ETV Bharat / entertainment

ಮಗಳಿಗೆ 50 ಕೋಟಿ ಮೌಲ್ಯದ ಬಂಗಲೆ ಉಡುಗೊರೆಯಾಗಿ ಕೊಟ್ಟ ಬಿಗ್ ಬಿ - prateeksha bungalow

ಜನಪ್ರಿಯ ನಟ ಅಮಿತಾಭ್​​ ಬಚ್ಚನ್ ತಮ್ಮ ಹೆಸರಿನಲ್ಲಿದ್ದ ಬಂಗಲೆಯನ್ನು ಮಗಳ ಹೆಸರಿಗೆ ಮಾಡಿಸಿದ್ದಾರೆ.

Amitabh Bachchan gifted a bungalow worth 50 crores to his daughter Shwetha
ಮಗಳಿಗೆ 50 ಕೋಟಿ ಮೌಲ್ಯದ ಬಂಗಲೆಯನ್ನು ಉಡುಗೊರೆಯಾಗಿ ಕೊಟ್ಟ ಬಿಗ್ ಬಿ ಅಮಿತಾಭ್​​ ಬಚ್ಚನ್
author img

By ETV Bharat Karnataka Team

Published : Nov 25, 2023, 3:28 PM IST

Updated : Nov 25, 2023, 3:41 PM IST

ಭಾರತೀಯ ಚಿತ್ರರಂಗದ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ತಮ್ಮ ಪುತ್ರಿ ಶ್ವೇತಾ ನಂದಾ ಅವರಿಗೆ ಅಪಾರ ಬೆಲೆಬಾಳುವ ಆಸ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ಹೆಸರಿನಲ್ಲಿದ್ದ ಬಂಗಲೆಯನ್ನು ಮಗಳ ಹೆಸರಿಗೆ ಮಾಡಿಸಿದ್ದಾರೆ. ಈಗಾಗಲೇ ನೋಂದಣಿ ಕಾರ್ಯ ಕೂಡ ಮುಗಿದಿದೆ ಎಂಬ ಮಾತು ಕೇಳಿ ಬರುತ್ತಿವೆ. ಅಲ್ಲದೇ ಬಂಗಲೆಯ ಮೌಲ್ಯ ತಿಳಿದ ಅಭಿಮಾನಿಗಳು ಹುಬ್ಬೇರಿಸಿದ್ದಾರೆ

ಪ್ರಸಿದ್ಧ ನಟ ಅಮಿತಾಭ್​ ಬಚ್ಚನ್​​ ಮುಂಬೈನಲ್ಲಿ ಸುಮಾರು ಮೂರು ಮನೆಗಳನ್ನು ಹೊಂದಿದ್ದಾರೆ. ಅದರಲ್ಲಿ ಒಂದು 'ಪ್ರತೀಕ್ಷಾ', ಮತ್ತೊಂದು 'ಜಲ್ಸಾ' ಮತ್ತು ಮೂರನೆಯದು 'ಜನಕ್'. ಜನಪ್ರಿಯ ನಟ ತಮ್ಮ ವೃತ್ತಿ ಜೀವನದ ವಿವಿಧ ಹಂತಗಳಲ್ಲಿ ಈ ನಿವಾಸಗಳಲ್ಲಿ ವಾಸಿಸುಸಿದ್ದಾರೆ. ಪ್ರಸ್ತುತ ತಮ್ಮ ಕುಟುಂಬದೊಂದಿಗೆ 'ಜಲ್ಸಾ' ಹೆಸರಿನ ಬಂಗಲೆಯಲ್ಲಿ ತಂಗಿದ್ದಾರೆ. ಇದೀಗ ಮಗಳು ಶ್ವೇತಾ ನಂದಾ ಅವರಿಗೆ ತಮ್ಮ ಮೆಚ್ಚಿನ 'ಪ್ರತೀಕ್ಷಾ' ಹೆಸರಿನ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಜುಹು ಪ್ರದೇಶದಲ್ಲಿರುವ ವಿಠಲ್ ನಗರ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿರುವ ಈ ಬಂಗಲೆಯ ಮೌಲ್ಯ ಸುಮಾರು 50.63 ಕೋಟಿ ರೂಪಾಯಿ ಎಂದು ವರದಿಯಾಗಿದೆ. ನವೆಂಬರ್ 8 ರಂದು ಅಮಿತಾಭ್ ಎರಡು ಪ್ರತ್ಯೇಕ ಗಿಫ್ಟ್ ಡೀಡ್​​ಗಳನ್ನು ಮಾಡಿಸಿದ್ದರು. ಅದರ ಭಾಗವಾಗಿ, 'ಪ್ರತೀಕ್ಷಾ' ಬಂಗಲೆಯನ್ನು ಶ್ವೇತಾ ನಂದಾ ಅವರ ಹೆಸರಿಗೆ ಬರೆಸಲಾಗಿತ್ತು. ಈ ನೋಂದಣಿಗೆ 50.65 ಲಕ್ಷ ರೂ.ಗಳನ್ನು ಸ್ಟ್ಯಾಂಪ್​ ಡ್ಯೂಟಿ ಶುಲ್ಕವಾಗಿ ಪಾವತಿಸಲಾಗಿದೆ.

ಇದನ್ನೂ ಓದಿ: 7 ಭಾಷೆಗಳಲ್ಲಿ 'ಕಾಂತಾರ' ದರ್ಶನ: 100 ಕೋಟಿ ಬಜೆಟ್​ ಸಿನಿಮಾದ ಫಸ್ಟ್ ಲುಕ್​ ರಿಲೀಸ್​ಗೆ ಕಾತರ

ಶ್ವೇತಾ ನಂದಾ ಬರಹಗಾರರಾಗಿ, ಉದ್ಯಮಿಯಾಗಿ ಪರಿಚಿತರು. ಪ್ಯಾರಡೈಸ್ ಟವರ್ಸ್ ಎಂಬ ಕಾದಂಬರಿಯನ್ನು ಅವರು ಬರೆದಿದ್ದಾರೆ. ಬಿಗ್​ ಬಿ ಪುತ್ರಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ನವ್ಯಾ ನವೇಲಿ ನಂದಾ ಸಿನಿಮಾ ಇಂಡಸ್ಟ್ರಿ ಪ್ರವೇಶಿಸಲು ಎದುರು ನೋಡುತ್ತಿದ್ದಾರೆ. ಮತ್ತೊಂದೆಡೆ, ಪುತ್ರ ಅಗಸ್ತ್ಯ ನಂದಾ ಅವರ ಚೊಚ್ಚಲ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ದಿ ಆರ್ಚೀಸ್‌ ಸಿನಿಮಾ ಡಿಸೆಂಬರ್ 7 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯಲಾಗಲಿದೆ. ಶಾರುಖ್​ ಪುತ್ರಿ ಸುಹಾನಾ ಖಾನ್​ ಜೊತೆ ಸ್ಕ್ರೀನ್​​ ಶೇರ್ ಮಾಡಿದ್ದಾರೆ.

ಇದನ್ನೂ ಓದಿ: ಮಿನುಗುವ ಸೀರೆಯಲ್ಲಿ ಶ್ರೀಯಾ ಶರಣ್​: ಫ್ಯಾನ್ಸ್ ಹೃದಯ 'ಕಬ್ಜ' ಮಾಡಿದ ಫೋಟೋಗಳಿವು

ಇನ್ನೂ ಅಮಿತಾಭ್ ಬಚ್ಚನ್ 81ರ ಹರೆಯದಲ್ಲೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಬಹುನಿರೀಕ್ಷಿತ, ಬಿಗ್​ ಬಜೆಟ್​ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸೋ ಮುಖೇನ ನಟನಾ ವೃತ್ತಿಜೀವನ ಮುಂದುವರಿಸಿದ್ದಾರೆ. ಇತ್ತೀಚೆಗಷ್ಟೇ ಅವರು ಬಾಲಿವುಡ್‌ನ ಗಣ್​ಪತ್ ಸಿನಿಮಾದಲ್ಲಿ ಕಾಣಿಸಿಕೊಂಡರು. ಮುಂದಿನ ದಿನಗಳಲ್ಲಿ, ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಮುಖ್ಯಭೂಮಿಕೆಯ 'ಕಲ್ಕಿ 2898 ಎಡಿ' ಮತ್ತು ರಜನಿಕಾಂತ್ ಅವರ 'ತಲೈವರ್ 170' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Last Updated : Nov 25, 2023, 3:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.