ETV Bharat / entertainment

Animal: ರೊಮ್ಯಾಂಟಿಕ್​ ಮೂಡ್​ನಲ್ಲಿ ರಣ್​ಬೀರ್​ - ರಶ್ಮಿಕಾ; 'ಹುವಾ ಮೈನ್' ಹಾಡು ನಾಳೆ ಬಿಡುಗಡೆ - ಈಟಿವಿ ಭಾರತ ಕನ್ನಡ

Rashmika Mandanna are lost in a kiss mid-air: 'ಅನಿಮಲ್​' ಚಿತ್ರದ 'ಹುವಾ ಮೈನ್' ಹಾಡಿನ ಬಿಡುಗಡೆ ದಿನಾಂಕ ಘೋಷಿಸಲು ಚಿತ್ರತಂಡ, ರಣ್​ಬೀರ್​ ಕಪೂರ್​ ಮತ್ತು ರಶ್ಮಿಕಾ ಮಂದಣ್ಣ ರೊಮ್ಯಾಂಟಿಕ್​ ಮೂಡ್​ನಲ್ಲಿರುವ ಪೋಸ್ಟರ್​ ಹಂಚಿಕೊಂಡಿದೆ.

Animal: Ranbir Kapoor, Rashmika Mandanna are lost in a kiss mid-air; makers share release date for first song Hua Main
Animal: ರೊಮ್ಯಾಂಟಿಕ್​ ಮೂಡ್​ನಲ್ಲಿ ರಣ್​ಬೀರ್​-ರಶ್ಮಿಕಾ; 'ಹುವಾ ಮೈನ್' ಹಾಡು ನಾಳೆ ಬಿಡುಗಡೆ
author img

By ETV Bharat Karnataka Team

Published : Oct 10, 2023, 12:43 PM IST

ಬಾಲಿವುಡ್​ ನಟ ರಣ್​ಬೀರ್​ ಕಪೂರ್​ ಮತ್ತು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿರುವ ಮೊದಲ ಸಿನಿಮಾ 'ಅನಿಮಲ್​'. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಗ್ಯಾಂಗ್​ಸ್ಟಾರ್​ ಕಥೆಯಾಧಾರಿತ ಈ ಸಿನಿಮಾ ಇದೇ ವರ್ಷದ ಕೊನೆಯಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಚಿತ್ರದ ಶೀರ್ಷಿಕೆಯೇ ಸಂಥಿಂಗ್​ ಸ್ಪೆಷಲ್​ ಆಗಿದ್ದು, ರಿಲೀಸ್​ ಡೇಟ್​ ಹತ್ತಿರವಾಗುತ್ತಿದ್ದಂತೆ ಚಿತ್ರತಂಡ ಪ್ರಚಾರ ಕಾರ್ಯ ಪ್ರಾರಂಭಿಸಿದೆ. ಈಗಾಗಲೇ ಟೀಸರ್​ ಕೂಡ ಬಿಡುಗಡೆಯಾಗಿದ್ದು, ಸಖತ್​ ಇಂಟ್ರಸ್ಟಿಂಗ್​ ಆಗಿದೆ.

Animal: Ranbir Kapoor, Rashmika Mandanna are lost in a kiss mid-air; makers share release date for first song Hua Main
ರಶ್ಮಿಕಾ ಮಂದಣ್ಣ ಇನ್​ಸ್ಟಾ ಸ್ಟೋರಿ

ಜೊತೆಗೆ ಹಂತ ಹಂತವಾಗಿ ಸಿನಿಮಾ ನಟರ ಫಸ್ಟ್​ ಲುಕ್​ ಅನಾವರಗೊಳಿಸುವ ಮೂಲಕ ಪ್ರೇಕ್ಷಕರ ಕುತೂಹಲ ಹೆಚ್ಚು ಮಾಡುತ್ತಿದೆ. ನಾಯಕ ನಟ ರಣ್​ಬೀರ್​ ಕಪೂರ್​, ನಾಯಕ ನಟಿ ರಶ್ಮಿಕಾ ಮಂದಣ್ಣ, ಪ್ರಮುಖ ಪಾತ್ರಧಾರಿ ಅನಿಲ್​ ಕಪೂರ್​ ಹಾಗೂ ಮತ್ತೋರ್ವ ನಟ ಬಾಬಿ ಡಿಯೋಲ್​ ಅವರ ಫಸ್ಟ್​ ಲುಕ್​ ಅನ್ನು ಚಿತ್ರತಂಡ ಈಗಾಗಲೇ ರಿಲೀಸ್​ ಮಾಡಿದೆ. ಇದೀಗ ರಣ್​ಬೀರ್​ ಕಪೂರ್​ ಮತ್ತು ರಶ್ಮಿಕಾ ಮಂದಣ್ಣ ರೊಮ್ಯಾಂಟಿಕ್​ ಮೂಡ್​ನಲ್ಲಿರುವ ಪೋಸ್ಟರ್​ ಬಿಡುಗಡೆಯಾಗಿದೆ.

ರಣ್​ಬೀರ್ ಮತ್ತು ರಶ್ಮಿಕಾ ಮಂದಣ್ಣ ಹೆಲಿಕಾಫ್ಟರ್​ನಲ್ಲಿ ಕುಳಿತು ಚುಂಬಿಸುತ್ತಿರುವ ಪೋಸ್ಟರ್​ ಇದಾಗಿದೆ. ​ಈ ಪೋಸ್ಟರ್​ನೊಂದಿಗೆ ಚಿತ್ರತಂಡ ಸಿನಿಮಾದ 'ಹುವಾ ಮೈನ್' ಹಾಡಿನ ಬಿಡುಗಡೆ ದಿನಾಂಕವನ್ನು ಕೂಡ ಘೋಷಿಸಿದ್ದಾರೆ. ಅಕ್ಟೋಬರ್​ 11ರಂದು (ನಾಳೆ) ಹಾಡು ಬಿಡುಗಡೆಯಾಗಲಿದೆ. ಅಭಿಮಾನಿಗಳ ಕುತೂಹಲಕ್ಕೆ ಕ್ಷಣಗಣನೆ ಆರಂಭವಾಗಿದೆ.

5 ಭಾಷೆಗಳಲ್ಲಿ ಹಾಡು ಬಿಡುಗಡೆ: ಸೋಮವಾರ ರಾತ್ರಿ ರಶ್ಮಿಕಾ ಮಂದಣ್ಣ ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಚಿತ್ರದ ಮೊದಲ ಹಾಡು ಬಿಡುಗಡೆಯ ಬಗ್ಗೆ ಸುಳಿವು ನೀಡಿದ್ದರು. ಈ ಮಧ್ಯೆ ಇಂದು ಚಿತ್ರತಂಡ ಹೊಸ ಪೋಸ್ಟರ್​ನೊಂದಿಗೆ ನಾಳೆ ಹಾಡು ಬಿಡುಗಡೆಯಾಗಲಿದೆ ಎಂದು ಹಂಚಿಕೊಂಡಿದೆ. ಹಿಂದಿಯಲ್ಲಿ 'ಹುವಾ ಮೈನ್'​, ತೆಲುಗಿನಲ್ಲಿ 'ಅಮ್ಮಾಯಿ', ತಮಿಳಿನಲ್ಲಿ 'ನೀ ವಾಡಿ', ಮಲಯಾಳಂನಲ್ಲಿ 'ಪೆನ್ನಾಲೆ' ಹಾಗೂ ಕನ್ನಡದಲ್ಲಿ 'ಓ ಬಾಲೆ' ಎಂಬ ಶೀರ್ಷಿಕೆಯಲ್ಲಿ ಹಾಡುಗಳು ಬಿಡುಗಡೆಯಾಗಲಿದೆ.

ಇದನ್ನೂ ಓದಿ: ರಣ್​​ಬೀರ್​ ಕಪೂರ್​​ ಬರ್ತ್​​ಡೇ: 'ಅನಿಮಲ್​' ಟೀಸರ್​ ರಿಲೀಸ್

ಅನಿಮಲ್ ಚಿತ್ರತಂಡ ಟೀಸರ್ ಅನ್ನು ಸೆಪ್ಟೆಂಬರ್ 28ರಂದು ರಣ್​ಬೀರ್​ ಕಪೂರ್​ ಜನ್ಮದಿನದ ಹಿನ್ನೆಲೆ ಸ್ಪೆಷಲ್​ ಗಿಫ್ಟ್​ ಆಗಿ ನೀಡಿತ್ತು. ಮೊದಲು ಲವರ್​ ಬಾಯ್​ನಂತೆ ಕಾಣಿಸಿಕೊಳ್ಳುವ ರಣ್​​ಬೀರ್​ ನಂತರ ರಗಡ್​ ಪರ್ಸನಾಲಿಟಿ ಆಗಿ ಬದಲಾಗೋದನ್ನು ಟೀಸರ್​ನಲ್ಲಿ ಕಾಣಬಹುದಾಗಿದೆ. ಇದಕ್ಕೂ ಮುನ್ನ ರಣ್​ಬೀರ್​ ಅವರ ಉಗ್ರನೋಟವುಳ್ಳ ಪೋಸ್ಟರ್​ ಅನ್ನು ಚಿತ್ರತಂಡ ಅನಾವರಣಗೊಳಿಸಿತ್ತು. ಅಂದಿನಿಂದ ಅಭಿಮಾನಿಗಳು ಮೆಚ್ಚಿನ ನಟನನ್ನು ಗ್ಯಾಂಗ್‌ಸ್ಟರ್ ಅವತಾರದಲ್ಲಿ ವೀಕ್ಷಿಸಲು ಕಾದು ಕುಳಿತಿದ್ದಾರೆ.

ಈಗಾಗಲೇ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಬಾಲಿವುಡ್​ಗೆ ಪರಿಚಯವಾಗಿದ್ದಾರೆ. ರಣ್​​ಬೀರ್ ಕಪೂರ್ ಜೊತೆ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್​ 23 ರಂದು ನಟಿಯ ಮೊದಲ ನೋಟ ಅನಾವರಣಗೊಂಡಿತ್ತು. ಗೀತಾಂಜಲಿ ಪಾತ್ರಧಾರಿ ರಶ್ಮಿಕಾ ಮಂದಣ್ಣ ಗೃಹಿಣಿ ನೋಟದಲ್ಲಿ ಕಾಣಿಸಿಕೊಂಡಿದ್ದರು.

'ಅನಿಮಲ್' ಚಿತ್ರವನ್ನು ಆಗಸ್ಟ್‌ನಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಸನ್ನಿ ಡಿಯೋಲ್‌ ಮುಖ್ಯಭೂಮಿಕೆಯ ಗದರ್ 2 ಮತ್ತು ಅಕ್ಷಯ್ ಕುಮಾರ್ ಅಭಿನಯದ ಓಎಂಜಿಒ 2ರ ಬಾಕ್ಸ್​ ಆಫೀಸ್​ ಫೈಟ್​ನಿಂದ ತಪ್ಪಿಸಿಕೊಳ್ಳಲು ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿತು. ಇದೀಗ ಬಹುನಿರೀಕ್ಷಿತ ಸಿನಿಮಾ ಡಿಸೆಂಬರ್ 1 ರಂದು ತೆರೆಕಾಣಲು ಸಜ್ಜಾಗಿದೆ. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಸಿನಿಮಾವನ್ನು ಭೂಷಣ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: 'ಗೀತಾಂಜಲಿ'ಯಾದ ನಟಿ ರಶ್ಮಿಕಾ ಮಂದಣ್ಣ: 'ಅನಿಮಲ್'​ ಪೋಸ್ಟರ್ ಅನಾವರಣ - ಗೃಹಿಣಿ ನೋಟದಲ್ಲಿ ನ್ಯಾಶನಲ್​ ಕ್ರಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.