ETV Bharat / entertainment

ಜಿಗ್ರಾ ಶೂಟಿಂಗ್​ ಶುರು: ನಟನೆ ಜೊತೆ ನಿರ್ಮಾಣ, ಆಲಿಯಾ ಭಟ್​ಗೆ ಶುಭ ಹಾರೈಸಿದ ಅಭಿಮಾನಿಗಳು - ಜಿಗ್ರಾ ಲೇಟೆಸ್ಟ್ ನ್ಯೂಸ್

ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ಮುಂದಿನ ಜಿಗ್ರಾ ಶೂಟಿಂಗ್​ ಆರಂಭಿಸಿದ್ದಾರೆ.

Jigra shooting begins
ಆಲಿಯಾ ಭಟ್ ನಟನೆಯ ಜಿಗ್ರಾ ಶೂಟಿಂಗ್​ ಆರಂಭ
author img

By ETV Bharat Karnataka Team

Published : Oct 5, 2023, 3:50 PM IST

ಬಾಲಿವುಡ್ ನಟಿ ಆಲಿಯಾ ಭಟ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಜಿಗ್ರಾ'. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದ ಯಶಸ್ಸಿನ ಬಳಿಕ ಮಾಡುತ್ತಿರುವ ಚಿತ್ರವಿದು. ಆಲಿಯಾ ಈ ಪ್ರಾಜೆಕ್ಟ್​​ನಲ್ಲಿ ನಟನೆ ಜೊತೆ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಬುಧವಾರ 'ಜಿಗ್ರಾ' ಚಿತ್ರೀಕರಣ ಪ್ರಾರಂಭಿಸಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ವಾಸನ್ ಬಾಲಾ ನಿರ್ದೇಶನದ 'ಜಿಗ್ರಾ'ದಲ್ಲಿ, ತನ್ನ ಸಹೋದರನನ್ನು ರಕ್ಷಿಸುವ ಸಲುವಾಗಿ ಯಾವುದೇ ಹಂತಕ್ಕೂ ಹೋಗುವ ಸಹೋದರಿ ಪಾತ್ರವನ್ನು ಆಲಿಯಾ ಭಟ್​ ನಿರ್ವಹಿಸಲಿದ್ದಾರೆ.

ಬುಧವಾರ ರಾತ್ರಿ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ನಟಿ ಆಲಿಯಾ ಭಟ್ ಸರಣಿ​ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆಲಿಯಾ ತಮ್ಮ ಸಹೋದರಿ ಶಾಹೀನ್ ಭಟ್ ಜೊತೆಗಿರೋದನ್ನು ಕಾಣಬಹುದು. ಶೂಟಿಂಗ್‌ಗೂ ಮುನ್ನ ಮೇಕಪ್ ಮಾಡಿಸಿಕೊಳ್ಳುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ, ನಿರ್ದೇಶಕ ವಾಸನ್ ಬಾಲಾ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದಾರೆ. ಸಣ್ಣ ಜಿಗ್ರಾ ಬ್ಯಾನರ್ ಅನ್ನು ದಿಟ್ಟಿಸಿ ನೋಡುವ ಫೋಟೋವನ್ನೂ ಆಲಿಯಾ ಶೇರ್​ ಮಾಡಿದ್ದಾರೆ.

ಶೂಟಿಂಗ್​ನ ಮೊದಲ ದಿನದ ಫೋಟೋಗಳನ್ನು ಹಂಚಿಕೊಂಡ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ನಟಿ, "ಚಿತ್ರೀಕರಣ ಆರಂಭಿಸಿದ್ದೇವೆ. ನಮ್ಮ ಜಿಗ್ರಾಗೆ ಜೀವ ಕೊಡುವ ಮೊದಲ ದಿನ. ನಮ್ಮ ಚಿತ್ರವನ್ನು ತೆರೆ ಮೇಲೆ ತರಲಿದ್ದು, ನಮ್ಮೊಂದಿಗಿರಿ. ಮುಂದಿನ ಪ್ರಯಾಣ ಆರಂಭಗೊಂಡಿದೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ಫೈಟರ್‌' ಇಟಲಿ ಶೂಟಿಂಗ್​ ಶೆಡ್ಯೂಲ್​​ ಕಂಪ್ಲೀಟ್​: ಹೃತಿಕ್​, ದೀಪಿಕಾ ಸಿನಿಮಾ ಸೆಟ್​ನ ಫೋಟೋ ವೈರಲ್​

ಆರ್​ಆರ್​ಆರ್ ನಟಿ ಈ ಪೋಸ್ಟ್ ಅನ್ನು ಶೇರ್ ಮಾಡುತ್ತಿದ್ದಂತೆ, ಅಭಿಮಾನಿಗಳು, ನೆಟ್ಟಿಗರು ಮತ್ತು ಸಿನಿಮಾ ಸಹೋದ್ಯೋಗಿಗಳು ಆಲಿಯಾ ಭಟ್ ಅವರನ್ನು ಅಭಿನಂದಿಸಿದ್ದಾರೆ. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಹ ನಟ ರಣ್​​​​ವೀರ್ ಸಿಂಗ್ 'ಲವ್​ ಆ್ಯಂಡ್​​ ಲಕ್​' ಎಂದು ಕಾಮೆಂಟ್​ ಮಾಡಿದ್ದಾರೆ. ನಟಿ ಸೋನಮ್ ಕಪೂರ್ ಕಂಗ್ರಾಜುಲೇಶನ್ಸ್ ಡಾರ್ಲಿಂಗ್​​ ಎಂದು ಪ್ರತಿಕ್ರಿಯಿಸಿದ್ದಾರೆ. ನಿರ್ದೇಶಕಿ ಜೋಯಾ ಅಖ್ತರ್ ಸ್ಮೈಲಿ ಮತ್ತು ಹಾರ್ಟ್ ಎಮೋಜಿ ಮೂಲಕ ಆಲಿಯಾ ಮೇಲೆ ಪ್ರೀತಿ ವ್ಯಕ್ತಪಡಿಸಿದ್ದಾರೆ. ಹೀಗೆ ಚಿತ್ರರಂಗದ ಕೆಲವರು ನಟಿಯ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. ಉಳಿದಂತೆ ಅಭಿಮಾನಿಗಳು ಆಲಿಯಾ ಭಟ್​ ಮೇಲೆ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.

ಇದನ್ನೂ ಓದಿ: ವಿಡಿಯೋ: ಸಲ್ಮಾನ್ ಖಾನ್ ​- ಅರಿಜಿತ್ ಸಿಂಗ್ ಮನಸ್ತಾಪ ಅಂತ್ಯ?; ನಟನ ಮನೆ ಬಳಿ ಕಾಣಿಸಿಕೊಂಡ ಗಾಯಕ!

ಆಲಿಯಾ ತಮ್ಮ ಹೊಸ ಸಿನಿಮಾಗಾಗಿ, ಬಾಲವುಡ್​​ನ ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಜೊತೆ ಕೈಜೋಡಿಸಿದ್ದಾರೆ. ಜಿಗ್ರಾವನ್ನು ಧರ್ಮ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದ್ದು, ಆಲಿಯಾ ಭಟ್ ಸಹ ನಿರ್ಮಾಪಕಿ. ಧರ್ಮ ಪ್ರೊಡಕ್ಷನ್ಸ್ ಮತ್ತು ಆಲಿಯಾರ ಎಟರ್ನಲ್​ ಸನ್​ಶೈನ್​ ಪ್ರೊಡಕ್ಷನ್ಸ್ ನಿರ್ಮಾಣದ ಚಿತ್ರ 2024ರ ಸೆಪ್ಟೆಂಬರ್ 27 ರಂದು ಬಿಡುಗಡೆ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.