ETV Bharat / entertainment

ಸಾಯಿಧರಮ್ ತೇಜ್ 'ವಿರೂಪಾಕ್ಷ'​​​ ಸಿನಿಮಾದಲ್ಲಿ ಕನ್ನಡದ ಸಂಗೀತ ನಿರ್ದೇಶಕನ ಕಮಾಲ್

ಸಾಯಿಧರಮ್ ತೇಜ್ ಅಭಿನಯದ ಪ್ಯಾನ್ ಇಂಡಿಯಾ 'ವಿರೂಪಾಕ್ಷ' ಸಿನಿಮಾಗೆ ಕನ್ನಡದ ಅಜನೀಶ್​ ಲೋಕನಾಥ್ ಅವರ​ ಸಂಗೀತವಿದೆ.

Kannada music director song in Virupaksha movie
ಸಾಯಿಧರಮ್ ತೇಜ್ 'ವಿರೂಪಾಕ್ಷ'​​​ ಸಿನಿಮಾ
author img

By

Published : Dec 14, 2022, 12:13 PM IST

ಕನ್ನಡ ಚಿತ್ರರಂಗ‌ ಅಲ್ಲದೇ ಸೌತ್ ಸಿನಿಮಾ‌ ರಂಗದಲ್ಲೀಗ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಜೋರಾಗಿದೆ. ಟಾಲಿವುಡ್​ನ ಸಾಯಿಧರಮ್ ತೇಜ್ ಅಭಿನಯದ ಪ್ಯಾನ್ ಇಂಡಿಯಾ ಮಿಸ್ಟಿಕ್ ಥ್ರಿಲ್ಲರ್ ಚಿತ್ರಕ್ಕೆ 'ವಿರೂಪಾಕ್ಷ' ಎಂಬ ಹೆಸರಿಡಲಾಗಿದ್ದು, ಟೈಟಲ್ ಗ್ಲಿಂಪ್ಸ್​​ ಬಿಡುಗಡೆ ಆಗಿದೆ. ಕನ್ನಡ ಚಿತ್ರರಂಗದ ಸೂಪರ್​ಹಿಟ್ ಹಾಡುಗಳ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ‌ ಕೊಟ್ಟಿದ್ದಾರೆ.

ಈ ಚಿತ್ರ 1990ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಕಾಡಿಗೆ ಅಂಟಿಕೊಂಡಿರುವ ಹಳ್ಳಿಯೊಂದರಲ್ಲಿ ಮೂಢನಂಬಿಕೆಗಳ ಹೆಸರಿನಲ್ಲಿ ನಡೆಯುವ ಕೆಲವು ವಿಲಕ್ಷಣ ಘಟನೆಗಳನ್ನು ನಾಯಕ ಹೇಗೆ ನಿಭಾಯಿಸುತ್ತಾನೆ ಎಂಬ ವಿಷಯವನ್ನು ಒಳಗೊಂಡಿದೆ. ಕಳೆದ ವರ್ಷ ಹೈದರಾಬಾದ್​ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಿಂದ ಚೇತರಿಸಿಕೊಂಡಿರುವ ಸಾಯಿಧರಮ್​ ತೇಜ್ ಈ ಚಿತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Kannada music director song in Virupaksha movie
ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್

ಈ ಚಿತ್ರವನ್ನು ಕಾರ್ತಿಕ್​ ದಂಡು ನಿರ್ದೇಶಿಸಿದ್ದು, ಶ್ಯಾಮ್​ ದತ್​ ಅವರ ಛಾಯಾಗ್ರಹಣ ಮತ್ತು ಕನ್ನಡದ ಅಜನೀಶ್​ ಲೋಕನಾಥ್​ ಸಂಗೀತವಿದೆ. ವಿರೂಪಾಕ್ಷ ಚಿತ್ರವನ್ನು ಸುಕುಮಾರ್ ರೈಟಿಂಗ್ಸ್ ಸಹಯೋಗದಲ್ಲಿ ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಎಲ್‌ಎಲ್‌ಪಿ ನಿರ್ಮಿಸುತ್ತಿದೆ. ಈ ಚಿತ್ರವನ್ನು ಖ್ಯಾತ ನಿರ್ಮಾಪಕ ಬಿ.ವಿ.ಎಸ್.ಎನ್. ಪ್ರಸಾದ್ ನಿರ್ಮಿಸಿದರೆ, ಬಾಪಿನೀಡು ಪ್ರಸ್ತುತಪಡಿಸಲಿದ್ದಾರೆ.

ಇದನ್ನೂ ಓದಿ: ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಧ್ವನಿಸುರುಳಿ ಬಿಡುಗಡೆ: ಚಿತ್ರಕ್ಕೆ ಸಾಥ್ ನೀಡಿದ ಚಿನ್ನಾರಿ ಮುತ್ತ ವಿಜಿ

ಬಹು ನಿರೀಕ್ಷಿತ ವಿರೂಪಾಕ್ಷ ಚಿತ್ರವು ಏಪ್ರಿಲ್ 21, 2023ರಂದು ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ಯಾನ್​ ಇಂಡಿಯಾ ಚಿತ್ರವಾಗಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.