ಖ್ಯಾತ ಚಲನಚಿತ್ರ ನಟ ನಾಸಿರುದ್ದೀನ್ ಶಾ ತಮ್ಮ ಮಗಳು ಹಿಬಾ ಶಾಗೆ ಜನನ ಪ್ರಮಾಣ ಪತ್ರ ಮಾಡಿಸಲು ಅರ್ಜಿ ಸಲ್ಲಿಸಿದ್ದಾರೆ. ಆದರೆ 53 ವರ್ಷಗಳ ನಂತರ ಈ ಅರ್ಜಿ ಸಲ್ಲಿಸಿರುವುದು ಚರ್ಚೆಗೆ ಕಾರಣವಾಗಿದೆ. ಪರಿಚಿತ ಅಧಿಕಾರಿಯ ಮೂಲಕ ಮುಂಬೈನಿಂದ ಮಹಾನಗರ ಪಾಲಿಕೆಗೆ ಅರ್ಜಿ ಕಳುಹಿಸಲಾಗಿದೆ. ಆದರೆ, ಈ ಅರ್ಜಿ ಕುರಿತು ಗೌಪ್ಯವಾಗಿ ತನಿಖೆಗೆ ಸಿದ್ಧತೆ ನಡೆದಿದೆ. ಆದರೆ ಇದು ಸದ್ಯ ಸೋಷಿಯಲ್ ಮೀಡಿಯದಲ್ಲೂ ಸಖತ್ ಸುದ್ದಿಯಾಗಿದೆ.
ನಾಸಿರುದ್ದೀನ್ ಶಾ ಅವರು 1967 ರಿಂದ 70 ರವರೆಗೆ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದರು. ನಾಸಿರುದ್ದೀನ್ ಶಾ ಮೂಲತಃ ಬಾರಾಬಂಕಿಯವರು. 2016 ರಲ್ಲಿ ಅವರ ಹಿರಿಯ ಸಹೋದರ ಜಮೀರುದ್ದೀನ್ ಷಾ ಅವರು AMU ನ ಉಪಕುಲಪತಿಯಾಗಿದ್ದರು. ಇದೇ ಸಮಯದಲ್ಲಿ ನಟ ರತ್ನ ಪಾಠಕ್ ಶಾ ಅವರನ್ನು ವಿವಾಹವಾದರು. ಹಿಬಾ ಶಾ ಮೊದಲ ಪತ್ನಿಯ ಮಗುವಾಗಿದ್ದು, ಎರಡನೇ ಪತ್ನಿಗೂ ಇಬ್ಬರು ಮಕ್ಕಳಿದ್ದಾರೆ.
ಈವರೆಗಿನ ಎಲ್ಲಾ ದಾಖಲೆಗಳಲ್ಲೂ ರತ್ನ ಪಾಠಕ್ ಹೆಸರನ್ನು ಹಿಬಾಳ ತಾಯಿ ಎಂದು ನಮೂದಿಸಲಾಗಿದೆ. ಆದರೆ, ಈ ವಯಸ್ಸಿನಲ್ಲಿ ಹಿಬಾ ಶಾ ಜನನ ಪ್ರಮಾಣ ಪತ್ರದ ಅವಶ್ಯಕತೆ ಏನಿತ್ತು ಎಂಬ ಪ್ರಶ್ನೆಯನ್ನು ಜನ ಎತ್ತುತ್ತಿದ್ದಾರೆ. ಸಿನಿಮಾ ನಟರೊಬ್ಬರ ಮಗಳಿಗೆ ಸಂಬಂಧಿಸಿದ ವಿಚಾರವಾದ್ದರಿಂದ ಇದು ಸದ್ಯ ಸುದ್ದಿಯಾಗಿದೆ. ಈ ಬಗ್ಗೆ ನಗರಸಭೆಯಲ್ಲೂ ಗೊಂದಲವಿದೆ.
ಇದನ್ನೂ ಓದಿ: 'ಜನರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ': ಆದಿಪುರುಷ್ ಡೈಲಾಗ್ ರೈಟರ್
ಜನನ ಪ್ರಮಾಣ ಪತ್ರ ಮಾಡುವಂತೆ ನಗರಸಭೆಗೆ ಅರ್ಜಿ ಸಲ್ಲಿಸಲಾಗಿದೆ. ಇದರಲ್ಲಿ, ಹಿಬಾ ಶಾ ಅವರ ಜನನವನ್ನು ಆಗಸ್ಟ್ 20, 1970 ರಂದು ಅಲಿಘರ್‌ನಲ್ಲಿರುವ ಟಿಕಾರಾಂ ನರ್ಸಿಂಗ್ ಹೋಮ್‌ನಲ್ಲಿ ತೋರಿಸಲಾಗಿದೆ. ಅರ್ಜಿ ನಮೂನೆಯಲ್ಲಿ ಮುಂಬೈನ ವಿಳಾಸವನ್ನು ಬರೆಯಲಾಗಿದೆ. ನಾಸಿರುದ್ದೀನ್ ಶಾ ಅವರ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಸಹ ಅರ್ಜಿಯಲ್ಲಿ ಲಗತ್ತಿಸಲಾಗಿದೆ. ಇದನ್ನು ತನಿಖೆ ನಡೆಸಲು ಎಸ್‌ಡಿಎಂ ಮಟ್ಟದಿಂದ ಆದೇಶ ನೀಡಲಾಗಿದೆ. ಈ ಅರ್ಜಿ ಸರಿಯೋ ತಪ್ಪೋ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಲಿದೆ.
ತನಿಖೆಯ ನಂತರ ನಿರ್ಧಾರ: ಈ ಬಗ್ಗೆ ಮಾತನಾಡಿರುವ ಹೆಚ್ಚುವರಿ ಪೌರಾಯುಕ್ತ ರಾಕೇಶ್ ಯಾದವ್, "ನಿಯಮಗಳ ಪ್ರಕಾರ, ಜನನದ ಒಂದು ವರ್ಷದ ನಂತರ ಯಾವುದೇ ಜನನ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದರೆ, ಅದನ್ನು ತನಿಖೆಗಾಗಿ ಸಂಬಂಧಿಸಿದ ತಹಸಿಲ್‌ಗೆ ಕಳುಹಿಸಲಾಗುತ್ತದೆ. ಅದರಂತೆ ಈ ಅರ್ಜಿಯನ್ನು ತನಿಖೆಗೆ ಕಳುಹಿಸಲಾಗಿದೆ. ಎಸ್‌ಡಿಎಂ ಮಟ್ಟದಿಂದ ತನಿಖೆಯ ನಂತರ ಸಿಗುವ ವರದಿಯ ಪ್ರಕಾರ, ಪ್ರಮಾಣಪತ್ರದ ನಿಯಮಗಳ ಪ್ರಕಾರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 17.50 ಕೋಟಿ ರೂ. ಬೆಲೆಬಾಳುವ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ ಈ ನಟ.. ಏನೇನೆಲ್ಲ ಇದೇ ಗೊತ್ತೇ?
ಬಾಲಿವುಡ್ನ ಪ್ರತಿಭಾವಂತ ನಟ ಅಂತಲೇ ಕರೆಸಿಕೊಳ್ಳುವ ಷಾ, ‘ಮೀ ರಕ್ಸಮ್’ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಅಲ್ಲದೇ ಅಮೆಜಾನ್ ಪ್ರೈಮ್ನ ವೆಬ್ ಸರಣಿ ‘ಬ್ಯಾಂಡಿಶ್ ಬ್ಯಾಂಡಿಟ್ಸ್’ನಲ್ಲೂ ಅತ್ಯುತ್ತಮ ನಟನೆ ಮಾಡಿದ್ದರು. ಕೊನೆಯದಾಗಿ ‘ಮಾರ್ರಿಚ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.