ಹೈದರಾಬಾದ್: ಬಾಲಿವುಡ್ ನಟಿ ಆಲಿಯಾ ಭಟ್ ಅವರ ಪತಿ ಹಾಗೂ ನಟ ರಣಬೀರ್ ಕಪೂರ್ ಅಭಿನಯದ ಅನಿಮಲ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಡಿಸೆಂಬರ್ 1 ರಂದು ಬಿಡುಗಡೆಯಾದ ಈ ಚಿತ್ರವು ಈಗಾಗಲೇ ಭಾರತದಲ್ಲಿ 70 ಕೋಟಿ ರೂ. ವಸೂಲಿ ಮಾಡಿದೆ. ಈ ಕುರಿತು ಆಲಿಯಾ ತನ್ನ ಸಾಮಾಜಿಕ ಮಾಧ್ಯಮದಲ್ಲಿ ರಣಬೀರ್ ಅವರ ಒಂದೆರಡು ಫೋಟೋಗಳನ್ನು ಪೋಸ್ಟ್ ಮಾಡಿ ಅಭಿನಂದಿಸಿದ್ದಾರೆ.
ಆಲಿಯಾ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರಣಬೀರ್‌ನ ಎರಡು ಫೋಟೋಗಳನ್ನು ಪೋಸ್ಟ್ ಮಾಡಿ, ಅವರು ಕೇವಲ ನಟ ಮಾತ್ರ ಅಲ್ಲ ನಿಷ್ಠಾವಂತ ತಂದೆ ಮತ್ತು ಪತಿ ಎಂದು ಕೊಂಡಾಡಿದ್ದಾರೆ. ದೆಹಲಿಯಲ್ಲಿ ನಡೆದ ಅನಿಮಲ್ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ರಣಬೀರ್ ಅಭಿಮಾನಿಗಳೊಂದಿಗೆ ಮಾತನಾಡುತ್ತಿರುವುದು ಮತ್ತು ರಣಬೀರ್ ತನ್ನ ಮಡಿಲಲ್ಲಿ ಮಗಳು ರಾಹಾ ಕಪೂರ್ ಅವರನ್ನು ಕೂರಿಸಿಕೊಂಡು ಪುಸ್ತಕ ಓದುತ್ತಿರುವ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
ಕ್ಯಾಪ್ಷನ್ನಲ್ಲಿ, ಆಲಿಯಾ ಕ್ಯಾಮೆರಾದ ಮುಂದೆ ಮತ್ತು ಹೊರಗೆ ರಣಬೀರ್ ಅವರ ಬದ್ಧತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅವರ ತಾಳ್ಮೆ, ಪ್ರೀತಿ ಮತ್ತು ಸಮರ್ಪಣಾ ಭಾವವನ್ನು ತೋರ್ಪಡಿಸಿದ್ದಾರೆ. ರಣಬೀರ್ ತಮ್ಮ ಮಗಳಿಗೆ ಮೊದಲ ಹೆಜ್ಜೆಗಳನ್ನು ಇಡುವಂತೆ ಮಾಡಿದ್ದರಿಂದ ಆಲಿಯಾರ ಉತ್ಸಾಹ ಇಮ್ಮಡಿಗೊಂಡಿತ್ತು. ಅನಿಮಲ್ ಸಿನಿಮಾದಲ್ಲಿ ರಣಬೀರ್ ಅವರ ಅತ್ಯುತ್ತಮ ಅಭಿನಯಕ್ಕಾಗಿ ಅವರನ್ನು ಅಭಿನಂದಿಸುವ ಮೂಲಕ ಸಂತಸ ವ್ಯಕ್ತಪಡಿಸಿದರು.
ಅನಿಮಲ್ ಸಿನಿಮಾಕ್ಕೆ ಆಲಿಯಾ ಮತ್ತು ಅವರ ಕುಟುಂಬ ಮೆಚ್ಚುಗೆ ವ್ಯಕ್ತಪಡಿಸಿತು. ಈ ವೇಳೆ, ಸಿನಿಮಾದಲ್ಲಿನ ರಣಬೀರ್ ಪಾತ್ರವನ್ನು ಒಳಗೊಂಡ ಕಸ್ಟಮೈಸ್ ಮಾಡಿದ ಟಿ-ಶರ್ಟ್ ಧರಿಸಿದ್ದ ಆಲಿಯಾ ಎಲ್ಲರ ಗಮನ ಸೆಳೆದರು. ಅವರು ಸಿನಿಮಾವನ್ನು ವೀಕ್ಷಿಸಿ ಹೊರಡುವಾಗ ಮಾಧ್ಯಮದವರು ಸಿನಿಮಾ ಕುರಿತು ಅಭಿಪ್ರಾಯ ಕೇಳಿದಾಗ ಪ್ರತಿಕ್ರಿಯಿಸಿದ ಆಲಿಯಾ, ಅನಿಮಲ್ ಸಿನಿಮಾವನ್ನು ಖತರ್ನಾಕ್ ಎಂದು ಬಣ್ಣಿಸಿದರು.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ಟ್ರಿಪ್ಟಿ ಡಿಮ್ರಿ ಸೇರಿದಂತೆ ಹಲವಾರು ಬಣ್ಣ ಹಚ್ಚಿದ್ದಾರೆ. ಈ ಆ್ಯಕ್ಷನ್ -ಪ್ಯಾಕ್ಡ್ ಥ್ರಿಲ್ಲರ್ ಸಿನಿಮಾ ತಂದೆ-ಮಗನ ಸಂಬಂಧದ ಕುರಿತಾಗಿದೆ.
- " class="align-text-top noRightClick twitterSection" data="">
ಇದನ್ನೂ ಓದಿ: 'ಉಗ್ರಂ' ಸಿನಿಮಾ ಕಥೆಯಂತಿದೆ 'ಸಲಾರ್' ಟ್ರೇಲರ್ ಎಂದ ಪ್ರೇಕ್ಷಕರು
ಸ್ಯಾಮ್ ಬಹದ್ದೂರ್ ಕಲೆಕ್ಷನ್: ಮತ್ತೊಂದೆಡೆ, ಹಿಂದಿ ಭಾಷೆಯಲ್ಲಿ ತೆರೆಕಂಡಿರುವ ಸ್ಯಾಮ್ ಬಹದ್ದೂರ್ ಸಿನಿಮಾ ಮೊದಲ ದಿನವೇ 5.5 ಕೋಟಿ ರೂ. ಕಲೆಕ್ಷನ್ ಮಾಡಿದೆ. ರಣ್ಬೀರ್ ಕಪೂರ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರದೊಂದಿಗೆ ಕಠಿಣ ಸ್ಪರ್ಧೆ ಎದುರಿಸುತ್ತಿರುವ ವಿಕ್ಕಿ ಕೌಶಲ್ ಮುಖ್ಯಭೂಮಿಕೆಯ ಸಿನಿಮಾ ಎರಡನೇ ದಿನ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಕುಸಿತ ಕಾಣುವ ಸಾಧ್ಯತೆಗಳಿವೆ.