ETV Bharat / entertainment

ನಟ ಅನಿಲ್​ ಕಪೂರ್​ ಇನ್​ಸ್ಟಾಗ್ರಾಮ್​ ಪೋಸ್ಟ್​, ಡಿಪಿ ನಾಪತ್ತೆ! 'ಅನಿಮಲ್​' ಪ್ರಚಾರ? - ಈಟಿವಿ ಭಾರತ ಕನ್ನಡ

ಬಾಲಿವುಡ್​ ನಟ ಅನಿಲ್ ಕಪೂರ್ ಅವರ ಇನ್​ಸ್ಟಾಗ್ರಾಮ್​ ಪೋಸ್ಟ್​, ಡಿಪಿ ಎಲ್ಲವೂ ಡಿಲೀಟ್​​ ಮಾಡಲಾಗಿದೆ. ಅವರ ಪುತ್ರಿ, ನಟಿ ಸೋನಂ ಕಪೂರ್​ ಕೂಡ ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

'Where is Anil Kapoor' trends on X after he deletes his social media posts; Mr India 2 on cards?
ನಟ ಅನಿಲ್​ ಕಪೂರ್​ ಇನ್​ಸ್ಟಾಗ್ರಾಮ್​ ಪೋಸ್ಟ್​, ಡಿಪಿ ಎಲ್ಲವೂ ಮಾಯಾ! ಸಿನಿಮಾ ಪ್ರಚಾರದ ಗಿಮಿಕ್ಕಾ?
author img

By ETV Bharat Karnataka Team

Published : Oct 20, 2023, 9:18 PM IST

Updated : Oct 20, 2023, 9:24 PM IST

ಬಾಲಿವುಡ್​ ನಟ ಅನಿಲ್ ಕಪೂರ್​ ಸುದ್ದಿಯೊಂದು ಸದ್ದು ಮಾಡುತ್ತಿದೆ. 'ಅನಿಮಲ್​' ಸಿನಿಮಾ ವಿಚಾರವಾಗಿ ಬ್ಯುಸಿಯಾಗಿರುವ ಇವರ ಇನ್​ಸ್ಟಾಗ್ರಾಮ್​ ಖಾತೆಯಿಂದ ಎಲ್ಲವೂ ಡಿಲೀಟ್​ ಆಗಿದೆ. ನಟ ಹಂಚಿಕೊಂಡಿದ್ದ ಪೋಸ್ಟ್​ ಜತೆಗೆ ಡಿಸ್​ಪ್ಲೈ ಪಿಕ್ಚರ್ಸ್​ (ಡಿಪಿ) ರಿಮೂವ್​ ಮಾಡಲಾಗಿದೆ. ಅನಿಲ್​ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಎಲ್ಲವನ್ನೂ ಅಳಿಸಿ ಹಾಕಿದ್ದಾರೆ ಎಂದು ಸೋಷಿಯಲ್​ ಮೀಡಿಯಾ ಬಳಕೆದಾರರು ಊಹಿಸುತ್ತಿದ್ದಾರೆ. ಅನಿಲ್​ ಕಪೂರ್​ ಪುತ್ರಿ, ನಟಿ ಸೋನಂ ಕಪೂರ್​ ಶಾಕಿಂಗ್​ ಪ್ರತಿಕ್ರಿಯೆ ನೀಡಿದ್ದಾರೆ.

60ರ ವಯಸ್ಸಿನಲ್ಲೂ ಸಖತ್​ ಹ್ಯಾಂಡ್ಸಮ್​ ಆಗಿರುವ ಅನಿಲ್​ ಕಪೂರ್​ಗೆ​ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಅವರ ನಟನೆ ಮತ್ತು ಜೀವನಶೈಲಿಯನ್ನು ಅನೇಕರು ಇಷ್ಟಪಡುತ್ತಾರೆ. ವೃತ್ತಿಪರ ಅಥವಾ ವೈಯಕ್ತಿಕವೇ ಆಗಿರಲಿ ಸೋಷಿಯಲ್​ ಮೀಡಿಯಾದಲ್ಲಿ ಆಗಾಗ ಪೋಸ್ಟ್​ ಹಂಚಿಕೊಳ್ಳುತ್ತಿರುತ್ತಾರೆ. ಹೀಗಾಗಿಯೇ ಅವರಿಗೆ ಇನ್​ಸ್ಟಾದಲ್ಲಿ 5.8 ಮಿಲಿಯನ್​ ಅನುಯಾಯಿಗಳಿದ್ದಾರೆ. ಇದೀಗ ಸಡನ್​ ಆಗಿ ಅವರ ಎಲ್ಲಾ ಪೋಸ್ಟ್​​ಗಳು, ಡಿಪಿ ಕೂಡ ಮಾಯ ಆಗಿರುವುದು ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದೆ. ಇದನ್ನು ಕಂಡು ಸೋನಂ ಕಪೂರ್​ ಕೂಡ ಅಚ್ಚರಿಗೊಂಡಿದ್ದಾರೆ.

'Where is Anil Kapoor' trends on X after he deletes his social media posts; Mr India 2 on cards?
ಅನಿಲ್​ ಕಪೂರ್​ ಪುತ್ರಿ, ನಟಿ ಸೋನಂ ಕಪೂರ್ ಇನ್​ಸ್ಟಾ ಸ್ಟೋರಿ

ಇದನ್ನೂ ಓದಿ: Animal: ರೊಮ್ಯಾಂಟಿಕ್​ ಮೂಡ್​ನಲ್ಲಿ ರಣ್​ಬೀರ್​ - ರಶ್ಮಿಕಾ; 'ಹುವಾ ಮೈನ್' ಹಾಡು ನಾಳೆ ಬಿಡುಗಡೆ

ಅನಿಲ್​ ಕಪೂರ್​ ಅವರ ಇನ್​ಸ್ಟಾಗ್ರಾಮ್​ ಖಾಲಿ ಖಾತೆಯ ಫೋಟೋವನ್ನು ಇನ್​ಸ್ಟಾ ಸ್ಟೋರಿ ಹಾಕಿಕೊಂಡಿರುವ ಸೋನಂ ಕಪೂರ್, 'ಅಪ್ಪಾ!?' ಎಂದು ಬರೆದುಕೊಂಡಿದ್ದಾರೆ. ಸೋನಂ ಕಪೂರ್​ ಜತೆಗೆ ಅನಿಲ್​ ಅಭಿಮಾನಿಗಳು ಕೂಡ ನಟನ ನಡೆಗೆ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. 'ಅನಿಮಲ್​' ಸಿನಿಮಾ ಇನ್ನೇನು ಬಿಡುಗಡೆಗೆ ತಿಂಗಳುಗಳು ಬಾಕಿ ಇರುವಾಗ ನಟ ಈ ರೀತಿಯಾಗಿ ಮಾಡಿರುವುದು ಅವರ ಫ್ಯಾನ್ಸ್​ಗೆ ಬೇಸರ ತಂದಿದೆ. ಇದು ಸಿನಿಮಾ ಪ್ರಚಾರದ ಗಿಮಿಕ್​ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಚಾರದ ಗಿಮಿಕ್ಕಾ?: ಈ ಹಿಂದೆ ಬಾಲಿವುಡ್​ ನಟಿ ಕಾಜೋಲ್​ ತಮ್ಮ ಇನ್​ಸ್ಟಾ ಪೋಸ್ಟ್​ಗಳನ್ನೆಲ್ಲಾ ಡಿಲೀಟ್​ ಮಾಡಿ ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿದ್ದರು. 'Facing one of the toughest trials of my life' ಎಂಬ ಒಂದೇ ಒಂದು ಸೀಕ್ರೆಟ್ ಪೋಸ್ಟ್ ಶೇರ್ ಮಾಡಿ ಉಳಿದ ಪೋಸ್ಟ್​ಗಳೆಲ್ಲವನ್ನೂ ಅಳಿಸಿ ಹಾಕಿದ್ದರು. ಬಳಿಕ ನಟಿ ಟೆನ್ಷನ್​​ನಲ್ಲಿ ಕಾರು ಹತ್ತಿದ ವಿಡಿಯೋ ಕೂಡ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿ ಅಭಿಮಾನಿಗಳ ಚಿಂತೆಗೆ ಕಾರಣವಾಗಿತ್ತು. ಆದ್ರೆ ಇದೆಲ್ಲವೂ ದಿ ಟ್ರಯಲ್ ವೆಬ್​ ಸೀರಿಸ್​ನ ಪ್ರಚಾರದ ಭಾಗವಾಗಿತ್ತು.

ಇತ್ತೀಚೆಗೆ ಪ್ಯಾನ್​ ಇಂಡಿಯಾ ಸ್ಟಾರ್​ ನಟ ಪ್ರಭಾಸ್ ಇನ್​ಸ್ಟಾಗ್ರಾಮ್ ಖಾತೆಯೂ ಡಿಲೀಟ್​ ಆಗಿತ್ತು. ಇದು ಕೂಡ 'ಸಲಾರ್​' ಪ್ರಮೋಷನ್​ ಭಾಗ ಎನ್ನಲಾಗಿತ್ತು. ಸದ್ಯ ಅವರ ಖಾತೆ ಚಾಲ್ತಿಯಲ್ಲಿದೆ. ಹೀಗಾಗಿ ಅನಿಲ್​ ಕಪೂರ್​ ಕೂಡ 'ಅನಿಮಲ್​' ಪ್ರಚಾರದ ಭಾಗವಾಗಿ ಹೀಗೆ ಮಾಡಿರಬಹುದೆಂಬ ಕೆಲವರ ಗ್ರಹಿಕೆಯನ್ನು ನಾವು ನಿರಾಕರಿಸುವಂತಿಲ್ಲ.​

ಇದನ್ನೂ ಓದಿ: ರಶ್ಮಿಕಾ ರಣ್​ಬೀರ್​ ಜೋಡಿಯ ಅನಿಮಲ್​ ಸಿನಿಮಾದಲ್ಲಿ ಬಾಬಿ ಡಿಯೋಲ್​ ವಿಲನ್​​: ಫಸ್ಟ್ ಲುಕ್​ ರಿಲೀಸ್​

Last Updated : Oct 20, 2023, 9:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.