ETV Bharat / entertainment

ಹಿಟ್ಲರ್ ಕಲ್ಯಾಣದ ಎಜೆ ಈಗ 'ಮಹಾನ್ ಕಲಾವಿದ' - dilip raj in Mahan kalavida

ಹಿಟ್ಲರ್ ಕಲ್ಯಾಣದ ಎಜೆ ಪಾತ್ರದ ನಟ ದಿಲೀಪ್ ರಾಜ್ 'ಮಹಾನ್ ಕಲಾವಿದ' ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

AJ of Hitler Kalyana acting in Mahan kalavida movie
ಹಿಟ್ಲರ್ ಕಲ್ಯಾಣದ ಎಜೆ ಈಗ 'ಮಹಾನ್ ಕಲಾವಿದ'
author img

By

Published : Sep 16, 2022, 4:59 PM IST

ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ನಟ ದಿಲೀಪ್ ರಾಜ್ ಈಗ ಕಿರುತೆರೆಯಲ್ಲೂ ಜನಪ್ರಿಯ. ಹಿಟ್ಲರ್ ಕಲ್ಯಾಣದ ಎಜೆ ಪಾತ್ರದ ಮೂಲಕ ಭಾರಿ ಮೆಚ್ಚುಗೆ ಪಡೆಯುತ್ತಿದ್ದಾರೆ. ಸದ್ಯ 'ಮಹಾನ್ ಕಲಾವಿದ' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ಹಿರಿಯ ಪತ್ರಕರ್ತರಾದ ದಿ.ಸುರೇಶ್ಚಂದ್ರ ಪುತ್ರ ಅಭಯ್ ಚಂದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.‌ ಇದು ಇವರ ಎರಡನೇ ನಿರ್ದೇಶನದ ಚಿತ್ರ. ಸಂಗೀತ ನಿರ್ದೇಶನದ ಜವಾಬ್ದಾರಿ ಕೂಡ ಅಭಯ್ ಚಂದ್ರ ಅವರದ್ದೇ. ಇತ್ತೀಚೆಗೆ ಈ 'ಮಹಾನ್ ಕಲಾವಿದ' ಚಿತ್ರದ ಕೆಲವು ವಿಷಯಗಳನ್ನು ಚಿತ್ರತಂಡ ಹಂಚಿಕೊಂಡಿದೆ.

ನಿರ್ದೇಶಕ ಅಭಯ್ ಚಂದ್ರ ಮಾತನಾಡಿ, ಈ ಕಥೆಯನ್ನು ಸಿದ್ಧಪಡಿಸಿಕೊಂಡು 'ಕಲಾವಿದ' ಅಂತ ಶೀರ್ಷಿಕೆಯಿಟ್ಟಿದ್ದೆ. ಈ ವಿಷಯವನ್ನು ನಟ ರವಿಚಂದ್ರನ್ ಸರ್​ಗೆ ತಿಳಿಸಿದೆ. ಧಾರಾಳವಾಗಿ ಈ ಶೀರ್ಷಿಕೆ ಇಡು. ಆದರೆ ಕೇವಲ ಕಲಾವಿದ ಅಂತ ಬೇಡ. ಏನಾದರೂ ಸೇರಿಸು ಎಂದಿದ್ದರು. ನಾನು 'ಮಹಾನ್ ಕಲಾವಿದ' ಅಂತ ಶೀರ್ಷಿಕೆ ಕೊಟ್ಟೆ.

ಕಲಾವಿದನೊಬ್ಬನ ಬದುಕು ಬವಣೆಗಳನ್ನು ತೋರಿಸುವ ಕಥಾಹಂದರ ಹೊಂದಿರುವ ಚಿತ್ರವಿದು. ನಾನು ಈ ಪಾತ್ರ ಬರೆಯಬೇಕಾದರೆ ದಿಲೀಪ್ ರಾಜ್ ಈ ಪಾತ್ರಕ್ಕೆ ಸೂಕ್ತ ಎಂದುಕೊಂಡಿದ್ದೆ.‌ ಇದೀಗ ಅವರೇ ಈ ಚಿತ್ರದ ನಾಯಕರಾದರು. ಜಾಹ್ನವಿ ರಾಯಲ ಹಾಗೂ ಪಲ್ಲವಿ ರಾಜು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದರು.

AJ of Hitler Kalyana acting in Mahan kalavida movie
'ಮಹಾನ್ ಕಲಾವಿದ' ಚಿತ್ರತಂಡ

ಇನ್ನು ನಟ ದಿಲೀಪ್ ರಾಜ್ ಮಾತನಾಡಿ, ಬಹಳ ದಿನಗಳ ನಂತರ ಮತ್ತೆ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ. ಅಭಯ್ ಚಂದ್ರ ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ. ಕಲಾವಿದ ಮಾಡುವ ನಟನೆ‌ ಮೊದಲು ನಿರ್ದೇಶಕರಿಗೆ ಮೆಚ್ಚುಗೆಯಾಗಬೇಕು. ನನ್ನ ನಟನೆ ಬಗ್ಗೆ ಮೊದಲು ಅಭಯ್ ಹೇಳಬೇಕು. ನಾನು ಸಹ ಈ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿರುವುದಾಗಿ ಹೇಳಿದರು. ಇನ್ನೂ ಈ ಚಿತ್ರದಲ್ಲಿ ದಿಲೀಪ್ ರಾಜ್ ಅವರ ಪತ್ನಿ ಪಾತ್ರ ಮಾಡುತ್ತಿರುವುದಾಗಿ ಜಾಹ್ನವಿ ರಾಯಲ ತಿಳಿಸಿದರು.

ಇದನ್ನೂ ಓದಿ: ಎಲ್ಲಾ ಟ್ರೋಲು ಸಿಕ್ಕಾಪಟ್ಟೆ ಕೊಲೆಸ್ಟ್ರಾಲು.. ಝೈದ್ ಖಾನ್ ಅಭಿನಯದ ಬನಾರಸ್ ಸಿನಿಮಾ ಸಾಂಗ್​ ರಿಲೀಸ್

ಮೂಲತಃ ಹಾಸನದವರಾದ ಭರತ್ ಬಿ ಗೌಡ ಈ ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ. ಕಿರಣ್ ಗಜ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಎರಡು ಹಂತಗಳಲ್ಲಿ ಮಹಾನ್ ಕಲಾವಿದ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಸದ್ಯದಲ್ಲೇ ಮಹಾನ್ ಕಲಾವಿದ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.