ನಟ ಅಕ್ಷಯ್ ಕುಮಾರ್ ಮತ್ತು ಮಾನುಷಿ ಚಿಲ್ಲರ್ ನಟನೆಯ ಬಹುನಿರೀಕ್ಷಿತ ' ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಬಿಡುಗಡೆಗೆ ರೆಡಿಯಿದೆ. ಈ ಚಿತ್ರ ರಿಲೀಸ್‌ಗೆ ಹತ್ತಿರ ಬರುತ್ತಿದ್ದಂತೆ ಅಕ್ಷಯ್ ಕುಮಾರ್ ಮತ್ತು ಚಿತ್ರತಂಡ ವಾರಾಣಸಿಗೆ ತೆರಳಿದ್ದಾರೆ. ಚಿತ್ರದ ಯಶಸ್ಸಿಗಾಗಿ ವಿಶೇಷ ಪೂಜೆ ಮಾಡಿದ್ದಾರೆ. ಈ ಕುರಿತು ಅಕ್ಷಯ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ವಾರಾಣಸಿಯ ಗಂಗಾನದಿಯಲ್ಲಿ ನಿರ್ಮಿಸಿರುವ ಘಾಟ್‌ನಲ್ಲಿ ಅಕ್ಷಯ್ ಕುಮಾರ್ ಮತ್ತು ಮಾನುಷಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಘಾಟ್ ಅನ್ನು ದೀಪಗಳಿಂದ ಅಲಂಕರಿಸಲಾಗಿತ್ತು. ಅಕ್ಷಯ್ ಕುಮಾರ್ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಹರಹರ ಮಹಾದೇವ್ ಎಂಬ ಘೋಷಣೆಯನ್ನು ಕೂಗುತ್ತಾ ನದಿಯಲ್ಲಿ ಸ್ನಾನ ಮಾಡುತ್ತಿರುವುದನ್ನು ನೋಡಬಹುದು.
ಅಕ್ಷಯ್ ಕುಮಾರ್ ಮತ್ತು ಮಾನುಷಿ ಚಿಲ್ಲರ್ ಇಬ್ಬರೂ ಫೋಟೋ ಕೆಳಗೆ 'ಹರ್ ಹರ್ ಮಹಾದೇವ್' ಎಂದು ಬರೆದಿದ್ದಾರೆ. ಜೊತೆಗೆ ತಮ್ಮ ಚಿತ್ರವನ್ನು ಮಿಸ್ ಮಾಡದೇ ನೋಡಿ ಎಂದು ಮನವಿ ಮಾಡಿದ್ದಾರೆ. ಜೂ.3 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಅಕ್ಷಯ್ ಮತ್ತು ಮಾನುಷಿ ಜತೆ ಸಂಜಯ್ ದತ್ ಮತ್ತು ಸೋನು ಸೂದ್ ಸಹ ನಟಿಸಿದ್ದಾರೆ.
ಇದನ್ನೂ ಓದಿ: 'ಪೃಥ್ವಿರಾಜ್' ಪೋಸ್ಟರ್ನಲ್ಲಿ ಅಕ್ಷಯ್ ಕುಮಾರ್ 30 ವರ್ಷದ ಸಿನಿ ಪಯಣ ಅನಾವರಣ