ಶುಕ್ರವಾರ ಸಂಜೆ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಾರ್ಷಿಕ ಸಮಾರಂಭ ಬಹಳ ಅದ್ಧೂರಿಯಾಗಿ ನಡೆಯಿತು. ಬಹುತೇಕ ಬಾಲಿವುಡ್ ತಾರೆಯರ ಮಕ್ಕಳು ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಹಿನ್ನೆಲೆ, ಒಂದೇ ಸೂರಿನಡಿ ಬಾಲಿವುಡ್ ಖ್ಯಾತನಾಮರು ಸಮಾಗಮಗೊಂಡಿದ್ದರು. ಅಮಿತಾಭ್ ಬಚ್ಚನ್ ಅವರಿಂದ ಹಿಡಿದು ಶಾರುಖ್ ಖಾನ್ ವರೆಗೆ ಹಲವರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
-
T 4860 - pride and joy at progeny achievements
— Amitabh Bachchan (@SrBachchan) December 16, 2023 " class="align-text-top noRightClick twitterSection" data="
">T 4860 - pride and joy at progeny achievements
— Amitabh Bachchan (@SrBachchan) December 16, 2023T 4860 - pride and joy at progeny achievements
— Amitabh Bachchan (@SrBachchan) December 16, 2023
ಶಾಲಾ ಸಮಾರಂಭದಲ್ಲಿ ಬಿಗ್ ಬಿ, ಪ್ರಸಿದ್ಧ ನಟ ಅಮಿತಾಭ್ ಬಚ್ಚನ್ ಅವರು ತಮ್ಮ ಮೊಮ್ಮಗಳು ಆರಾಧ್ಯ ಬಚ್ಚನ್ ಪ್ರದರ್ಶನವನ್ನು ನೋಡಿ ಬಹಳ ಸಂತೋಷಪಟ್ಟಿದ್ದಾರೆ. ಅದ್ಭುತ ಪ್ರದರ್ಶನದ ನಂತರ, ಬಿಗ್ ಬಿ ತಮ್ಮ ಮೊಮ್ಮಗಳನ್ನು ಹಾಡಿ ಹೊಗಳಿದ್ದಾರೆ.
ಸೋಷಿಯಲ್ ಮೀಡಿಯಾಗಳಲ್ಲಿ ಮೊಮ್ಮಗಳ ಸಾಧನೆ ಬಗ್ಗೆ ಬಿಗ್ ಬಿ ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ. ತಮ್ಮ ಬ್ಲಾಗ್‌ನಲ್ಲಿ ಈ ಬಗ್ಗೆ ಬರೆದುಕೊಂಡ ಬಿಗ್ ಬಿ, 'ನಾನು ಶೀಘ್ರದಲ್ಲೇ ನಿಮ್ಮೊಂದಿಗೆ ಇರುತ್ತೇನೆ. ಸದ್ಯ ಆರಾಧ್ಯಳ ಶಾಲೆಯಲ್ಲಿ ಸಂಗೀತ ಕಾರ್ಯಕ್ರಮ, ಪ್ರದರ್ಶನಗಳನ್ನು ನೋಡುವುದರಲ್ಲಿ ಬ್ಯುಸಿ. ಇದು ನಮಗೆಲ್ಲರಿಗೂ ಸಂತೋಷ ಮತ್ತು ಹೆಮ್ಮೆಯ ಕ್ಷಣವಾಗಿದೆ'' ಎಂದು ಬರೆದುಕೊಂಡಿದ್ದಾರೆ.
ಆರಾಧ್ಯ ಬಚ್ಚನ್ ಶಾಲಾ ಕಾರ್ಯಕ್ರಮದಿಂದ ಅವರ ಅನೇಕ ವಿಡಿಯೋಗಳು ವೈರಲ್ ಆಗಿವೆ. ಅವುಗಳ ಪೈಕಿ ಒಂದರಲ್ಲಿ, ಹಿನ್ನೆಲೆಯಲ್ಲಿ ಮ್ಯೂಸಿಕ್ ಪ್ಲೇ ಆಗುತ್ತಿದ್ದು, ಇಂಗ್ಲಿಷ್‌ನಲ್ಲಿ ತಮ್ಮ ಡೈಲಾಗ್ಸ್ಗಳನ್ನು ಅಚ್ಚುಕಟ್ಟಾಗಿ ಹೇಳುವುದನ್ನು ಕಾಣಬಹುದು. ಮಗಳು ವೇದಿಕೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾಗ ತಾಯಿ ಐಶ್ವರ್ಯಾ ರೈ ಈ ಅಮೂಲ್ಯ ಕ್ಷಣಗಳನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿಯುತ್ತಿದ್ದರು. ಐಶ್ವರ್ಯಾ ಸೇರಿದಂತೆ ಬಚ್ಚನ್ ಕುಟುಂಬಕ್ಕೆ ಇದೊಂದು ಹೆಮ್ಮೆಯ ಕ್ಷಣವಾಗಿದೆ.
ಇದನ್ನೂ ಓದಿ: ಅಮಿತಾಭ್, ಐಶ್ವರ್ಯಾ, ಶಾರುಖ್ ಡ್ಯಾನ್ಸ್ ವಿಡಿಯೋ ವೈರಲ್; ಅಭಿಮಾನಿಗಳಿಂದ ಪ್ರೀತಿಯ ಮಳೆ
ಆರಾಧ್ಯ ಬಚ್ಚನ್ ವಿಡಿಯೋಗಳು ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಂದಿನ ಸೂಪರ್ ಸ್ಟಾರ್ ಎಂದೆಲ್ಲಾ ಕಾಮೆಂಟ್ಗಳು ಬಂದಿವೆ. ಆರಾಧ್ಯಳ ಅಭಿನಯ ಸಾಮರ್ಥ್ಯಕ್ಕೆ ನೆಟ್ಟಿಗರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಮಕ್ಕಳ ಶಾಲಾ ಸಮಾರಂಭಕ್ಕೆ ಸಾಕ್ಷಿಯಾದ ಬಚ್ಚನ್, ಖಾನ್ ಕುಟುಂಬಸ್ಥರು: ವಿಡಿಯೋ ನೋಡಿ
ಅಮಿತಾಭ್ ಬಚ್ಚನ್ ಕೊನೆಯದಾಗಿ ಟೈಗರ್ ಶ್ರಾಫ್ ಮತ್ತು ಕೃತಿ ಸನೋನ್ ಅವರ 'ಗಣ್ಪತ್' ನಲ್ಲಿ ಕಾಣಿಸಿಕೊಂಡರು. ಮುಂದಿನ ಬಹುನಿರೀಕ್ಷಿತ ಸಿನಿಮಾ 'ಕಲ್ಕಿ 2898 ಎಡಿ'. ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಬಹುತಾರಾಗಣದ ಈ ಚಿತ್ರದಲ್ಲಿ ಬಿಗ್ ಬಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಸೆಕ್ಷನ್ 84' ಪ್ರಾಜೆಕ್ಟ್ ಸಹ ನಟನ ಕೈಯಲ್ಲಿದೆ. ಇದಲ್ಲದೇ ರಜನಿಕಾಂತ್ ಅವರ ತಲೈವರ್ 170 (ವೆಟ್ಟೈಯನ್) ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.