ETV Bharat / entertainment

'ಗುಡ್‌ಬೈ' ಚಿತ್ರದ ಸೆಟ್‌ನಿಂದ ಹರಿದಾಡುತ್ತಿರುವ ಬಿಗ್​​ಬಿ-ರಶ್ಮಿಕಾ ಫೋಟೋ; 'ಸರ್, ಇವರು ಶ್ರೀವಲ್ಲಿ.. ಪುಷ್ಪ ಅಲ್ಲ' ಎಂದ ನೆಟಿಜನ್ಸ್​ - Rashmika Mandanna upcoming movie

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹೊಸ ವಿಚಾರಗಳನ್ನು ಹಂಚಿಕೊಳ್ಳುವುದು ಬಾಲಿವುಡ್​ ನಟ ಅಮಿತಾಬ್ ಬಚ್ಚನ್ ಅವರ ಹವ್ಯಾಸ. ತಾವು ನಟಿಸುತ್ತಿರುವ ಹೊಸ ಚಿತ್ರ ಗುಡ್​ ಬೈ ಸೆಟ್​​ನಿಂದ ಇತ್ತೀಚೆಗೆ ಫೋಟೋವೊಂದನ್ನು ಹಂಚಿಕೊಂಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಬಿಗ್​ ಬಿ ಜಾಲತಾಣದಲ್ಲಿ ಎಷ್ಟು ಆ್ಯಕ್ಟಿವ್ ಅನ್ನೋದಕ್ಕೆ ಇದೇ ಸಾಕ್ಷಿಯಾಗಿದೆ.

amitabh bachchan shares a pic with rashmika mandanna from goodbye set
ಅಮಿತಾಬ್ ಬಚ್ಚನ್ ಹಂಚಿಕೊಂಡ ಫೋಟೋ
author img

By

Published : Mar 31, 2022, 4:27 PM IST

ಹೈದರಾಬಾದ್: ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ಕನ್ನಡತಿ, ಕಿರಿಕ್​ ಬೆಡಗಿ ರಶ್ಮಿಕಾ ಮಂದಣ್ಣ ಅವರನ್ನು ಒಂದೇ ಪದದಲ್ಲಿ ಹಾಡಿ ಹೊಗಳಿರುವ ನಟ ಅಮಿತಾಬ್ ಬಚ್ಚನ್ ಪೋಸ್ಟ್​ವೊಂದನ್ನು ಹರಿಬಿಟ್ಟಿದ್ದಾರೆ. 'ಗುಡ್‌ಬೈ' ಚಿತ್ರದ ಸೆಟ್‌ಗಳಿಂದ ಕಳೆದ ಬುಧವಾರ ರಾತ್ರಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋ ಹಂಚಿಕೊಂಡಿದ್ದು ಸದ್ಯ ಅಭಿಮಾನಿಗಳು ತರಹೇವಾರಿಯಾಗಿ ಕಾಮೆಂಟ್​ ಮಾಡಲಾರಂಭಿಸಿದ್ದಾರೆ.

amitabh bachchan shares a pic with rashmika mandanna from goodbye set
ಅಮಿತಾಬ್ ಬಚ್ಚನ್ ಹಂಚಿಕೊಂಡ ಫೋಟೋ

ಫೋಟೋ ಜೊತೆಗೆ ಬಿಗ್​ಬಿ ಅಮಿತಾಬ್ ಬಚ್ಚನ್ 'ಪುಷ್ಪ' ಎಂದು ಬರೆದುಕೊಂಡಿದ್ದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಅಲ್ಲದೆ 'ಸರ್, ಇವರು ಶ್ರೀವಲ್ಲಿ.. ಪುಷ್ಪ ಅಲ್ಲ' ಎಂದು ಕಾಮೆಂಟ್​ ಹಾಕಿದ್ದಾರೆ. ಚಿತ್ರದ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಕೂಡ 'ಸರ್, ನಾವು ತಲೆಬಾಗುವುದಿಲ್ಲ' ಎಂದು ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಇವರಿಬ್ಬರ ಕಾಮೆಂಟ್​ ಚಾಟ್​ಗಳು ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ಟಾಲಿವುಡ್‌ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ: ದಿ ರೈಸ್’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿದ ಚಿತ್ರ ಇದಾಗಿದ್ದು, ಹಣ ಗಳಿಕೆಯಲ್ಲಿಯೂ ದಾಖಲೆ ಬರೆಯಿತು. ಪುಷ್ಪರಾಜ್ ಆಗಿ ಕಾಣಿಸಿಕೊಂಡಿದ್ದ ಅಲ್ಲು ಅರ್ಜುನ್ ಅವರ ಬಾಡಿ ಲಾಂಗ್ವೇಜ್ ಮತ್ತು ಮ್ಯಾನರಿಸಂ ಭಾರಿ ಸದ್ದು ಮಾಡಿತ್ತು. ಹಾಗೇ, ಅವರ ‘ತಗ್ಗೆದೆ ಲೇ’ ಡೈಲಾಗ್ ಕೂಡ ಪಾಪ್ಯುಲರ್ ಆಗಿದ್ದು, ಕ್ರಿಕೆಟ್​ ತಾರೆಯರು ಸೇರಿದಂತೆ ಹಲವರು ಇದನ್ನು ಅನುಕರಣೆ ಮಾಡಿ ಪೋಸ್ಟ್​ ಹಾಕಿಕೊಂಡಿದ್ದರು.

ಪುಷ್ಪ ಚಿತ್ರದ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಕರ್ನಾಟಕದ ಕೊಡಗಿನ ಕುವರಿ ರಶ್ಮಿಕಾ ಇದೀಗ ಬಾಲಿವುಡ್‌ನಲ್ಲಿ ಕಾಲೂರಿದ್ದು ಅದೃಷ್ಟದ ಪರೀಕ್ಷೆಗಿಳಿದಿದ್ದಾರೆ. ರಶ್ಮಿಕಾ ಮತ್ತು ಬಿಗ್ ಬಿ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ 'ಮಿಷನ್ ಮಜ್ನು' ಚಿತ್ರದಲ್ಲಿಯೂ ರಶ್ಮಿಕಾ ಕಾಣಿಸಿಕೊಂಡಿದ್ದು, ಈ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. 'ಗುಡ್‌ ಬೈ' ಚಿತ್ರ ಸಹ ಬಿಡುಗಡೆಯಾಗಲು ಸಿದ್ಧಗೊಂಡಿದ್ದು ಯಾವ ಚಿತ್ರ ಮೊದಲು ಬಿಡುಗಡೆಯಾಗಲಿದೆಯೋ ಅದು ರಶ್ಮಿಕಾ ಅವರ ಬಾಲಿವುಡ್​ನ ಚೊಚ್ಚಲ ಸಿನಿಮಾ ಆಗಲಿದೆ.

ಇದನ್ನೂ ಓದಿ: ನೆರೆಹೊರೆಯವರ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು.. ಸಂಕಷ್ಟಕ್ಕೆ ಸಿಲುಕಿದ ನಟ ಸಲ್ಮಾನ್​ ಖಾನ್​!

ವಿಕಾಸ್ ಬಹ್ಲ್ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ ಗುಡ್​ಬೈ ಚಿತ್ರಕ್ಕೆ ಏಕ್ತಾ ಕಪೂರ್ ಹಣ ಹೂಡಿದ್ದಾರೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ರಶ್ಮಿಕಾ ಮಂದಣ್ಣ ಅವರ ಜೊತೆಗೆ ಸಾಹಿಲ್ ಮೆಹ್ತಾ, ಶಿವಿನ್ ನಾರಂಗ್ ಮತ್ತು ಪಾವೈಲ್ ಗುಲಾಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿಯೇ ಚಿತ್ರದ ಶೂಟಿಂಗ್​ ಆರಂಭವಾಗಿದ್ದು, ಇದೀಗ ಭಾಗಶಃ ಮುಗಿಯುವ ಹಂತಕ್ಕೆ ತಲುಪಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.