ಹೈದರಾಬಾದ್: ಬಾಲಿವುಡ್ ಬಾದ್ಶಾ ಅಮಿತಾಬ್ ಬಚ್ಚನ್ ತಾವು ನಡೆಸಿಕೊಡುವ ಜನಪ್ರಿಯ ಶೋ 'ಕೌನ್ ಬನೇಗಾ ಕರೋಡ್ಪತಿಯಲ್ಲಿ ತಮ್ಮ ವಿವಾಹದ ಬಗ್ಗೆ ಮಾತನಾಡಿದ್ದು, ಪತ್ನಿ ಜಯಾ ಬಚ್ಚನ್ ಅವರನ್ನು ಏಕೆ ಮದುವೆಯಾದ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಶೋನಲ್ಲಿ ಸ್ಪರ್ಧಿಯೊಬ್ಬರು ತನ್ನ ಹೋರಾಟ, ಯಶಸ್ಸು ಮತ್ತು ಜೀವನಕ್ಕೆ ಸಂಬಂಧಿಸಿದ ಸಂತೋಷ ಮತ್ತು ದುಃಖಗಳನ್ನು ಹಂಚಿಕೊಂಡಾಗ, ಬಿಗ್ ಬಿ ಕೂಡ ತನ್ನ ಖಾಸಗಿ ಜೀವನದ ನೆನಪುಗಳ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.
- " class="align-text-top noRightClick twitterSection" data="
">
ಜಯಾ ಕೂದಲಿಗೆ ಬಿಗ್ ಬಿ ಆಕರ್ಷಿತ: ಪ್ರಿಯಾಂಕಾ ಮಹರ್ಷಿ ಎಂಬ ಸ್ಪರ್ಧಿ ಹಾಟ್‌ಸೀಟ್‌ನಲ್ಲಿ ಕುಳಿತಿದ್ದರು. ಅವರ ಕೂದಲನ್ನು ನೋಡಿದ ಬಿಗ್ ಬಿ ತಮ್ಮ ಹಿಂದಿನ ದಿನಗಳನ್ನು ಮೆಲಕು ಹಾಕಿದ್ದಾರೆ. ನನ್ನ ಹೆಂಡತಿಯ ಕೂದಲು ತುಂಬಾ ಉದ್ದವಾಗಿದೆ. ಆಕೆಯ ಕೇಶರಾಶಿಗೆ ನಾನು ಮನಸೋತಿದ್ದೆ. ಈ ಕಾರಣಕ್ಕಾಗಿ ನಾವಿಬ್ಬರು ಮದುವೆಯಾದೆವು ಎಂದು ಬಹಿರಂಗಪಡಿಸಿದ್ದಾರೆ. ಇದನ್ನು ಕೇಳಿದ ಪ್ರೇಕ್ಷಕರು ಖುಷಿಪಟ್ಟು ಚಪ್ಪಾಳೆ ತಟ್ಟಿದ್ದಾರೆ.
ಬಿಗ್ ಬಿ- ಜಯಾ ಜೋಡಿ: ಬಿಗ್ ಬಿ ಮತ್ತು ಜಯಾ ಅವರು ಮೊದಲ ಬಾರಿಗೆ 'ಗುಡ್ಡಿ' (1971) ಚಿತ್ರದ ಸಮಯದಲ್ಲಿ ಭೇಟಿಯಾದರು. ಶೈ ಚಿತ್ರವನ್ನು ಹೃಷಿಕೇಶ್ ಮುಖರ್ಜಿ ನಿರ್ಮಿಸಿದ್ದಾರೆ. 1970 ರಲ್ಲಿ ಈ ತಾರಾ ಜೋಡಿ 'ಬನ್ಸಿ ಔರ್ ಬಿರ್ಜು' ಚಿತ್ರಕ್ಕಾಗಿ ಒಟ್ಟಿಗೆ ಕೆಲಸ ಮಾಡಿದರು. ಇದಾದ ನಂತರ ಈ ಜೋಡಿ 'ಜಂಜೀರ್', 'ಚುಪ್ಕೆ ಚುಪ್ಕೆ' ಮತ್ತು 'ಅಭಿಮಾನ' ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.
ಓದಿ: ನಮ್ಮ ಚಿಕ್ಕ ಸ್ನೇಹಿತರು, ಹೇಳದೇ ಹೊರಟು ಬಿಟ್ಟರು.. ಸಾಕು ನಾಯಿ ನಿಧನಕ್ಕೆ ಬಿಗ್ ಬಿ ಭಾವನಾತ್ಮಕ ಪೋಸ್ಟ್