ETV Bharat / entertainment

'....ವಿದಾಯ, ಈಗ ಬೇರ್ಪಡುವ ಸಮಯ!': ರಾಜ್​ ಕುಂದ್ರಾ ಪೋಸ್ಟ್​​ ಹಿಂದಿರುವ ಉದ್ದೇಶವೇನು? - ಈಟಿವಿ ಭಾರತ ಕನ್ನಡ

ಉದ್ಯಮಿ ರಾಜ್ ಕುಂದ್ರಾ ಎಕ್ಸ್​​ನಲ್ಲಿ ತಾವು ಬೇರ್ಪಟ್ಟಿರುವುದಾಗಿ ಘೋಷಿಸಿದ್ದರು. ಆದರೆ ಇವರಿಂದಲ್ಲ.

After 'separation' post, Raj Kundra hints at 'next phase' of his journey
ಶಿಲ್ಪಾ ಶೆಟ್ಟಿ ಜೊತೆ ಬೇರ್ಪಟ್ಟಿದಲ್ಲ! ಹಾಗಿದ್ರೆ ರಾಜ್​ ಕುಂದ್ರಾ ಪೋಸ್ಟ್​​ ಹಿಂದಿರುವ ಉದ್ದೇಶವೇನು?
author img

By ETV Bharat Karnataka Team

Published : Oct 20, 2023, 6:24 PM IST

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್​ ಕುಂದ್ರಾ ಅವರ ಕೆಲವು ಗಂಟೆಗಳ ಹಿಂದಿನ ಪೋಸ್ಟ್​ ಭಾರಿ ಗೊಂದಲಕ್ಕೀಡು ಮಾಡಿತ್ತು. 'ನಾವು ಬೇರ್ಪಟ್ಟಿದ್ದೇವೆ. ಈ ಕಷ್ಟದ ಅವಧಿಯಲ್ಲಿ ನಮಗೆ ಸಮಯವನ್ನು ನೀಡುವಂತೆ ವಿನಂತಿಸುತ್ತೇವೆ' ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದರು. ಈ ಬರಹ ಸಾಕಷ್ಟು ವೈರಲ್​ ಆಗಿತ್ತು. ಅಲ್ಲದೇ, ರಾಜ್​ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿಗೆ ವಿಚ್ಛೇದನ ನೀಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಈ ಎಲ್ಲಾ ಗೊಂದಲಗಳಿಗೆ ರಾಜ್​ ಕುಂದ್ರಾ ಮತ್ತೊಂದು ಪೋಸ್ಟ್​ ಹಂಚಿಕೊಳ್ಳುವ ಮೂಲಕ ಉತ್ತರ ನೀಡಿದ್ದಾರೆ.

  • Farewell Masks …it’s time to separate now! Thank you for keeping me protected over the last two years. Onto the next phase of my journey #UT69 🙏🎭🥹 🧿😇❤️ pic.twitter.com/svhiGS8aHt

    — Raj Kundra (@onlyrajkundra) October 20, 2023 " class="align-text-top noRightClick twitterSection" data=" ">

ಕಳೆದ ಒಂದೂವರೆ ವರ್ಷದಿಂದ ಕಂಪ್ಲೀಟ್​ ಫೇಸ್​ ಮಾಸ್ಕ್ ಧರಿಸಿ ಓಡಾಡುತ್ತಿದ್ದ ಉದ್ಯಮಿ ರಾಜ್​ ಕುಂದ್ರಾ ಇದೀಗ ಮಾಸ್ಕ್ ಇಲ್ಲದೇ ಸಾರ್ವಜನಿಕರಿಗೆ ದರ್ಶನ ಕೊಟ್ಟಿದ್ದಾರೆ. ಇದೇ ಕುರಿತಾಗಿ ಅವರು 'ಬೇರ್ಪಟ್ಟಿದ್ದೇವೆ' ಎಂದು ಹೇಳಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. "ಮಾಸ್ಕ್​ಗೆ ವಿದಾಯ.. ಈಗ ಬೇರ್ಪಡುವ ಸಮಯ! ಕಳೆದ ಎರಡು ವರ್ಷಗಳಿಂದ ನನ್ನನ್ನು ರಕ್ಷಿಸಿದ್ದಕ್ಕಾಗಿ ಧನ್ಯವಾದಗಳು. ನನ್ನ ಪ್ರಯಾಣ ಮುಂದಿನ ಹಂತಕ್ಕೆ" ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ತಾವು ಬೇರ್ಪಡುತ್ತಿರುವುದು ಶಿಲ್ಪಾ ಶೆಟ್ಟಿ ಅವರಿಂದಲ್ಲ, ಬದಲಾಗಿ ಫೇಸ್​ ಮಾಸ್ಕ್​ನಿಂದ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಫೇಸ್​ ಮಾಸ್ಕ್​​ಗೆ ಗುಡ್​ ಬೈ: ಸಾರ್ವಜನಿಕರಿಗೆ ದರ್ಶನ ಕೊಟ್ಟ ರಾಜ್​​ ಕುಂದ್ರಾ.. ಶಿಲ್ಪಾ ಶೆಟ್ಟಿ ಪತಿಯ ವಿಡಿಯೋ ವೈರಲ್​

'ಬೇರ್ಪಡುವ' ಪೋಸ್ಟ್​ ಹಂಚಿಕೊಳ್ಳುತ್ತಿದ್ದಂತೆ, ರಾಜ್ ಕುಂದ್ರಾ ತಮ್ಮ ಫೇಸ್​ ಮಾಸ್ಕ್​​ನಿಂದ 'ಬೇರ್ಪಟ್ಟಿದ್ದಾರೆ' ಹೊರತು 'ಶಿಲ್ಪಾ' ಅವರಿಂದಲ್ಲ ಎಂದು ಕೆಲವರು ಎಕ್ಸ್​ನಲ್ಲಿ ರಾಜ್​ ಕುಂದ್ರಾ ಪೋಸ್ಟ್​ಗೆ ಕಾಮೆಂಟ್​​ ಮಾಡಿದ್ದರು. ಅದು ನಿಜವಾಗಿದೆ. ಇನ್ನೂ ಪತ್ನಿ ಶಿಲ್ಪಾ ಶೆಟ್ಟಿ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಹೀಗಾಗಿ ವಿಚ್ಛೇದನ ಅಲ್ಲ ಎಂದು ನೆಟ್ಟಿಗರು ಊಹಿಸಿದ್ದರು.

ಜೈಲುವಾಸದ ಅನುಭವ 'UT 69': 'UT 69' 2023ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. 2021ರ ಜುಲೈನಲ್ಲಿ ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಅವರು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಸರಿಸುಮಾರು ಎರಡು ತಿಂಗಳಿದ್ದರು. ಕಾನೂನು ಹೋರಾಟ ಎದುರಿಸಿದ ಬಳಿಕ, ರಾಜ್​​ ಅವರಿಗೆ ಜಾಮೀನು ಸಿಕ್ಕಿತು. ಅದಾಗ್ಯೂ, ರಾಜ್ ಅವರು ತಮ್ಮ ತಪ್ಪಿಲ್ಲದಿದ್ದರೂ ಈ ಪ್ರಕರಣದಲ್ಲಿ ಸಿಲುಕಿಕೊಂಡಿರುವುದಾಗಿ ಹೇಳಿಕೊಂಡು ಬಂದಿದ್ದಾರೆ.

ಅವರ ಕಾನೂನು ಹೋರಾಟದ ಅನುಭವಗಳ ಮೇಲೆಯೇ 'ಯುಟಿ69' ಚಿತ್ರ ನಿರ್ಮಾಣಗೊಂಡಿದೆ. 'UT 69'ರ ಟ್ರೇಲರ್​​​ ಅಕ್ಟೋಬರ್ 18 ರಂದು ಅನಾವರಣಗೊಂಡಿದೆ. ಚಿತ್ರದಲ್ಲಿ ರಾಜ್​ ಕುಂದ್ರಾ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾ ಅವರ ಕಾನೂನು ಹೋರಾಟ, ಜೈಲುವಾಸದ ಅನುಭವಗಳ ಸುತ್ತ ಕೇಂದ್ರೀಕೃತವಾಗಿದೆ. ನವೆಂಬರ್ 3 ರಂದು ಚಿತ್ರಮಂದಿರಗಳಲ್ಲಿ 'ಯುಟಿ 69' ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ - ರಾಜ್​ ಕುಂದ್ರಾ ನಡುವೆ ಬಿರುಕು ವದಂತಿ: ಸಿನಿಮಾ ಪ್ರಚಾರದ ಭಾಗವಾಗಿ ಟ್ವೀಟ್ ಮಾಡಿದ್ರಾ ಉದ್ಯಮಿ?!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.