ETV Bharat / entertainment

ಅನಿಮಲ್ vs ಸ್ಯಾಮ್ ಬಹದ್ದೂರ್: ರಣ್​ಬೀರ್ ರಶ್ಮಿಕಾ ಸಿನಿಮಾ 100 ಕೋಟಿ ಕಲೆಕ್ಷನ್​ ಸಾಧ್ಯತೆ! - Sam Bahadur collection

Animal vs Sam Bahadur: ನಾಳೆ ಎರಡು ಬಹು ನಿರೀಕ್ಷಿತ ಸಿನಿಮಾಗಳಾದ ಅನಿಮಲ್ ಮತ್ತು ಸ್ಯಾಮ್ ಬಹದ್ದೂರ್ ಬಿಡುಗಡೆ ಆಗಲಿದ್ದು, ಬಾಕ್ಸ್ ಆಫೀಸ್​ ಫೈಟ್​ ಪಕ್ಕಾ ಅಂತಿದ್ದಾರೆ ಅಭಿಮಾನಿಗಳು.

Animal vs Sam Bahadur
ಅನಿಮಲ್ vs ಸ್ಯಾಮ್ ಬಹದ್ದೂರ್
author img

By ETV Bharat Karnataka Team

Published : Nov 30, 2023, 2:53 PM IST

ಕಬೀರ್ ಸಿಂಗ್‌ ಮತ್ತು ಅರ್ಜುನ್​​ ರೆಡ್ಡಿ ಸಿನಿಮಾಗಳಿಗೆ ಹೆಸರುವಾಸಿಯಾದ ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್, ಮೇಘನಾ ಗುಲ್ಜಾರ್ ನಿರ್ದೇಶನದ ಸ್ಯಾಮ್ ಬಹದ್ದೂರ್ ಸಿನಿಮಾ ನಾಳೆ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ. ಎರಡೂ ಕೂಡ ಈ ಸಾಲಿನ ಬಹುನಿರೀಕ್ಷಿತ ಸಿನಿಮಾಗಳಾಗಿದ್ದು, ಬಾಕ್ಸ್ ಆಫೀಸ್​ ಪೈಪೋಟಿ ಪಕ್ಕಾ ಅಂತಿದ್ದಾರೆ ಸಿನಿ ಪಂಡಿತರು. ಎರಡೂ ಚಿತ್ರಗಳು ಉತ್ತಮ ಪ್ರದರ್ಶನ ಕಾಣಲಿದೆ. ಆದರೆ ಅನಿಮಲ್​ ಸಿನಿಮಾ ಮುನ್ನಡೆ ಸಾಧಿಸಲಿದೆ ಎಂದು ಆರಂಭಿಕ ಅಂದಾಜುಗಳು ಸೂಚಿಸಿವೆ.

ಈಗಾಗಲೇ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ ಪ್ರಕ್ರಿಯೆ ಜೋರಾಗೇ ನಡೆದಿದೆ. ರಣ್​​ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್ ಸಿನಿಮಾದ ಟಿಕೆಟ್​ಗಳು ಶರವೇಗದಲ್ಲಿ ಸೇಲ್​​ ಆಗುತ್ತಿವೆ. ಸಿನಿಮಾ ಹೆಚ್ಚಿನ ಲಾಭ ಪಡೆಯಲಿದೆ. ಹಿಂದಿ ಭಾಷೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಮೊದಲ ದಿನ ಸಿನಿಮಾ ವೀಕ್ಷಿಸಲು ಆನ್​ಲೈನ್​ನಲ್ಲಿ ಸರಿಸುಮಾರು 17.1 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಟಿಕೆಟ್​ಗಳು ಸೇಲ್​​ ಆಗಿವೆ (ಇಂದು ಬೆಳಗಿನ ಮಾಹಿತಿ. ಮುಂಗಡ ಟಿಕೆಟ್ ಖರೀದಿ ಪ್ರಕ್ರಿಯೆ ಮುಂದುವರಿದಿದೆ). ಮತ್ತೊಂದೆಡೆ ಸ್ಯಾಮ್ ಬಹದ್ದೂರ್ ಸರಿಸುಮಾರು 1.81 ಕೋಟಿ ರೂ.ನ ವ್ಯವಹಾರ ನಡೆಸಿದೆ. ಮೊದಲ ದಿನ ಸಿನಿಮಾ ವೀಕ್ಷಿಸಲು 57,888ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್​​ ಸಿನಿಮಾ 7,45,992ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ. 19.7 ಕೋಟಿ ರೂ.ಗೂ ಹೆಚ್ಚು ವ್ಯವಹಾರ ನಡೆದಿದೆ. ಮೇಲೆ ತಿಳಿಸಿರುವ ಅಂಕಿ - ಅಂಶ ಕೇವಲ ಮೊದಲ ದಿನಕ್ಕೆ ಸಂಬಂಧಿಸಿದ್ದಾಗಿದೆ. ಮಾರಾಟವಾದ ಒಟ್ಟು ಟಿಕೆಟ್‌ಗಳ ಪೈಕಿ 5,75,197 ಟಿಕೆಟ್ಸ್ ಹಿಂದಿ ಭಾಷೆಯದ್ದಾದರೆ, 1,63,361 ಟಿಕೆಟ್ಸ್ ತೆಲುಗು ಭಾಷೆಯ ಶೋಗಳಿಗೆ ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ. ಅನಿಮಲ್‌ ಸಿನಿಮಾ ದೆಹಲಿಯಲ್ಲಿ 4.07 ಕೋಟಿ ರೂ., ತೆಲಂಗಾಣದಲ್ಲಿ 4.14 ಕೋಟಿ ರೂ., ಮಹಾರಾಷ್ಟ್ರದಲ್ಲಿ 3.29 ಕೋಟಿ ರೂ., ಕರ್ನಾಟಕದಲ್ಲಿ 2.23 ಕೋಟಿ ರೂ., ಗುಜರಾತ್​ನಲ್ಲಿ 1.49 ಕೋಟಿ ರೂ., ಆಂಧ್ರಪ್ರದೇಶದಲ್ಲಿ 2.18 ಕೋಟಿ ರೂ., ಮತ್ತು ಉತ್ತರ ಪ್ರದೇಶ (ರೂ. 1.34 ಕೋಟಿ), ಇತರ ರಾಜ್ಯಗಳಲ್ಲಿ 1 ಕೋಟಿ ರೂ.ಗಿಂತ ಕಡಿಮೆ ವ್ಯವಹಾರ ನಡೆಸಿದೆ. ಈ ಸಂಖ್ಯೆ ಕ್ಷಣ ಕ್ಷಣಕ್ಕೂ ಏರುತ್ತಿದೆ.

ಇದನ್ನೂ ಓದಿ: ನಟಿ ಪೂಜಾ ಗಾಂಧಿ ಕೈ ಹಿಡಿದ ವಿಜಯ್ ಘೋರ್ಪಡೆ: ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆ

ಅನಿಮಲ್ ಸಿನಿಮಾ ರಣ್​​ಬೀರ್​ ಕಪೂರ್​​ ಅವರ ಬ್ಲಾಕ್​ಬಸ್ಟರ್ ಚಿತ್ರ 'ಸಂಜು'ವನ್ನು ಹಿಂದಿಕ್ಕುವ ನಿರೀಕ್ಷೆಯಿದೆ. ಅಲ್ಲದೇ ರಣ್​​ಬೀರ್ ಕಪೂರ್ ಅವರ ವೃತ್ತಿಜೀವನದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, ಅನಿಮಲ್​ ಭಾರತದಲ್ಲಿ 65 ಕೋಟಿ ರೂ., ವಿದೇಶದಲ್ಲಿ 30 ಕೋಟಿ ರೂ. ಗಳಿಸುವ ನಿರೀಕ್ಷೆಯಿದೆ. ತೆರೆಕಂಡ ಮೊದಲ ದಿನ ಒಟ್ಟು 95 ಕೋಟಿ ರೂ. ಗಳಿಸಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಚೆಂದಕ್ಕಿಂತ ಚೆಂದ ತಮನ್ನಾ ಅಂದ; ಅಭಿಮಾನಿಗಳನ್ನು ಆಕರ್ಷಿಸಿದ ಹೊಸ ಫೋಟೋಗಳಿವು

ಮತ್ತೊಂದೆಡೆ, ವಿಕ್ಕಿ ಕೌಶಲ್​ ಅವರ ಸ್ಯಾಮ್ ಬಹದ್ದೂರ್‌ ಸಿನಿಮಾ ಕೂಡ ಉತ್ತಮ ಪ್ರದರ್ಶನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಸಾನ್ಯಾ ಮಲ್ಹೋತ್ರಾ, ಫಾತಿಮಾ ಸನಾ ಶೇಖ್, ನೀರಜ್ ಕಬಿ, ಮೊಹಮ್ಮದ್ ಜೀಶನ್ ಅಯ್ಯೂಬ್ ಸೇರಿದಂತೆ ಹಲವರು ಪ್ರಮುಖ ಪಾತ್ರ ನಿರ್ವಹಿಸಿರುವ ಸ್ಯಾಮ್ ಬಹದ್ದೂರ್‌ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ನಲ್ಲಿ 1.82 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.