ETV Bharat / entertainment

OMG 2: ಬಾಲಿವುಡ್​ ಕಿಲಾಡಿಯ ಓಎಂಜಿ 2 ಟೀಸರ್ ಅನಾವರಣಕ್ಕೆ ದಿನ ನಿಗದಿ

author img

By

Published : Jul 9, 2023, 2:04 PM IST

ಓಎಂಜಿ 2 ಬಾಲಿವುಡ್​ ಕಿಲಾಡಿ ಅಕ್ಷಯ್​​ ಕುಮಾರ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ.

OMG 2 teaser release date
ಓಎಂಜಿ 2 ಟೀಸರ್

ಸಿನಿಮಾ ಯಶಸ್ಸಿನ ವಿಚಾರವಾಗಿ ಹಿನ್ನೆಡೆ ಕಂಡಿರುವ ಬಾಲಿವುಡ್​​ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ತಮ್ಮ ಮುಂದಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಓಎಂಜಿ 2 ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇಂದು ಬಾಲಿವುಡ್​ ಕಿಲಾಡಿ ಓಎಂಜಿ 2 ಟೀಸರ್ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ.

ಅಕ್ಷಯ್ ಕುಮಾರ್ ಮುಂಬರುವ OMG 2 ಟೀಸರ್ ಬಿಡುಗಡೆ ದಿನಾಂಕವನ್ನು ಒಂದು ಕುತೂಹಲಕಾರಿ ವಿಡಿಯೋದೊಂದಿಗೆ ಪ್ರಕಟಿಸಿದರು. ಅದರಲ್ಲಿ ಅವರು ಭಗವಾನ್ ಶಿವನಂತೆ ಕಾಣುತ್ತಾರೆ. ಅಕ್ಕಿ ನಟನೆಯ ಚಿತ್ರವು 2012ರಲ್ಲಿ ತೆರೆಕಂಡಿರುವ ಓ ಮೈ ಗಾಡ್ ಸಿನಿಮಾದ ಎರಡನೇ ಭಾಗ.

ಸಾಮಾಜಿಕ ಜಾಲತಾಣದಲ್ಲಿ ಓಎಂಜಿ 2 ಟೀಸರ್ ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದ ಕಿರು ವಿಡಿಯೋ ಸಹ ಹಂಚಿಕೊಂಡಿದ್ದಾರೆ. "11/07/2023, ಓಎಂಜಿ 2 ಟೀಸರ್​ ಜುಲೈ 11ರಂದು ಬಿಡುಗಡೆಯಾಗಲಿದೆ, ಸಿನಿಮಾ ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ" ಎಂದು ಬರೆದಿದ್ದಾರೆ. ವಿಡಿಯೋದಲ್ಲಿ ನಟ ಶಿವನ ವೇಷ ತೊಟ್ಟು, ಸ್ಲೋ ಮೋಷನ್​ನಲ್ಲಿ ನಡೆದು ಬರುತ್ತಿದ್ದು, "ಹರ್ ಹರ್ ಮಹಾದೇವ್" ಹಿನ್ನೆಲೆಯಲ್ಲಿ ಕೇಳಿ ಬರುತ್ತದೆ.

ಹಿಟ್ ಚಿತ್ರದ ಸೀಕ್ವೆಲ್ ಓ ಮೈ ಗಾಡ್ 2 ಈ ಸಾಲಿನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಅಕ್ಷಯ್ ಕುಮಾರ್ ಜೊತೆಗೆ ಯಾಮಿ ಗೌತಮ್ ಧರ್ ಮತ್ತು ಪಂಕಜ್ ತ್ರಿಪಾಠಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮೂಲ ಚಿತ್ರದ ಮುಂದುವರಿದ ಭಾಗ ಇದು. ಮೊದಲ ಭಾಗದಲ್ಲಿ ನಟ ಅಕ್ಷಯ್ ಕುಮಾರ್ ಶ್ರೀಕೃಷ್ಣನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಕಾಮಿಡಿ ಸಿನಿಮಾ ಕಂಜಿ ವಿರುಧ್ ಕಂಜಿ ಎಂಬ ಗುಜರಾತಿ ನಾಟಕವನ್ನು ಆಧರಿಸಿದೆ.

ಇದನ್ನೂ ಓದಿ: ಬ್ರೇಕ್‌ನ ನಂತರ ಸಿನಿಮಾ: ಮುಂಬೈ ಏರ್​​ಪೋರ್ಟ್​​ನಲ್ಲಿ ನಟಿ ಸಮಂತಾ ಕಂಡಿದ್ದು ಹೀಗೆ..

ಓ ಮೈ ಗಾಡ್ 2 ಸಿನಿಮಾಗೆ ಸ್ಪರ್ಧೆ ಏರ್ಪಡಲಿದೆ. ಏಕೆಂದರೆ ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಅಭಿನಯದ ಗದರ್ 2 ಕೂಡ ತೆರೆಕಾಣಲು ಸಜ್ಜಾಗಿದೆ. ಎರಡೂ ಚಿತ್ರಗಳು ಆಗಸ್ಟ್ 11 ರಂದು ತೆರೆಕಾಣಲಿದೆ. ಹಾಸ್ಯ ಮತ್ತು ಚಿಂತನಾಶೀಲ ಅಂಶಗಳ ಮಿಶ್ರಣದೊಂದಿಗೆ ಮೂಲ ಚಿತ್ರವು ಪ್ರೇಕ್ಷಕರ ಮನ ಗೆದ್ದಿದೆ. ಮುಂದಿನ ಭಾಗವು ಭಾರತದಲ್ಲಿ ಲೈಂಗಿಕ ಶಿಕ್ಷಣದ ಸುತ್ತ ಹೆಣೆದ ಮತ್ತೊಂದು ಮನರಂಜನಾತ್ಮಕ ಕಥೆಯನ್ನು ಹೇಳಲಿದೆ. ಒಟ್ಟಾರೆ ಸಿನಿಮಾ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ.

ಇದನ್ನೂ ಓದಿ: 'ರಾಜಕಾರಣಿಗಳ ಹೆಸರು ಹಾಳುಮಾಡುವ ಉದ್ದೇಶ ನನ್ನದಲ್ಲ': ನಟಿ ಕಾಜೋಲ್​ ಸ್ಪಷ್ಟನೆ

ಅಕ್ಷಯ್ ಅವರ ಕಾಮಿಡಿ ಸಿನಿಮಾ 'ಹೌಸ್‌ಫುಲ್' ನ ಐದನೇ ಭಾಗ ಕೂಡ ನಿಮ್ಮ ಮುಂದೆ ಬರಲಿದೆ. ಇತ್ತೀಚೆಗಷ್ಟೇ ಚಿತ್ರದ ಘೋಷಣೆ ಜೊತೆಗೆ ರಿಲೀಸ್​ ಡೇಟ್ ಅನ್ನೂ ಬಹಿರಂಗಪಡಿಸಿದ್ದಾರೆ. ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಈ ಸಿನಿಮಾದ ನಿರ್ದೇಶನ ಜವಾಬ್ದಾರಿ ತರುಣ್ ಮನ್ಸುಖಾನಿ ಅವರ ಮೇಲಿದೆ. 2024 ರ ದೀಪಾವಳಿ ಸಂದರ್ಭ ಹೌಸ್​ಫುಲ್​ 5 ತೆರೆಕಾಣಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.