ETV Bharat / entertainment

'ಇದು ನಿಜಕ್ಕೂ ಕ್ರೇಜಿ ಅಲ್ವಾ!'.. ಮದುವೆಯಾಗಿ 9 ವರ್ಷ ಆಯ್ತು; ಈಗ ಫೋಟೋ ಶೇರ್​ ಮಾಡ್ತಾರಂತೆ ರಾಣಿ ಮುಖರ್ಜಿ - ಈಟಿವಿ ಭಾರತ ಕನ್ನಡ

Rani Mukerji wedding pictures coming soon: ಇತ್ತೀಚೆಗಿನ ಸಂದರ್ಶನವೊಂದರಲ್ಲಿ ನಟಿ ರಾಣಿ ಮುಖರ್ಜಿ ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಳ್ಳುವ ಬಯಕೆ ವ್ಯಕ್ತಪಡಿಸಿದ್ದಾರೆ.

Rani Mukerji
ರಾಣಿ ಮುಖರ್ಜಿ
author img

By ETV Bharat Karnataka Team

Published : Aug 29, 2023, 1:20 PM IST

ಬಾಲಿವುಡ್​ ನಟಿ ರಾಣಿ ಮುಖರ್ಜಿ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. ಎರಡೂವರೆ ದಶಕಗಳಿಂದ ತಮ್ಮ ವೃತ್ತಿಜೀವನದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ. ಉತ್ತಮ ಸಿನಿಮಾಗಳನ್ನು ನೀಡುತ್ತಾ ಅಭಿಮಾನಿಗಳ ಆರಾಧ್ಯ ನಟರಲ್ಲಿ ಒಬ್ಬರಾಗಿದ್ದಾರೆ. ಕುಚ್​ ಕುಚ್​ ಹೋತಾ ಹೈ, ವೀರ್​ ಝಾರಾ, ಬ್ಲ್ಯಾಕ್​ ಮತ್ತು ಮರ್ದಾನಿಯಂತಹ ಸೂಪರ್​ ಹಿಟ್​ ಚಿತ್ರಗಳನ್ನು ನೀಡಿ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದಾರೆ. ಇವರ ಇತ್ತೀಚಿಗಿನ ಮಿಸಸ್​ ಚಟರ್ಜಿ vs ನಾರ್ವೆ ಚಿತ್ರವು ನಿರೀಕ್ಷೆಗೆ ಮೀರಿದ ಯಶಸ್ಸನ್ನು ಕಂಡಿದೆ. ಉತ್ತಮ ವಿಮರ್ಶೆ ಪಡೆದುಕೊಂಡಿದೆ.

ಆದರೆ, ರಾಣಿ ಮುಖರ್ಜಿ ತಮ್ಮ ವೈಯಕ್ತಿಕ ವಿಚಾರಕ್ಕೆ ಬಂದರೆ ಖಾಸಗಿ ವ್ಯಕ್ತಿ. ವೈಯಕ್ತಿಕ ಜೀವನದ ಕುರಿತು ಅವರು ಮಾತನಾಡುವುದು ಬಹಳ ವಿರಳ. ಅವರು ಸಿನಿಮಾಗಳ ಬಗ್ಗೆ ಎಷ್ಟು ಮಾತನಾಡುತ್ತಾರೋ, ಅದೇ ಪರ್ಸನಲ್​ ವಿಷಯಗಳಿಗೆ ಬಂದಾಗ ಉತ್ತರಿಸಲು ನಿರಾಕರಿಸುತ್ತಾರೆ. ಆದರೆ, ಇತ್ತೀಚಿನ ಸಂದರ್ಶನವೊಂದರಲ್ಲಿ ಆದಿತ್ಯಾ ಚೋಪ್ರಾ ಜೊತೆಗಿನ ಮದುವೆ ಬಗ್ಗೆ ಹಾಗೂ ಆ ವಿಶೇಷ ದಿನದಂದು ಧರಿಸಿದ್ದ ಉಡುಪಿನ ಬಗ್ಗೆ ಮಾತನಾಡಿದ್ದಾರೆ. ಕೆಲವು ಆಸಕ್ತಿದಾಯಕ ವಿಚಾರವನ್ನು ಹಂಚಿಕೊಂಡಿದ್ದಾರೆ.

ರಾಣಿ ಮುಖರ್ಜಿ ಅವರು ಚಲನಚಿತ್ರ ನಿರ್ಮಾಪಕ ಆದಿತ್ಯ ಚೋಪ್ರಾ ಅವರನ್ನು 2014 ರಲ್ಲಿ ಮದುವೆಯಾದರು. ಇಟಲಿಯಲ್ಲಿ ವಿವಾಹ ಸಮಾರಂಭ ಜರುಗಿತ್ತು. ಆದಿತ್ಯ ಚೋಪ್ರಾ ಅವರ ಜೊತೆಗಿನ ಮದುವೆ ನಂತರ ಆದಿತ್ಯ ಚೋಪ್ರಾ ಸೋಷಿಯಲ್​ ಮೀಡಿಯಾದಿಂದ ಕೊಂಚ ದೂರವೇ ಉಳಿದಿದ್ದರು. ಆದ್ದರಿಂದ ಅವರ ಮದುವೆ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಎಂದಿಗೂ ಕಂಡು ಬಂದಿರಲಿಲ್ಲ. ನಟಿ ಆಗಲಿ, ಆದಿತ್ಯ ಚೋಪ್ರಾ ಆಗಲಿ ಹಂಚಿಕೊಂಡಿರಲಿಲ್ಲ.

ಇದನ್ನೂ ಓದಿ: ಗರ್ಭಪಾತದ ಬಗ್ಗೆ ಬಹಿರಂಗಪಡಿಸಿದ ರಾಣಿ ಮುಖರ್ಜಿ.. 5 ತಿಂಗಳು ಗರ್ಭದಲ್ಲಿದ್ದ ಶಿಶು ಇನ್ನಿಲ್ಲವೆಂದು ತಿಳಿದ ನಟಿಯ ಪರಿಸ್ಥಿತಿ ಹೇಗಿತ್ತು?

ಆದರೆ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ನಟಿ ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. 9 ವರ್ಷದ ನಂತರ ಇಂತಹದ್ದೊಂದು ಆಸೆಯನ್ನು ಬಹಿರಂಗಪಡಿಸಿದ್ದಾರೆ. "ಶೀಘ್ರದಲ್ಲೇ ನನ್ನ ಮದುವೆಯ ಫೋಟೋಗಳನ್ನು ಹಂಚಿಕೊಳ್ಳಲಿದ್ದೇನೆ. ನಾನು ಮೊದಲ ಬಾರಿಗೆ ನನ್ನ ವಿಶೇಷ ದಿನದ ಚಿತ್ರಗಳನ್ನು ಶೇರ್​ ಮಾಡಿದ್ದೇನೆ. ಇದು ನಿಜಕ್ಕೂ ಕ್ರೇಜಿ ಅಲ್ವಾ" ಎಂದಿದ್ದಾರೆ. ಅಂತೂ ಕೊನೆಗೂ ತಮ್ಮ ಮದುವೆಯ ಫೋಟೋವನ್ನು ಹಂಚಿಕೊಳ್ಳಲು ನಟಿ ನಿರ್ಧರಿಸಿದ್ದು, ಅಭಿಮಾನಿಗಳು ಕಾತರರಾಗಿದ್ದಾರೆ.

ಮತ್ತೊಂದು ಸಂದರ್ಶನದಲ್ಲಿ ರಾಣಿ ಮುಖರ್ಜಿ ತಮ್ಮ ವೃತ್ತಿಪರ ಜೀವನದ ಕುರಿತು ಮಾತನಾಡಿದ್ದಾರೆ. ಮರ್ದಾನಿ 3 ಬಗ್ಗೆ ಬಹಿರಂಗಪಡಿಸಿದ್ದಾರೆ. ಮರ್ದಾನಿ 3 ಸಾಧ್ಯವೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೌದು. ನಿಜವಾಗಿಯೂ ನಾನು ಶಿವಾನಿ ಶಿವಾಜಿ ರಾಯ್​ ಆಗಿ ಹಿಂತಿರುಗಲು ಬಯಸುತ್ತೇನೆ. ಅವರ ಶೂಗಳನ್ನು ಮತ್ತೊಮ್ಮೆ ಧರಿಸಲು ಇಷ್ಟಪಡುತ್ತೇನೆ. ಆ ಪಾತ್ರಕ್ಕೆ ಪುನಃ ಮರಳುವುದು ನಿಜಕ್ಕೂ ಕುತೂಹಲವನ್ನುಂಟು ಮಾಡುತ್ತದೆ. ನಿಜವಾಗಿಯೂ ಇದೊಂದು ಸಂತಸದ ವಿಚಾರ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ದೊಡ್ಡ ಮಟ್ಟದಲ್ಲಿ ಅನಾವರಣಗೊಳ್ಳಲಿದೆ ಬಹುನಿರೀಕ್ಷಿತ 'ಜವಾನ್'​ ಟ್ರೇಲರ್​: ಎಲ್ಲಿ? ಯಾವಾಗ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.