ETV Bharat / entertainment

'ಅಭಿಮಾನಿಗಳೇ ನನ್ನ ದೇಗುಲ, ಅವರನ್ನು ಭೇಟಿಯಾಗಲು ಬರಿಗಾಲಲ್ಲಿ ಹೋಗುತ್ತೇನೆ': ಅಮಿತಾಭ್ ಬಚ್ಚನ್ - ಅಮಿತಾಭ್ ಬಚ್ಚನ್ ಪೋಸ್ಟ್

ಅಭಿಮಾನಿಗಳನ್ನು ಬರಿಗಾಲಿನಲ್ಲಿ ಭೇಟಿಯಾಗುವ ಕುರಿತು ಹಿರಿಯ ನಟ ಅಮಿತಾಭ್ ಬಚ್ಚನ್ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.

Amitabh Bachchan with fans
ಅಭಿಮಾನಿಗಳನ್ನು ಭೇಟಿಯಾದ ಅಮಿತಾಭ್ ಬಚ್ಚನ್
author img

By

Published : Jun 7, 2023, 3:02 PM IST

80ರ ಹರೆಯದ ಹಿರಿಯ ನಟ ಅಮಿತಾಭ್ ಬಚ್ಚನ್ (Amitabh Bachchan) ತಮ್ಮ ಉತ್ಸಾಹ, ಹಾಸ್ಯಪ್ರಜ್ಞೆಯನ್ನು ಎಂದಿಗೂ ಕಡಿಮೆ ಮಾಡಿಕೊಳ್ಳುವುದಿಲ್ಲ. ಯುವಕರೂ ನಾಚುವಂತೆ ಸದಾ ಸಕ್ರಿಯರಾಗಿರುವ ಮೂಲಕ ಹಲವರಿಗೆ ಸ್ಫೂರ್ತಿ ಆಗಿದ್ದಾರೆ. ತಮ್ಮ ಕೆಲಸಗಳನ್ನು ಚುರುಕಾಗಿ ಮಾಡಿ ಶೀಘ್ರವೇ ಪೂರ್ಣಗೊಳಿಸುತ್ತಾರೆ. ಅವರನ್ನು ಈ ಮಟ್ಟಕ್ಕೆ ಬೆಳೆಸಿರುವ ಅಭಿಮಾನಿಗಳಿಗೂ ಸಹ ಸಮಯ ಮೀಸಲಿಡುತ್ತಾರೆ. ಪ್ರತೀ ಭಾನುವಾರ ತಮ್ಮ ಮನೆಯ ಎದುರು ಅಭಿಮಾನಿಗಳನ್ನು ಭೇಟಿ ಆಗುತ್ತಾರೆ ಈ ಜನಪ್ರಿಯ ನಟ.

ಬಿಗ್​ ಬಿ ಪೋಸ್ಟ್: ಮಂಗಳವಾರದಂದು ಬಿಗ್ ಬಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ತಮ್ಮ ಬಂಗಲೆ ಜಲ್ಸಾದ ಹೊರಗೆ ನಿಂತಿದ್ದ ಅಭಿಮಾನಿಗಳಿಗೆ ಸ್ಪಂದಿಸುತ್ತಿರುವ ಚಿತ್ರ ಇದಾಗಿದೆ. ''ಅವರು ನನ್ನನ್ನು ಸ್ವಲ್ಪ ವಿವಾದಾತ್ಮಕ ರೀತಿಯಲ್ಲಿ ಕೇಳುತ್ತಾರೆ, ಅಭಿಮಾನಿಗಳನ್ನು ಬರಿಗಾಲಿನಲ್ಲಿ ಭೇಟಿಯಾಗಲು ಯಾರು ಹೋಗುತ್ತಾರೆ? ಎಂದು. ನಾನು ಅವರಿಗೆ ಈ ರೀತಿಯಾಗಿ ಉತ್ತರಿಸುತ್ತೇನೆ, ನಾನು ಹೋಗುತ್ತೇನೆ. ನೀವು ದೇವಸ್ಥಾನಕ್ಕೆ ಬರಿಗಾಲಲ್ಲಿ ಹೋಗುತ್ತೀರಿ ಅಲ್ಲವೇ. ಭಾನುವಾರದ ನನ್ನ ಹಿತೈಷಿಗಳೇ ನನ್ನ ದೇಗುಲ. ನಿಮಗೆ ಇದರಿಂದ ಸಮಸ್ಯೆಯಾಗಿದೆಯೇ" ಎಂದು ಬರೆದುಕೊಂಡಿದ್ದಾರೆ.

ನಟ ಅಮಿತಾಭ್ ಬಚ್ಚನ್ ಹಂಚಿಕೊಂಡಿರುವ ಈ ಫೋಟೋದಲ್ಲಿ, ಬಿಳಿ ಕುರ್ತಾ ಸೆಟ್‌, ನೀಲಿ ಕೆಂಪು ಜಾಕೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಮಿತಾಭ್ ಜನಸಮೂಹದ ಕಡೆಗೆ ಪ್ರತಿಕ್ರಿಯಿಸುತ್ತಿರುವುದನ್ನು ಈ ಚಿತ್ರದಲ್ಲಿ ಕಾಣಬಹುದು.

"ವಿಶ್ವದ ಅತ್ಯುತ್ತಮ ನಟ"... ಬಾಲಿವುಡ್​ ಬಿಗ್​ ಬಿ ಈ ಚಿತ್ರವನ್ನು ಹಂಚಿಕೊಂಡ ತಕ್ಷಣ, ಅಭಿಮಾನಿಗಳು ಮತ್ತು ಚಿತ್ರರಂಗದವರು ಪ್ರತಿಕ್ರಿಯಿಸಲು ಪ್ರಾರಂಭಿಸಿದರು. ಸಾಮಾಜಿಕ ಮಾಧ್ಯಮ ಬಳಕೆದಾರರೊರ್ವರು ಕಾಮೆಂಟ್​ ಮಾಡಿ, "ಲೆಜೆಂಡ್, ಆಲೋಚನೆಗಳು ಬಹಳ ಸ್ಫೂರ್ತಿದಾಯಕವಾಗಿವೆ" ಎಂದು ಬರೆದಿದ್ದಾರೆ. ಮತ್ತೋರ್ವ ಬಳಕೆದಾರರು ಪ್ರತಿಕ್ರಿಯಿಸಿ, "ಸರ್ ನೀವು ಈ ಮಟ್ಟಕ್ಕೆ ಬರಲು ನಿಮ್ಮ ಈ ಗುಣವೇ ಕಾರಣ, ನನ್ನಿಂದ ನಿಮಗೆ ಬಹಳಷ್ಟು ಪ್ರೀತಿ ಮತ್ತು ಗೌರವ (ಕೆಂಪು ಹೃದಯದ ಎಮೋಜಿಯೊಂದಿಗೆ)" ಎಂದು ಬರೆದಿದ್ದಾರೆ. ಅಭಿಮಾನಿಯೋರ್ವರು ಕಾಮೆಂಟ್ ಮಾಡಿ, "ವಿಶ್ವದ ಅತ್ಯುತ್ತಮ ನಟ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅದ್ಧೂರಿಯಾಗಿ ನಡೆಯಿತು ಆದಿಪುರುಷ್ ಪ್ರೀ ರಿಲೀಸ್​ ಈವೆಂಟ್.. ಫೋಟೋಗಳಲ್ಲಿ​​ ನೋಡಿ

'ಅಭಿಮಾನಿಗಳನ್ನು ಬರಿಗಾಲಿನಲ್ಲಿ ಭೇಟಿಯಾಗಲು ಯಾರು ಹೋಗುತ್ತಾರೆ?' ಎಂಬ ಪ್ರಶ್ನೆಯನ್ನು ಯಾರು ಕೇಳಿದರು ಎಂಬುದಕ್ಕೆ ಯಾವುದೇ ನಿರ್ದಿಷ್ಟ ಹೆಸರನ್ನು ಉಲ್ಲೇಖಿಸದೇ ಅಮಿತಾಭ್​ ಬಚ್ಚನ್​​ ಈ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಹಿರಿಯ ನಟನ ಮಾತುಗಳು ಅವರ ಅಭಿಮಾನಿಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಿವೆ. ನಟನ ಫೋಟೋ ಕ್ಯಾಪ್ಷನ್​ಗೆ ಅಭಿಮಾನಿಗಳ ಮನ ಕರಗಿದೆ.

ಇದನ್ನೂ ಓದಿ: ಚಿರಂಜೀವಿ ಸರ್ಜಾ 3ನೇ ಪುಣ್ಯಸ್ಮರಣೆ...ಕನ್ನಡ ಸಿನಿರಂಗಕ್ಕೆ ನೆನಪುಗಳನ್ನು ಬಿಟ್ಟೋದ ಶಿವಾರ್ಜುನ

ಸಿನಿಮಾ ವಿಚಾರ ಗಮನಿಸುವುದಾದರೆ, ದೀಪಿಕಾ ಪಡುಕೋಣೆ ಮತ್ತು ಪ್ರಭಾಸ್ ಅವರೊಂದಿಗೆ 'ಪ್ರಾಜೆಕ್ಟ್ ಕೆ' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಪ್ರಾಜೆಕ್ಟ್ ಕೆ ಎರಡು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾದ ದ್ವಿಭಾಷಾ (ಹಿಂದಿ ಮತ್ತು ತೆಲುಗು) ಚಲನಚಿತ್ರವಾಗಿದೆ. ರಿಭು ದಾಸ್‌ಗುಪ್ತಾ ಅವರ ಮುಂದಿನ ಚಿತ್ರ 'ಸೆಕ್ಷನ್ 84' ರಲ್ಲಿಯೂ ಬಿಗ್ ಬಿ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.