ETV Bharat / entertainment

ಓಟ ಮುಂದುವರಿಸಿದ 'ಅನಿಮಲ್​': ಭಾರತದಲ್ಲಿ 338 ಕೋಟಿ ಕಲೆಕ್ಷನ್​!

ಅನಿಮಲ್​​ ಸಿನಿಮಾದ ಬಾಕ್ಸ್​ ಆಫೀಸ್​​ ಪ್ರಯಾಣ ಉತ್ತಮವಾಗಿದೆ. ಜಾಗತಿಕವಾಗಿ 500 ಕೋಟಿ ದಾಟಿರುವ ಸಿನಿಮಾ ಭಾರತದಲ್ಲಿ ಬರೋಬ್ಬರಿ 338.85 ಕೋಟಿ ರೂ. ಕಲೆಕ್ಷನ್​​ ಮಾಡಿದೆ.

Animal collection
ಅನಿಮಲ್ ಕಲೆಕ್ಷನ್​
author img

By ETV Bharat Karnataka Team

Published : Dec 8, 2023, 11:44 AM IST

ರಣ್​ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ಅನಿಮಲ್​​ ಸಿನಿಮಾದ ಬಾಕ್ಸ್​ ಆಫೀಸ್​​ ಪ್ರಯಾಣ ಉತ್ತಮವಾಗಿದೆ. ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ್ದರೂ, ಸಿನಿಮಾದ ಗಳಿಕೆ ಅತ್ಯುತ್ತಮವಾಗಿದೆ. ಹಿಂಸಾಚಾರ, ಸ್ತ್ರೀದ್ವೇಷದ ಸಿನಿಮಾ ಎಂಬ ಟೀಕೆ ವ್ಯಕ್ತವಾಗಿದ್ದರೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರ ಮೆಚ್ಚಿನ ಸಿನಿಮಾವಾಗಿ ಹೊರಹೊಮ್ಮಿದೆ. ವಿಕ್ಕಿ ಕೌಶಲ್ ಅವರ ಸ್ಯಾಮ್ ಬಹದ್ದೂರ್ ಸಿನಿಮಾ ಕೂಡ ಪ್ರದರ್ಶನ ಆಗುತ್ತಿದ್ದು, 'ಅನಿಮಲ್' ಗಲ್ಲಾಪೆಟ್ಟಿಗೆಯಲ್ಲಿ ಮೇಲುಗೈ ಸಾಧಿಸಿದೆ.

  • " class="align-text-top noRightClick twitterSection" data="">

ಅನಿಮಲ್ ಬಾಕ್ಸ್ ಆಫೀಸ್ ಕಲೆಕ್ಷನ್: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಅನಿಮಲ್ ಏಳನೇ ದಿನ 25.5 ಕೋಟಿ ರೂ. ಸಂಪಾದಿಸಿದೆ. ಈ ಮೂಲಕ ಭಾರತೀಯ ಬಾಕ್ಸ್ ಆಫೀಸ್​ನಲ್ಲಿ ಸಿನಿಮಾದ ಒಟ್ಟು ಕಲೆಕ್ಷನ್​ 338.85 ಕೋಟಿ ರೂ. ಆಗಿದೆ. ಅನಿಮಲ್‌ ಮತ್ತು ಸ್ಯಾಮ್​ ಬಹದ್ದೂರ್​ ಸಿನಿಮಾ ಡಿಸೆಂಬರ್​​ 1ರಂದು ತೆರೆಕಂಡಿತು. ಮೊದಲ ದಿನ ಭಾರತದಲ್ಲಿ ಬರೋಬ್ಬರಿ 63.8 ಕೋಟಿ ರೂ. ಗಳಿಸುವ ಮೂಲಕ ಅಬ್ಬರಿಸಿತು. ವಾರಾಂತ್ಯ ಈ ಸಂಖ್ಯೆ ಹೆಚ್ಚಿತು. ಭಾನುವಾರದ 71.46 ಕೋಟಿ ರೂ.ಗಳಿಸುವಲ್ಲಿ ಅನಿಮಲ್​ ಯಶಸ್ವಿಯಾಯಿತು.

ಜಾಗತಿಕ ಬಾಕ್ಸ್ ಆಫೀಸ್ ಕಲೆಕ್ಷನ್: ಜಾಗತಿಕ ಮಟ್ಟದಲ್ಲಿ ಅನಿಮಲ್ ಅಂಕಿ ಅಂಶ ಗಗನಕ್ಕೇರಿದೆ. ತೆರೆಕಂಡ ಮೊದಲ ಏಳು ದಿನಗಳಲ್ಲಿ ಬರೋಬ್ಬರಿ 527.6 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ. ಬ್ಲಾಕ್​​ಬಸ್ಟರ್ ಗದರ್ 2 ದಾಖಲೆಗಳನ್ನು ಮೀರಿಸಿದ್ದು, ಸದ್ಯ ಪಠಾಣ್ ದಾಖಲೆ ಮೇಲೆ ಕಣ್ಣಿಟ್ಟಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ಸಖತ್​ ಸದ್ದು ಮಾಡಿದೆ.

ಇದನ್ನೂ ಓದಿ: Yash19: TOXIC ಸಿನಿಮಾದಲ್ಲಿ ರಾಕಿಂಗ್​ ಸ್ಟಾರ್ ಯಶ್​​

ಮಿಶ್ರ ಪ್ರತಿಕ್ರಿಯೆಗಳ ಹೊರತಾಗಿಯೂ, ರಣ್​​​ಬೀರ್ ಕಪೂರ್ ಮತ್ತು ಬಾಬಿ ಡಿಯೋಲ್ ನಟನೆ ಪ್ರೇಕ್ಷಕರಿಂದ ಪ್ರಶಂಸೆ ಗಳಿಸಿದೆ. ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ, ಶಕ್ತಿ ಕಪೂರ್ ಮತ್ತು ತ್ರಿಪ್ತಿ ಡಿಮ್ರಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ತಂದೆ - ಮಗನ ಸಂಬಂಧದ ಸುತ್ತ ಕಥೆ ಹೆಣೆಯಲಾಗಿದೆ. ಹೊಡೆದಾಟ ಬಡೆದಾಟ, ಆ್ಯಕ್ಷನ್​ ದೃಶ್ಯಗಳು, ರಕ್ತಭರಿತ ದೃಶ್ಯಗಳು ಕೊಂಚ ಹೆಚ್ಚೇ ಇದೆ ಅಂತಾರೆ ನೆಟ್ಟಿಗರು. ಈ ತಿಂಗಳ 22 ರಂದು ಎರಡು ಬಹುನಿರೀಕ್ಷಿತ ಚಿತ್ರಗಳು ತೆರೆಕಾಣಲಿವೆ. ಪ್ರಭಾಸ್​ ನಟನೆಯ ಸಲಾರ್, ಶಾರುಖ್​ ಖಾನ್​ ಮುಖ್ಯಭೂಮಿಕೆಯ ಡಂಕಿ ಬಿಡುಗಡೆವರೆಗೂ ಮುನ್ನ ಅನಿಮಲ್ ಚಿತ್ರಮಂದಿರಗಳಲ್ಲಿ ಪ್ರಾಬಲ್ಯ ಸಾಧಿಸಲಿದೆ ಅನ್ನೋದು ಸಿನಿ ಪಂಡಿತರ ಅಭಿಪ್ರಾಯ.

ಇದನ್ನೂ ಓದಿ: ಹೊಟ್ಟೆಯ ಕ್ಯಾನ್ಸರ್​ನಿಂದ ನಟ ಜೂನಿಯರ್ ಮೆಹಮೂದ್ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.