ETV Bharat / entertainment

ನಾಟು ನಾಟು ಆಸ್ಕರ್​ಗೆ ಅರ್ಹವೇ? ಎಂದು ಪ್ರಶ್ನಿಸಿದ ನಟಿ ಹಿಗ್ಗಾಮುಗ್ಗಾ ಟ್ರೋಲ್​!

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅನನ್ಯಾ ಚಟರ್ಜಿ ಅವರು ನಾಟು ನಾಟು ಹಾಡಿಗೆ ಆಸ್ಕರ್​ ದೊರೆತ ಬಗ್ಗೆ ಟೀಕಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಆಗುತ್ತಿದ್ದಾರೆ.

Naatu Naatu oscar
ನಾಟು ನಾಟು ಆಸ್ಕರ್ 2023
author img

By

Published : Mar 15, 2023, 5:47 PM IST

ಆರ್​ಆರ್​ಆರ್​ ಚಿತ್ರದ ಅತ್ಯಂತ ಜನಪ್ರಿಯ ಹಾಡು ನಾಟು ನಾಟು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ವಿಶ್ವದ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ನಾಟು ನಾಟು ಚಿತ್ರದ ಆಸ್ಕರ್ ಗೌರವವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದಾಗ್ಯೂ, ನಾಟು ನಾಟು ಹಾಡು ನಿಜವಾಗಿಯೂ ಆಸ್ಕರ್ ಪ್ರಶಸ್ತಿಗೆ ಅರ್ಹವಾಗಿದೆಯೇ ಎಂಬ ಬಗ್ಗೆ 95ನೇ ಅಕಾಡೆಮಿ ಪ್ರಶಸ್ತಿ ಸಮಿತಿಯ ನಿರ್ಧಾರವನ್ನು ಕೆಲವರು ಪ್ರಶ್ನಿಸಿದ್ದಾರೆ.

  • " class="align-text-top noRightClick twitterSection" data="">

ನಾಟು ನಾಟು ಬಗ್ಗೆ ಅನನ್ಯಾ ಚಟರ್ಜಿ ಟೀಕೆ: ಫೇಸ್‌ಬುಕ್‌ ಪೋಸ್ಟ್​​ನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅನನ್ಯಾ ಚಟರ್ಜಿ (Ananya Chatterjee) ಅವರು ನಾಟು ನಾಟು ಸಾಧನೆ ಬಗ್ಗೆ ಹೆಮ್ಮೆಪಡಬೇಕೇ ಎಂದು ಕೇಳಿದ್ದಾರೆ. "ನನಗೆ ಅರ್ಥವಾಗುತ್ತಿಲ್ಲ, 'ನಾಟು ನಾಟು' ಬಗ್ಗೆ ನಾನು ಹೆಮ್ಮೆಪಡಬೇಕೇ? ನಾವು ಎಲ್ಲಿಗೆ ಹೋಗುತ್ತಿದ್ದೇವೆ? ಎಲ್ಲರೂ ಏಕೆ ಸುಮ್ಮನಿದ್ದಾರೆ? ಇದು ನಮ್ಮ ಭಾರತ ಬತ್ತಳಿಕೆಯಲ್ಲಿ ಉತ್ತಮವಾದದ್ದೇ? ಆಕ್ರೋಶ ಹೆಚ್ಚುತ್ತಿದೆ'' ಎಂದು ಬರೆದಿದ್ದಾರೆ.

ಅನನ್ಯಾ ಚಟರ್ಜಿ ವಿರುದ್ಧ ಕಾಮೆಂಟ್: ಅವರ ಫೇಸ್​ಬುಕ್​​ ಪೋಸ್ಟ್​ಗೆ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಕಾಮೆಂಟ್​ ಮೂಲಕ ನಟಿ ಅನನ್ಯಾ ಚಟರ್ಜಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಹಿಗ್ಗಾಮುಗ್ಗ ಟ್ರೋಲಿಗೊಳಗಾಗಿದ್ದಾರೆ. "ನಿಮ್ಮ ಅಸೂಯೆ ಮತ್ತು ನಿಮ್ಮ ಪ್ರಚಾರವನ್ನು ಪಡೆಯುವ ವಿಧಾನ ನನಗೆ ಅರ್ಥವಾಗಿದೆ. ನಿಮ್ಮ ಈ ಕಾಮೆಂಟ್‌ಗೂ ಮೊದಲು ನಾನು ನಿಮ್ಮನ್ನು ಎಂದಿಗೂ ತಿಳಿದಿರಲಿಲ್ಲ. ನೀವು ಯಾರೆಂದು ನನಗೆ ಇನ್ನೂ ತಿಳಿದಿಲ್ಲ ಮತ್ತು ನಿಮ್ಮ ಬಗ್ಗೆ ತಿಳಿಯಲು ಸಹ ನಾನು ಬಯಸುವುದಿಲ್ಲ. ನಿಮ್ಮ ಕೆಲಸದ ಮೇಲೆ ಉತ್ತಮವಾಗಿ ಗಮನಹರಿಸಿ'' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಅನನ್ಯಾ ಚಟರ್ಜಿ ಟ್ರೋಲ್: "ಟೀಕೆ ಮಾಡುವುದನ್ನು ನಿಲ್ಲಿಸಿ ಮತ್ತು ದಯವಿಟ್ಟು ಒಳ್ಳೆಯ ಚಲನಚಿತ್ರಗಳನ್ನು ಮಾಡಿ. ನಿಮ್ಮ ಉದ್ಯಮದ ಶೇ. 65ಕ್ಕಿಂತ ಹೆಚ್ಚು ಸಹೋದ್ಯೋಗಿಗಳು ರಾಜಕೀಯಕ್ಕೆ ಸೇರಿದ್ದಾರೆ, ಅವರಲ್ಲಿ ಶೇ. 25ರಷ್ಟು ಜನರು ಅಕ್ರಮ ಹಣ ವರ್ಗಾವಣೆ ಮತ್ತು ಇತರ ಆರೋಪಗಳನ್ನು ಎದುರಿಸಿದ್ದಾರೆ. ಒಂದು ಹಾಡು ಅಥವಾ ಸಾಧನೆಯನ್ನು ಟೀಕಿಸುವ ಮೊದಲು ಜಾಗತಿಕವಾಗಿ ಏನನ್ನಾದರೂ ಸಾಧಿಸಿ. ಬೆಂಗಾಲಿ ಚಲನಚಿತ್ರೋದ್ಯಮದಲ್ಲಿ ಏನನ್ನಾದರೂ ಮಾಡಲು ಪ್ರಯತ್ನಿಸಿ. ಅದು ಜಾಗತಿಕ ಪ್ರೇಕ್ಷಕರಿಂದ ಪ್ರಶಂಸೆಗೆ ಒಳಗಾಗುತ್ತದೆ" ಎಂದು ಮತ್ತೊಬ್ಬರು ಟೀಕಿಸಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಎರಡು ಆಸ್ಕರ್​.. ಉಳಿದ ವಿಭಾಗಗಳಲ್ಲಿ ಇವರಿಗೆಲ್ಲಾ ಪ್ರಶಸ್ತಿ

ಲೇಡಿ ಗಾಗಾ ಮತ್ತು ರಿಹನ್ನಾ ಅವರಂತಹ ಪ್ರಸಿದ್ಧ ಕಲಾವಿದರನ್ನು ಹಿಂದಿಕ್ಕಿ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದೆ. ಆರ್​ಆರ್​ಆರ್​ ತಂಡದ ಪರವಾಗಿ ಸಾಹಿತಿ ಚಂದ್ರಬೋಸ್ ಮತ್ತು ಸಂಗೀತ ಸಂಯೋಜಕ ಎಂ.ಎಂ ಕೀರವಾಣಿ ಪ್ರಶಸ್ತಿ ಸ್ವೀಕರಿಸಿದರು. ನಟರಾದ ಜೂನಿಯರ್ ಎನ್‌ಟಿಆರ್ ಮತ್ತು ರಾಮ್​ಚರಣ್, ನಿರ್ದೇಶಕ ಎಸ್‌ಎಸ್ ರಾಜಮೌಳಿ, ಗಾಯಕರಾದ ರಾಹುಲ್ ಸಿಪ್ಲಿಗಂಜ್ ಮತ್ತು ಕಾಲ ಭೈರವ ಸೇರಿದಂತೆ ಹಲವರು ಇತ್ತೀಚೆಗಷ್ಟೇ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಕನ್ನಡ ಗೊತ್ತಿಲ್ಲವೆಂದು ಅವಮಾನ: ಸಲ್ಮಾನ್ ಯೂಸುಫ್ ಖಾನ್ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.