ಬಣ್ಣದ ಲೋಕಕ್ಕೆ ಒಮ್ಮೆ ಕಾಲಿಟ್ಟರೇ ಸಾಕು, ಮತ್ತೆ ಅವರೆಲ್ಲಿ ಹೋಗಬೇಕಿದ್ದರೂ ಮುಖ ಮರೆಮಾಚಬೇಕಾಗುತ್ತದೆ. ಇಲ್ಲದಿದ್ದರೇ ಬಾಡಿಗಾರ್ಡ್ಗಳನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ ಸೆಲೆಬ್ರಿಟಿಗಳನ್ನು ಕಂಡೊಡನೆ ಅಭಿಮಾನಿಗಳು ಅವರೊಂದಿಗೆ ಸೆಲ್ಫಿಗಾಗಿ ಮುಗಿಬೀಳುತ್ತಾರೆ. ಇತ್ತೀಚೆಗೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರು ಹೊರಗಡೆ ಕಾಣಿಸಿಕೊಂಡರು. ಈ ವೇಳೆ, ಫ್ಯಾನ್ಸ್ ಫೋಟೋ ತೆಗೆದುಕೊಳ್ಳಲು ತಾರೆಯ ಮೇಲೆ ಬಿದ್ದಿದ್ದು, ಅವರನ್ನು ಬದಿಗೆ ಸರಿಸಲು ಅಂಗರಕ್ಷಕರು ಹರಸಾಹಸ ಪಡಬೇಕಾಯಿತು.
ಆದರೆ, ಇದನ್ನು ಗಮನಿಸಿದ ಅನನ್ಯಾ ಫೋಟೋ ತೆಗೆದುಕೊಳ್ಳುವಂತೆ ಅಭಿಮಾನಿಯಲ್ಲಿ ಕೇಳಿಕೊಂಡರು. ಈ ಘಟನೆ ನಡೆದು ಕೆಲವು ತಿಂಗಳುಗಳೇ ಕಳೆದಿದ್ದರೂ ಸಹ, ಈ ವಿಡಿಯೋ ಇತ್ತೀಚೆಗೆ ವೈರಲ್ ಆಗಿದೆ. ದೃಶ್ಯದಲ್ಲಿ ಅನನ್ಯಾ ಬೆರಳೆಣಿಕೆಯ ಅಭಿಮಾನಿಗಳೊಂದಿಗೆ ಸೆಲ್ಫಿಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಅದಾಗ್ಯೂ, ಒಬ್ಬ ವ್ಯಕ್ತಿಯು ಹಿಂದಿನಿಂದ ಅವರ ಬಳಿಗೆ ಬಂದು ಫೋಟೋ ತೆಗೆಯಲು ಪ್ರಯತ್ನಿಸಿದರು. ಇದನ್ನು ಗಮನಿಸಿದ ಅನನ್ಯಾ ಅಂಗರಕ್ಷಕರು ಆ ವ್ಯಕ್ತಿಯನ್ನು ಬಲವಂತವಾಗಿ ಅಲ್ಲಿಂದ ತಳ್ಳಿದರು. ಆದರೆ ಇದನ್ನು ಕಂಡ ನಟಿ ತಕ್ಷಣ ಪ್ರತಿಕ್ರಿಯಿಸಿ, ದೂರದಿಂದ ಸೆಲ್ಫಿ ತೆಗೆದುಕೊಳ್ಳುವಂತೆ ಅಭಿಮಾನಿಗೆ ಕೇಳಿಕೊಂಡರು.
ಆದರೆ ಸದ್ಯ ಈ ವಿಡಿಯೋ ವೈರಲ್ ಆಗಿರೋದು, ಅಂಗರಕ್ಷಕರ ಹಿಂಸಾತ್ಮಕ ವರ್ತನೆಗೆ. ಅಭಿಮಾನಿಯೊಬ್ಬರು ಈ ಬಗ್ಗೆ ಟೀಕಿಸುವಾಗ ಸೋಷಿಯಲ್ ಮೀಡಿಯಾ ಬಳಕೆದಾರರು ಅವರ ಪರವಾಗಿ ನಿಂತರು. ಕೆಲವರು ಅನನ್ಯಾ ಅಂಗರಕ್ಷಕರನ್ನು ಶ್ಲಾಘಿಸಿದರು. ನಿಮ್ಮ ಬಾಡಿಗಾರ್ಡ್ ನಮಗೆ ಅವಮಾನ ಮಾಡಿಬಿಟ್ಟ ಎಂದು ನೆಟ್ಟಿಗರು ಕಿಡಿ ಕಾರಿದರು. ಇನ್ನು ಕೆಲವರು ನಿಮ್ಮ ಅಂಗರಕ್ಷಕರಿಗೆ ಸೆಲ್ಯೂಟ್. ಅವರು ನಿಮ್ಮನ್ನು ರಕ್ಷಿಸಿದ್ದಾರೆ ಎಂದು ಪ್ರಶಂಸಿದರು.
ಇದನ್ನೂ ಓದಿ: ವಿಜಯ್ - ಸಮಂತಾ ಸಿನಿಮಾ ಶೂಟಿಂಗ್ ಕಂಪ್ಲೀಟ್: ಕೇಕ್ ಕತ್ತರಿಸಿ 'ಖುಷಿ'ಪಟ್ಟ ಚಿತ್ರತಂಡ
ಇನ್ನು ಅನನ್ಯಾ ಪಾಂಡೆ ಸಿನಿಮಾ ವಿಚಾರವಾಗಿ ನೋಡುವುದಾದರೆ, ರಾಜ್ ಶಾಂಡಿಲ್ಯ ಅವರ ಡ್ರೀಮ್ ಗರ್ಲ್ 2 ನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಆಯುಷ್ಮಾನ್ ಖುರಾನಾ ಜೊತೆಗೆ ನಟಿಸಲಿದ್ದಾರೆ. ಡ್ರೀಮ್ ಗರ್ಲ್ 2 ಆಗಸ್ಟ್ 25 ರಂದು ಬಿಡುಗಡೆಗೊಳ್ಳಲು ತಯಾರಿ ನಡೆಸುತ್ತಿದೆ. ಇದರ ಜೊತೆಗೆ, ಫರ್ಹಾನ್ ಅಖ್ತರ್ ಅವರ ಖೋ ಗಯೇ ಹಮ್ ಕಹಾ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಸಿದ್ಧಾಂತ್ ಚತುರ್ವೇದಿ ಜೊತೆಗೆ ನಟಿಸಲಿದ್ದಾರೆ. ವಿಕ್ರಮಾದಿತ್ಯ ಮೋಟ್ವಾನೆ ಅವರ ಮುಂಬರುವ ಹೆಸರಿಡದ ಚಲನಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಕಾಲ್ ಮಿ ಬೇ ಎಂಬ ವೆಬ್ ಸಿರೀಸ್ ಕೂಡ ಇವರ ಕೈಯಲ್ಲಿದೆ.
ಆದಿತ್ಯ ರಾಯ್ ಕಪೂರ್ ಜೊತೆ ಡೇಟಿಂಗ್: ಅನನ್ಯಾ ಪಾಂಡೆ ಮತ್ತು ನಟ ಆದಿತ್ಯ ರಾಯ್ ಕಪೂರ್ ಡೇಟಿಂಗ್ ವದಂತಿಗಳಿಂದ ಸುದ್ದಿಯಲ್ಲಿದ್ದಾರೆ. 2022ರಲ್ಲಿ ನಟಿ ಕೃತಿ ಸನೋನ್ ಅವರು ಆಯೋಜಿಸಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ಆದಿತ್ಯ ಮತ್ತು ಅನನ್ಯಾ ಒಟ್ಟಿಗೆ ಕಾಣಿಸಿಕೊಂಡ ಹಿನ್ನೆಲೆ ಅಂದಿನಿಂದ ಡೇಟಿಂಗ್ ವದಂತಿಗಳು ಪ್ರಾರಂಭವಾಗಿವೆ. ದಿವಾಲಿ ಪಾರ್ಟಿ ಅಲ್ಲದೇ ಅವರು ವಿವಿಧ ಸಂದರ್ಭಗಳಲ್ಲಿ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Project K: ಲಕೋಟೆಯಲ್ಲಿದೆ 'ಪ್ರಾಜೆಕ್ಟ್ ಕೆ' ಹೆಸರು: ಶೀರ್ಷಿಕೆ ಇದಾಗಿರಬಹುದೆಂದು ಊಹಿಸಿದ ಸಿನಿಪ್ರೇಮಿಗಳು