ETV Bharat / entertainment

ರಾಜಮೌಳಿ ಪಾದ ಸ್ಪರ್ಶಿಸಿದ ರಣ್‌ಬೀರ್‌ ಕಪೂರ್; ಬಾಲಿವುಡ್‌ ನಟನ ಕೊಂಡಾಡಿದ ಮಹೇಶ್‌ ಬಾಬು

author img

By ETV Bharat Karnataka Team

Published : Nov 28, 2023, 12:42 PM IST

Animal cinema promotion: ಬಿಡುಗಡೆಗೆ ಸಜ್ಜಾಗಿರುವ ಬಹುನಿರೀಕ್ಷಿತ 'ಅನಿಮಲ್'​ ಸಿನಿಮಾದ ಪ್ರಚಾರ ಜೋರಾಗಿ ನಡೆಯುತ್ತಿದೆ. ಪ್ರಚಾರ ಸಂದರ್ಭದಲ್ಲಿ ರಣ್‌ಬೀರ್‌ ಕಪೂರ್ ಅವರನ್ನು ನಿರ್ದೇಶಕ ರಾಜಮೌಳಿ ಹಾಗು ನಟ ಮಹೇಶ್‌ ಬಾಬು ಕೊಂಡಾಡಿದರು.

animal promotional event
ಅನಿಮಲ್​ ಸಿನಿಮಾ ಪ್ರಚಾರ

'ಅನಿಮಲ್​​'. ಇದು ಮುಂದಿನ ಬಹುನಿರೀಕ್ಷಿತ ಚಿತ್ರಗಳ ಪೈಕಿ ಒಂದು. ಡಿಸೆಂಬರ್ 1ರಂದು ವಿಶ್ವಾದ್ಯಂತ ತೆರೆಗಪ್ಪಳಿಸಲಿರುವ ಚಿತ್ರದ ಪ್ರಚಾರ ಬಿರುಸಿನಿಂದ ಸಾಗುತ್ತಿದೆ. ನವೆಂಬರ್ 27ರಂದು ಹೈದರಾಬಾದ್‌ನಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ​ ನಡೆಯಿತು. ಸಮಾರಂಭದಲ್ಲಿ ಚಿತ್ರತಂಡದೊಂದಿಗೆ ನಿರ್ದೇಶಕ ಎಸ್.​ಎಸ್.ರಾಜಮೌಳಿ, ನಟರಾದ ಪ್ರಭಾಸ್, ಮಹೇಶ್​ ಬಾಬು ಸೇರಿದಂತೆ ಸಿನಿಮೋದ್ಯಮದ ಖ್ಯಾತನಾಮರಿದ್ದರು.

ಈ ಸಂದರ್ಭದಲ್ಲಿ ಮಹೇಶ್ ಬಾಬು ಅವರು ರಣ್​​ಬೀರ್ ಕಪೂರ್ ಅವರನ್ನು ಹೊಗಳಿದರು. ರಣ್​​​ಬೀರ್ "ಭಾರತದ ಅತ್ಯುತ್ತಮ ನಟ" ಎಂದು ಬಣ್ಣಿಸಿದರು. ನೀಲಿ ಟಿ ಶರ್ಟ್, ಜೀನ್ಸ್‌ನಲ್ಲಿ ಮಹೇಶ್ ಬಾಬು ಕ್ಯಾಶುವಲ್​ ಲುಕ್‌ನಲ್ಲಿ ಮಿಂಚಿದರು.

ನಾನು ರಣ್​ಬೀರ್​ ಅವರ ಬಿಗ್​ ಫ್ಯಾನ್-ಮಹೇಶ್ ಬಾಬು: ಈ ಹಿಂದೆಯೂ ರಣ್​ಬೀರ್​ ಕಪೂರ್​ ಮೇಲಿರುವ ತಮ್ಮ ಅಭಿಮಾನವನ್ನು ಮಹೇಶ್‌ ಬಾಬು ತಿಳಿಸಿದ್ದರು. ಆದರೆ, ಆ ಸಂದರ್ಭದಲ್ಲಿ ನನ್ನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ ಎಂದೆನಿಸಿತು. ಇದೀಗ ಮತ್ತೆ ಹೇಳುತ್ತಿದ್ದೇನೆ, ನಾನು ರಣ್​ಬೀರ್​ ಅವರ ಬಿಗ್​ ಫ್ಯಾನ್​​ ಎಂದರು. ರಣ್​​​ಬೀರ್‌ಗೆ ತಮ್ಮ ಬೆಂಬಲ ಸೂಚಿಸಿದ ಮಹೇಶ್​ ಬಾಬು, ದೇಶದಲ್ಲೇ ಅತ್ಯುತ್ತಮ ನಟ ಎಂದು ಪುನರುಚ್ಚರಿಸಿದರು. ಮಹೇಶ್​​ ಹಿಂದೆ ನಿಂತಿದ್ದ ರಣ್​​ಬೀರ್ ಮೊಗದಲ್ಲಿ ತೇಜಸ್ಸು ಎದ್ದು ಕಾಣುತ್ತಿತ್ತು.

'Without Hesitation I'll Tell My Fav Actor is #RanbirKapoor𓃵'
India's Pride #SSRajamouli Words For our SUPERSTAR pic.twitter.com/9gx6QZttlR

— 🐰 (@rksbunny) November 27, 2023

ರಣ್​​ಬೀರ್ ಕಪೂರ್ ಮಾತನಾಡುವಾಗ, ಸೌತ್​ ಸೂಪರ್​ ಸ್ಟಾರ್​ನ ಒಕ್ಕಡು ಸಿನಿಮಾ ವೀಕ್ಷಿಸಿದ ನಂತರ ಅವರಿಗೆ ಮೆಸೇಜ್​ ಮಾಡಿದ್ದ ಕ್ಷಣವನ್ನು ನೆನಪಿಸಿಕೊಂಡರು. ಬಳಿಕ, ಮಹೇಶ್​ ಅವರ ಬೆಂಬಲ ಮತ್ತು ಗುಣಗಾನದ ಮಾತುಗಳಿಗೆ ಬ್ರಹ್ಮಾಸ್ತ್ರ ಸ್ಟಾರ್ ಕೃತಜ್ಞತೆ ಸಲ್ಲಿಸಿದರು. ಅಲ್ಲದೇ ವೇದಿಕೆಯಲ್ಲಿ "ಜೈ ಬಾಬು, ಜೈ ಬಾಬು" ಎಂದು ಹೇಳುವ ಮೂಲಕ ಮಹೇಶ್​ ಬಾಬು ಮೇಲಿನ ತಮ್ಮ ಅಭಿಮಾನವನ್ನು ರಣ್​ಬೀರ್ ವ್ಯಕ್ತಪಡಿಸಿದರು.

ಇದನ್ನೂ ಓದಿ: 'ಕಾಂತಾರ' ಒಂದು ದಂತಕಥೆ ಅಧ್ಯಾಯ 1 ಟೀಸರ್, ಫಸ್ಟ್‌ ಲುಕ್‌ ರಿಲೀಸ್: 9 ಮಿಲಿಯನ್​ಗೂ ಹೆಚ್ಚು ವೀಕ್ಷಣೆ

ರಾಜಮೌಳಿ ಪಾದ ಸ್ಪರ್ಶಿಸಿದ ರಣ್‌ಬೀರ್ ಕಪೂರ್: ಕಾರ್ಯಕ್ರಮದಲ್ಲಿ, ರಣ್​ಬೀರ್​ ಖ್ಯಾತ ನಿರ್ದೇಶಕ ಎಸ್‌.ಎಸ್.ರಾಜಮೌಳಿ ಅವರ ಪಾದ ಸ್ಪರ್ಶಿಸಿ ಗೌರವ ಸಲ್ಲಿಸಿದರು. ಆರ್​ಆರ್​ಆರ್​ ನಿರ್ದೇಶಕರು ಕೂಡ ರಣ್​​ಬೀರ್ ಕಪೂರ್ ಅವರನ್ನು ತಮ್ಮ ಮೆಚ್ಚಿನ ನಟ ಎಂದು ತಿಳಿಸಿದರು. ಅಲ್ಲದೇ ರಣ್​ಬೀರ್ ತಮ್ಮ ಟಾಪ್​ ಚಾಯ್ಸ್ ಎಂದೂ ತಿಳಿಸಿದರು. ಸಂದೀಪ್ ರೆಡ್ಡಿ ವಂಗಾ ಮತ್ತು ತಮ್ಮೊಂದಿಗೆ ಕೆಲಸದ ಆಫರ್ ಇಟ್ಟು ಓರ್ವರನ್ನು ಆಯ್ಕೆ ಮಾಡಲು ರಣ್​​ಬೀರ್‌ಗೆ ನಿರ್ದೇಶಕರು ತಮಾಷೆಯಾಗಿ ಸವಾಲೆಸೆದರು. ಅದಕ್ಕೆ ರಣ್​​ಬೀರ್ ಅನಿಮಲ್​ ಸಿನಿಮಾದ ಸಂದೀಪ್​ ರೆಡ್ಡಿ ವಂಗಾ ಅವರ ಹೆಸರು ಪ್ರಸ್ತಾಪಿಸಿದರು.

ಇದನ್ನೂ ಓದಿ: ಫಿಲ್ಮ್‌ಫೇರ್ ಒಟಿಟಿ ಅವಾರ್ಡ್ಸ್ 2023: ಆಲಿಯಾ, ಸೋನಾಕ್ಷಿಗೆ ಅತ್ಯುತ್ತಮ ನಟಿ ಪ್ರಶಸ್ತಿ

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರದಲ್ಲಿ ರಣ್​​ಬೀರ್ ಕಪೂರ್ ಜೊತೆ ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವರದಿಗಳಂತೆ, ಸಿನಿಮಾ 3 ಗಂಟೆ 21 ನಿಮಿಷಗಳ ರನ್​ ಟೈಮ್​ ಹೊಂದಿದೆ. ಡಿಸೆಂಬರ್ 1ರಂದು ಚಿತ್ರಮಂದಿರಗಳಲ್ಲಿ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.