ETV Bharat / entertainment

ಲವ್ಲಿ ಚಿತ್ರ​ ಹಂಚಿಕೊಂಡು ಕರಣ್​ ಜೋಹರ್​ ಬರ್ತ್​ಡೇ ವಿಶ್​ ಮಾಡಿದ ನಟಿ ಆಲಿಯಾ ! - ಕರಣ್​ ಜೋಹರ್ 50 ನೇ ಹುಟ್ಟುಹಬ್ಬ

ಕರಣ್ ಅವರನ್ನು ತನ್ನ ತಂದೆಯಂತೆ ಪರಿಗಣಿಸುವ ಆಲಿಯಾ ಭಟ್​, ಅವರೊಂದಿಗಿನ ಮದುವೆಯ ಹೃದಯಸ್ಪರ್ಶಿ ಫೋಟೋಗಳನ್ನು ಇನ್​​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದ ಮುಂದೆ "ನನಗೆ ತಿಳಿದಿರುವ ಅತ್ಯಂತ ಉದಾರ ಆತ್ಮಕ್ಕೆ! .. ನನ್ನ ತಂದೆ .. ನನ್ನ ಆತ್ಮೀಯ ಸ್ನೇಹಿತ .. ಮತ್ತು ನನ್ನ ಮಾರ್ಗದರ್ಶಕನಿಗೆ 50 ನೇ ಹುಟ್ಟುಹಬ್ಬದ ಶುಭಾಶಯಗಳು'' ಎಂದು ಬರೆದುಕೊಂಡಿದ್ದಾರೆ.

ಲವ್ಲಿ ಪಿಕ್ಸ್​ ಹಂಚಿಕೊಂಡು ಕರಣ್​ ಜೋಹರ್​ ಬರ್ತ್​ಡೆಗೆ ವಿಶ್​ ಮಾಡಿದ ನಟಿ ಆಲಿಯಾ

author img

By

Published : May 25, 2022, 4:03 PM IST

ಸಿನಿಮಾ ನಿರ್ಮಾಣ ಹಾಗೂ ನಿರ್ದೇಶನದ ಮೂಲಕ ಪ್ರಸಿದ್ಧರಾಗಿರುವ ಕರಣ್ ಜೋಹರ್ ಇದೀಗ 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇವರಿಗೆ ಬಾಲಿವುಡ್​ ಸೇರಿ ದಕ್ಷಿಣ ಭಾರತದ ಸ್ಟಾರ್ ನಟ, ನಟಿಯರೂ ಶುಭಾಶಯಗಳನ್ನು ಕೋರಿದ್ದಾರೆ. ಈ ಸಂತಸದ ನಡುವೆ ನಟಿ ಆಲಿಯಾ ಭಟ್ ಹೃದಯಸ್ಪರ್ಶಿ ಹಾರೈಕೆಯೊಂದನ್ನು ಬರೆದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕರಣ್ ಅವರನ್ನು ತಮ್ಮ ತಂದೆಯಂತೆ ಪರಿಗಣಿಸುವ ಆಲಿಯಾ ರಣಬೀರ್ ಕಪೂರ್, ಅವರೊಂದಿಗಿನ ಮದುವೆಯ ಹೃದಯಸ್ಪರ್ಶಿ ಫೋಟೋಗಳನ್ನು ಇನ್​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದ ಮುಂದೆ "ನನಗೆ ತಿಳಿದಿರುವ ಅತ್ಯಂತ ಉದಾರ ಆತ್ಮಕ್ಕೆ! .. ನನ್ನ ತಂದೆ .. ನನ್ನ ಆತ್ಮೀಯ ಸ್ನೇಹಿತ .. ಮತ್ತು ನನ್ನ ಮಾರ್ಗದರ್ಶಕನಿಗೆ 50 ನೇ ಹುಟ್ಟುಹಬ್ಬದ ಶುಭಾಶಯಗಳು'' ಎಂದು ಬರೆದುಕೊಂಡಿದ್ದಾರೆ.

ಕರಣ್ ಅವರ ಜೀವನದಲ್ಲಿ 'ಪ್ರೀತಿ ಶಾಂತಿ ಮತ್ತು ಸಂತೋಷ' ಸಿಗಲಿ ಎಂದು ಹಾರೈಸಿರುವ ಅವರು, ನನ್ನ ಪ್ರೀತಿಯನ್ನು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಸೀಮಿತಗೊಳಿಸುವುದಿಲ್ಲ ಎಂದು ತಿಳಿಸಿದ್ದಾರೆ. ಮೊದಲ ಫೋಟೋದಲ್ಲಿ ಕರಣ್ ತನ್ನ ಮೆಹೆಂದಿ ಸಮಾರಂಭದಲ್ಲಿ ಆಲಿಯಾಳ ಕೆನ್ನೆಗೆ ಚುಂಬಿಸುತ್ತಿರುವುದನ್ನು ಕಾಣಬಹುದು.

ಅಭಿಮಾನಿಗಳಿಂದಲೂ ಶುಭಾಶಯಗಳ ಮಹಾಪೂರ: ಮುಂದಿನದು ಆಲಿಯಾ ಮತ್ತು ರಣಬೀರ್ ಅವರ ಮದುವೆಯ ನಂತರದ ಬ್ಯಾಷ್‌ನ ಕ್ಯಾಂಡಿಡ್ ಚಿತ್ರ. ಕೊನೆಯ ಫೋಟೋ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ ಸೆಟ್‌ಗಳು. ಆಲಿಯಾ ಫೋಟೋಗಳನ್ನು ಹಂಚಿಕೊಂಡ ತಕ್ಷಣ, ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ ಕರಣ್‌ಗೆ ವಿಶ್ ಮಾಡಲು ಪ್ರಾರಂಭಿಸಿದ್ದಾರೆ. ಅಭಿಮಾನಿಯೊಬ್ಬರು "ಹುಟ್ಟುಹಬ್ಬದ ಶುಭಾಶಯಗಳು" ಎಂದು ಬರೆದಿದ್ದಾರೆ. ಮತ್ತೊಬ್ಬ ಅಭಿಮಾನಿ "ಸುಂದರ ಚಿತ್ರಗಳು. ಜನ್ಮದಿನದ ಶುಭಾಶಯಗಳು" ಎಂದು ಬರೆದಿದ್ದಾರೆ.

ಕರಣ್ ಜೋಹರ್ 50 ನೇ ಹುಟ್ಟುಹಬ್ಬವನ್ನು ಬಾಲಿವುಡ್ ಸೆಲೆಬ್ರಿಟಿಗಳ ಜೊತೆಗೆ ಆಚರಿಸಿಕೊಳ್ಳಲಿದ್ದಾರೆ. ಯಶ್ ರಾಜ್ ಸ್ಟುಡಿಯೋದಲ್ಲಿ ಹುಟ್ಟುಹಬ್ಬದ ಪಾರ್ಟಿ ಅದ್ದೂರಿಯಾಗಿ ನಡೆಯಲಿದೆ. ನಟ ಶಾರುಖ್ ಖಾನ್, ಕರೀನಾ ಕಪೂರ್ ಖಾನ್ ರಿಂದ ರಣವೀರ್ ಸಿಂಗ್ ವರೆಗೆ ಎಲ್ಲರೂ ಕರಣ್ ಅವರ ವಿಶೇಷ ದಿನದಂದು ಪಾರ್ಟಿ ಮಾಡಲು ಹಾಜರಾಗುತ್ತಾರೆ. 2022 ರ ಕೇನ್ಸ್‌ನಲ್ಲಿರುವ ದೀಪಿಕಾ ಪಡುಕೋಣೆ ಅವರು ಹುಟ್ಟುಹಬ್ಬದ ಸಂಭ್ರಮದ ಭಾಗವಾಗಲಿದ್ದಾರೆ.

ಬರ್ತ್​ಡೇಗೆ ದಕ್ಷಿಣ ಭಾರತದ ಸ್ಟಾರ್ ನಟರುಗಳಾದ ವಿಜಯ ದೇವರಕೊಂಡ, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಟ ಯಶ್​ ಅವರಿಗೂ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ.

ಇದನ್ನು ಓದಿ: ಐಪಿಎಲ್​​ ಕೊನೆ ಪಂದ್ಯದ ವಿರಾಮದ ವೇಳೆ ಲಾಲ್‌ ಸಿಂಗ್‌ ಚಡ್ಡಾ ಟ್ರೈಲರ್‌ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.