ಹೈದರಾಬಾದ್ : ಕಳೆದ ಐದು ದಿನಗಳ ಹಿಂದೆ ಮುಂಬೈನ ಬಾಂದ್ರಾದಲ್ಲಿ ನಡೆದ ಅದ್ಧೂರಿ ಮದುವೆ ಸಮಾರಂಭದಲ್ಲಿ ಬಾಲಿವುಡ್ನ ಪ್ರಣಯ ಪಕ್ಷಿಗಳಾದ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಬೆನ್ನಲ್ಲೇ ಈ ಜೋಡಿ ಹನಿಮೂನ್‌ಗೋಸ್ಕರ ತೆರಳುತ್ತಾರೆಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಇದೀಗ ಆ ನಿರೀಕ್ಷೆ ಹುಸಿಯಾಗಿದೆ.
- " class="align-text-top noRightClick twitterSection" data="
">
ಮದುವೆ ಬೆನ್ನಲ್ಲೇ ನಟಿ ಆಲಿಯಾ ಭಟ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದು, ಖಾಸಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಆಲಿಯಾ ಕಳಿಂಗ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಕರಣ್ ಜೋಹರ್ ಅವರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದ ಚಿತ್ರೀಕರಣ ಆರಂಭಗೊಂಡಿರುವ ಕಾರಣ ಇದರಲ್ಲಿ ಭಾಗಿಯಾಗಿದ್ದು, ಇನ್ನು ರಣಬೀರ್ ಕಪೂರ್ ಹಿಮಾಚಲ ಪ್ರದೇಶದಲ್ಲಿ 'ಅನಿಮಲ್' ಚಿತ್ರದ ಮೊದಲ ಶೆಡ್ಯೂಲ್ ಪ್ರಾರಂಭಿಸಿದ್ದಾರೆ. ಇದಾದ ಬಳಿಕ ಏಪ್ರಿಲ್ 22ರಂದು ಮನಾಲಿಗೆ ತೆರಳಿ ಚಿತ್ರೀಕರಣದಲ್ಲಿ ಅವರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಜೇಮ್ಸ್ ಚಿತ್ರಕ್ಕೆ ಪುನೀತ್ ವಾಯ್ಸ್ : ಶಿವರಾಜ್ ಕುಮಾರ್ ಸಂತಸ
ಆಲಿಯಾ ಮತ್ತು ರಣಬೀರ್ ಜೋಡಿ ಐದು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು. ಕಳೆದ ಏಪ್ರಿಲ್ 14ರಂದು ವಿವಾಹವಾಗಿದ್ದಾರೆ.