿನ್ನೆ ಪೊಲೀಸ್ ಕಂಟ್ರೋಲ್ ರೂಮ್‌ಗೆ ಬಂದ ಕರೆಯಲ್ಲಿ, ರಾಜಸ್ಥಾನದ ಜೋಧಪುರದ ರೋಕಿ ಭಾಯ್​​ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಏಪ್ರಿಲ್ 30ರಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಮಾರ್ಚ್‌ ತಿಂಗಳಲ್ಲಿ ಸಲ್ಮಾನ್​ ಖಾನ್‌ ಅವರಿಗೆ ಇ ಮೇಲ್‌ ಮೂಲಕ ಕೊಲೆ ಬೆದರಿಕೆ ಬಂದಿತ್ತು. ಮುಂಬೈ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದರು. ನಟನ ಆಪ್ತರೊಬ್ಬರಿಗೆ ಕಳುಹಿಸಲಾದ ಇ ಮೇಲ್​ನಲ್ಲಿ, ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಇತ್ತೀಚಿನ ಸಂದರ್ಶನವನ್ನು ಉಲ್ಲೇಖಿಸಿ, "ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು ನನ್ನ ಜೀವನದ ಗುರಿಯಾಗಿದೆ" ಎಂದು ಸಂದೇಶ ಕಳುಹಿಸಿದ್ದ.

ಬಾಂದ್ರಾ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ರಾಜಸ್ಥಾನ ಪೊಲೀಸರೊಂದಿಗೆ ಕೈಜೋಡಿಸಿದ್ದಾರೆ. ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಲುನಿ ನಿವಾಸಿ, ಆರೋಪಿ ಧಾಕಡ್​ ರಾಮ್‌ ಎಂಬಾತನನ್ನು ಮಾರ್ಚ್ 26ರಂದು ಅರೆಸ್ಟ್ ಮಾಡಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಈ ಪ್ರಕರಣದ ತನಿಖೆಯೂ ನಡೆಯುತ್ತಿದ್ದು, ಬಾಂದ್ರಾ ಪಶ್ಚಿಮದಲ್ಲಿರುವ ಸಲ್ಮಾನ್ ಅವರ ಮನೆಯ ಹೊರಗೆ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದರು. ಈ ಪ್ರಕರಣದ ಜೊತೆ ಹೊಸದಾಗಿ ಬಂದಿರುವ ಕೊಲೆ ಬೆದರಿಕೆ ಕೇಸ್​ನ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ಇದನ್ನೂ ಓದಿ: ಕೊಲೆ ಬೆದರಿಕೆ ಬೆನ್ನಲ್ಲೇ ಮತ್ತೊಂದು ಬುಲೆಟ್​ ಪ್ರೂಫ್​​ SUV ಕಾರು ಖರೀದಿಸಿದ ಸಲ್ಮಾನ್​ ಖಾನ್​!

ನಿರಂತರವಾಗಿ ಕೊಲೆ ಬೆದರಿಕೆ ಬರುತ್ತಿರುವ ಹಿನ್ನೆಲೆ ಸಲ್ಮಾನ್​ ಖಾನ್ ಅವರು​ ಹೊಸ​​ ಬುಲೆಟ್​ ಪ್ರೂಫ್​​ ಕಾರು ಖರೀದಿಸಿದ್ದಾರೆ ಎನ್ನುವ ಮಾಹಿತಿಯಿದೆ. ಈಗಾಗಲೇ ಹಲವು ಲಕ್ಷುರಿ ವಾಹನಗಳನ್ನು ಹೊಂದಿರುವ ಇವರು ಮತ್ತೊಂದು ಕಾರು ಖರೀದಿಸಿದ್ದಾರೆ. ಕಳೆದ ಮಾರ್ಚ್​ ಕೊನೆಯಲ್ಲಿ ಮುಂಬೈನಲ್ಲಿ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನೆಯಾಗಿದೆ. ಮೂರು ದಿನಗಳ ಕಾಲ ನಡೆದ ಅದ್ಧೂರಿ ಸಮಾರಂಭಕ್ಕೆ ಸಲ್ಮಾನ್​​ ಖಾನ್​​ ತಮ್ಮ ಹೊಸ ಕಾರಿನಲ್ಲೇ (Nissan Patrol luxury SUV) ಆಗಮಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಕಹಿ ಘಟನೆಗಳಿಂದ ಕಲಿತ ಪಾಠ ಮರೆಯುವುದಿಲ್ಲ: ನಟಿ ಸಮಂತಾ

ಇದಕ್ಕೂ ಮೊದಲು ಟೊಯೋಟಾ ಲ್ಯಾಂಡ್ ಕ್ರೂಸರ್ LC200 ವಾಹನವನ್ನು ಸಲ್ಮಾನ್​ ಖಾನ್​ ಉಪಯೋಗಿಸುತ್ತಿದ್ದರು. ಇದೀಗ ನಿಸ್ಸಾನ್ ಪ್ಯಾಟ್ರೋಲ್ ಎಸ್​ಯುವಿ (Nissan Patrol luxury SUV) ವಾಹನವನ್ನು ಖರೀದಿಸಿದ್ದಾರೆ. ಇದನ್ನು ಹೊರ ದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. ಬುಲೆಟ್ ಪ್ರೂಫಿಂಗ್, ಸೆಕ್ಯೂರಿಟಿ ವಿಷಯದಲ್ಲಿ ಈ ವಾಹನ ಅತ್ಯುತ್ತಮವಾಗಿದೆ.

Last Updated : Apr 11, 2023, 1:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.