ನಮ್ಮ ಚಿಕ್ಕ ಸ್ನೇಹಿತರು, ಹೇಳದೇ ಹೊರಟು ಬಿಟ್ಟರು.. ಸಾಕು ನಾಯಿ ನಿಧನಕ್ಕೆ ಬಿಗ್ ಬಿ ಭಾವನಾತ್ಮಕ ಪೋಸ್ಟ್ - ಸಾಕು ನಾಯಿ ನಿಧನಕ್ಕೆ ಬಿಗ್ ಬಿ ಭಾವನಾತ್ಮಕ ಪೋಸ್ಟ್
ನಟ ಅಮಿತಾಬ್ ಬಚ್ಚನ್ ಸಾಕು ನಾಯಿ ಸಾವನ್ನಪ್ಪಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಿಗ್ ಬಿ ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ್ದಾರೆ.

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಸಾಕು ನಾಯಿ ಮೃತಪಟ್ಟಿದೆ. ತಮ್ಮ ಮುದ್ದು ನಾಯಿ ಜೊತೆಗಿನ ಫೋಟೋ ಹಂಚಿಕೊಂಡಿರುವ ಬಿಗ್ ಬಿ, ಭಾವನಾತ್ಮಕ ಬರಹ ಬರೆದಿದ್ದಾರೆ. ಅಮಿತಾಬ್ ಕಂಬನಿ ಮಿಡಿದಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸುದ್ದಿಯಾಗಿದೆ.
ಸದಾ ಕುಟುಂಬಕ್ಕೆ ಸಮಯ ಕೊಡುವ, ಜೊತೆಗೆ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಸೂಪರ್ಸ್ಟಾರ್ ಈಗ ಸೋಷಿಯಲ್ ಮೀಡಿಯಾದಲ್ಲಿ ಬಹಳ ಎಮೋಷನಲ್ ಆಗಿ ಪೋಸ್ಟ್ ಮಾಡಿದ್ದಾರೆ. ''ನಮ್ಮ ಒಬ್ಬರು ಚಿಕ್ಕ ಸ್ನೇಹಿತರು, ಕೆಲಸದ ಸಮಯದಲ್ಲಿ ಜೊತೆಯಲ್ಲಿದ್ದರು, ಹಾಗೆಯೇ ಬೆಳೆಯುತ್ತಿದ್ದರು, ಒಂದು ದಿನ ಹೇಳದೇ ಹೊರಟು ಬಿಟ್ಟರು'' ಎಂದು ಮುದ್ದಿನ ನಾಯಿ ಬಗ್ಗೆ ಬರೆದ ಅಮಿತಾಬ್ ಕಣ್ಣೀರಿನ ಇಮೋಜಿ ಹಾಕಿದ್ದಾರೆ.
-
T 4469 - हमारे एक छोटे से दोस्त, काम के क्षण !
— Amitabh Bachchan (@SrBachchan) November 15, 2022 " class="align-text-top noRightClick twitterSection" data="
फिर ये बड़े होते हैं ; और फिर एक दिन छोड़ के चले जाते हैं 😢 pic.twitter.com/IK3YJtrzEv
">T 4469 - हमारे एक छोटे से दोस्त, काम के क्षण !
— Amitabh Bachchan (@SrBachchan) November 15, 2022
फिर ये बड़े होते हैं ; और फिर एक दिन छोड़ के चले जाते हैं 😢 pic.twitter.com/IK3YJtrzEvT 4469 - हमारे एक छोटे से दोस्त, काम के क्षण !
— Amitabh Bachchan (@SrBachchan) November 15, 2022
फिर ये बड़े होते हैं ; और फिर एक दिन छोड़ के चले जाते हैं 😢 pic.twitter.com/IK3YJtrzEv
ಇದನ್ನೂ ಓದಿ: ಮಂಗಳಮುಖಿಯ ಪ್ರೀತಿಯಲ್ಲಿ ಬೀಳುವ ನಾಯಕ.. 'ಜಾಯ್‌ಲ್ಯಾಂಡ್' ಸಿನಿಮಾ ಬ್ಯಾನ್, ಪರಿಶೀಲನೆಗೆ ಮುಂದಾದ ಪಾಕ್ ಸರ್ಕಾರ
ತಮ್ಮ ಮೆಚ್ಚಿನ ನಟನ ಭಾವನಾತ್ಮ ಪೋಸ್ಟ್ ಕಂಡ ಅಭಿಮಾನಿಗಳು ಸಹ ಬೇಸರಗೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಸಹ ದುಃಖ ಹೊರಹಾಕಿದ್ದಾರೆ. ಇನ್ನು, ನಟ ಅಮಿತಾಬ್ ತಮ್ಮ ನಾಯಿಯ ಹೆಸರನ್ನು ಬಹಿರಂಗಪಡಿಸಿಲ್ಲ.